ಮಗಳ ಅಂತ್ಯಸಂಸ್ಕಾರದ ಬಳಿಕ ಕೊಲೆ ಶಂಕೆ : ಶವ ಹೊರಕ್ಕೆ ತೆಗೆಸಿ ಶವಪರೀಕ್ಷೆ!

ಮಗಳು ಆಯತಪ್ಪಿ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದಳು ಎಂದು ಶವಸಂಸ್ಕಾರ ಮಾಡಿದ್ದ ಪೋಷಕರಿಗೆ ಅದೊಂದು ಪೋನ್ ಕರೆಯಿಂದ ಮಗಳನ್ನ ಕೊಲೆ ಮಾಡಿರೊ ಸಂಶಯ ವ್ಯಕ್ತವಾಗಿದೆ. ಇದಕ್ಕೆ ಪೊಲೀಸರಿಗೆ ದೂರು ನೀಡಿರೊ ಪೋಷಕರು, ಇದು ಸಹಜ ಸಾವಲ್ಲ ಎಂದು ಶವವನ್ನ ಹೊರಕ್ಕೆ ತೆಗೆಸಿ ಶವಪರೀಕ್ಷೆ ನಡೆಸಿದ್ರು.

ಈ ಪೋಟೋದಲ್ಲಿರೊ ಯುವತಿ ಹೆಸ್ರು ಲಕ್ಷ್ಮಿ. ಕಳೆದ ಮೂರು ದಿನಗಳ ಹಿಂದಷ್ಟೆ ಇಹಲೋಕ ತ್ಯಜಿಸಿರೊ ಯುವತಿಯ ಸಾವಿನ ಸುತ್ತ ಪೋಷಕರಿಗೆ ಅನುಮಾನ ಕಾಡತೊಡಗಿದೆ, ಕೋಲಾರ ತಾಲೂಕಿನ ಗೆದ್ದೆಕಣ್ನೂರು ಗ್ರಾಮದ ಮುನಿರತ್ಮಮ್ಮ ದೇವರಾಜು ದಂಪತಿಗಳ ಪುತ್ರಿ ಲಕ್ಷ್ಮಿ,, ಕೆಂಬೋಡಿ ಗ್ರಾಮದ ಜನತಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ಲು, ಕಳೆದ ಶನಿವಾರ ಕಾಲೇಜು ಮುಗಿಸಿ ಮನೆಗೆ ಬಂದ ನಂತರ ಒಮ್ಮೆ ಪೋಷಕರು ನೋಡಿದ್ದು ಮತ್ತೆ ಪತ್ತೆಯಾಗಿದ್ದು ಶವವಾಗಿ, ಹೌದು ಮನೆಎದುರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಲಕ್ಷ್ಮಿ ಅಂತ್ಯಸಂಸ್ಕಾರವನ್ನ ಅಂದು ಪೋಷಕರೇ ಗೋಳಾಡುತ್ತಾ ಮಾಡಿದ್ರು, ಮಗಳು ಆಯತಪ್ಪಿ ತೊಟ್ಟಿಯಲ್ಲಿ ಬಿದ್ದಳೆಂದು ಸಹಜ ಸಾವೆಂದು ಭಾವಿಸಿದ್ದ ಪೋಷಕರು ಈಗ ಇದು ಕೊಲೆ ಅಂತಿದ್ದಾರೆ.

ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿರೊ ಪೋಷಕರು ಮಗಳ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿದ್ರು, ಹೀಗಾಗಿ ಮನೆಎದುರೇ ತೋಟದಲ್ಲಿ ಹೂತಿಟ್ಟಿದ್ದ ಲಕ್ಷ್ಮೀ ಶವವನ್ನ, ಕೋಲಾರ ತಹಶೀಲ್ದಾರ್ ಶೋಬಿತಾ ಸಮ್ಮುಖದಲ್ಲಿ ಹೊರಕ್ಕೆ ತೆಗೆಸಿ ಸರ್ಕಾರಿ ವೈದ್ಯರ ತಂಡದಿಂದ ಶವಪರೀಕ್ಷೆಯನ್ನ ಸ್ತಳದಲ್ಲೆ ನಡೆಸಿದ್ರು.

ಇಷ್ಟಕ್ಕು ಪಿಯುಸಿ ವಿದ್ಯಾರ್ಥಿನಿ ಲಕ್ಷ್ಮಿ ಸಾವಿನ ಸುತ್ತ ಪೋಷಕರಿಗೆ ಅನುಮಾನ ಮೂಡಲು ಕಾರಣವನ್ನು ನೀಡಿದ್ದಾರೆ, ಶವಸಂಸ್ತಾರ ಮಾಡಿದ ಮರುದಿನ ಭಾನುವಾರ ಅಭಿ ಎನ್ನುವ ಯುವಕ ಪೋನ್ ಕರೆ ಮಾಡಿ ಲಕ್ಷ್ಮೀ ತೀರಿಕೊಂಡಿದ್ದಾಳಂತೆ ಹೌದಾ ಎಂದು ವಿಚಾರಿಸಿದ್ದಾನೆ, ನೀನ್ಯಾರು ಎಂದು ಕೇಳಿದಾಗ ಒಂದು ವರ್ಷದ ಹಿಂದೆ ನಾವಿಬ್ಬರು ಪ್ರೀತಿಸಿದ್ದಾಗಿ ಯುವಕ ಅಭಿ ಹೇಳಿದ್ದಾನಂತೆ, ಹೀಗಾಗಿ ಮಗಳನ್ನ ಯಾರೋ ಕೊಲೆ ಮಾಡಿದ್ದಾಗಿ ತಾಯಿ ಮುನಿರತ್ನಮ್ಮ ಆರೋಪಿಸಿದ್ದಾರೆ.

ಮನೆ ಎದುರಿನ ತೊಟ್ಟಿಯಲ್ಲಿ ಶವಪತ್ತೆಯಾಗಿದ್ದಾಗ ತೊಟ್ಟಿಯ ಕ್ಯಾಪ್ ಮುಚ್ಚಿತ್ತಂತೆ ಬದಲಾಗಿ ಮನೆಗೆ ಮೋಟಾರ್ ಅಳವಡಿಸಿದ್ದು ನೀರು ಸೇದುವ ಅವಶ್ಯಕತೆಯಿಲ್ಲ ಎಲ್ಲಕ್ಕಿಂತ ಮಿಗಿಲಾಗಿ ನೀರು ತೆಗೆದುಕೊಳ್ಳಲು ಯಾವುದೇ ಬಿಂದಿಗೆ ಬಕೆಟ್ ಸಹ ತೆಗೆದುಕೊಂಡು ಹೋಗಿಲ್ಲ ಹೀಗಾಗಿ ಯಾರೋ ಕೊಲೆ ಮಾಡಿದ್ದಾರೆಂದು ಯುವತಿ ಸಂಬಂದಿಕರು ಆರೋಪಿಸಿದ್ದಾರೆ, ಈ ಬಗ್ಗೆ ಮಾತನಾಡಿರುವ ಸಂಬಂದಿಕರು ಅಭಿ ಎನ್ನುವ ಹುಡುಗ ಪೋನ್ ಕರೆ ಮಾಡಿ ಮೊದಲು ತಿರುಪತಿ ಎಂದು ಹೇಳಿದ್ದ ಆದ್ರೆ ವಿಳಾಸ ವಿಚಾರಿಸಿದ್ರೆ ಕೋಲಾರ ನಗರ ಹೊರವಲಯದಲ್ಲಿಯೇ ಯುವಕ ಇದ್ದಾನೆ ಹೀಗಾಗಿ ಅನುಮಾನ ಸೃಷ್ಟಿಯಾಗಿದೆ ಎಂದು ತನಿಖೆಗೆ ಆಗ್ರಹಿಸಿದ್ದಾರೆ.

ಒಟ್ನಲ್ಲಿ ಮೂರು ದಿನದ ಹಿಂದೆ ಮಣ್ಣಲ್ಲಿ ಮಣ್ಣಾಗಿದ್ದ ಮಗಳ ಸಾವಿನ ಬಗ್ಗ ಪೋಷಕರಿಗೆ ಅನುಮಾನ ಉಂಟಾಗಿದ್ದು, ಇದಕ್ಕೆಲ್ಲಾ ಕಾರಣ ಯುವಕನೊಬ್ಬ ಮಾಡಿದ ಪೋನ್ ಕರೆ, ಲವ ಲವಿಕೆಯಿಂದ ಓಡಾಡ್ತಿದ್ದ ಮಗಳು ಮನೆ ಎದುರಿನ ತೊಟ್ಟಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದು ಪೋಷಕರು ಹೇಳ್ತಿದ್ದು ಅಚಾನಕ್ಕಾಗಿ ಬಿದ್ದಲ್ಲಿ ಮೇಲಿನ ಕ್ಯಾಪ್ ಹೇಗೆ ಹಾಕಿಕೊಳ್ಳೊಕೆ ಸಾಧ್ಯವೆಂಬ ಅನುಮಾನಗಳನ್ನ ಮುಂದಿಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ, ಸದ್ಯ ಮೃತಳ ಶವಪರೀಕ್ಷೆ ನಡೆಸಿರೊ ಸರ್ಕಾರಿ ವೈದ್ಯರ ತಂಡ ಮುಂದಿನ ವಾರ ವರದಿ ನೀಡಲಿದ್ದು ವಿದ್ಯಾರ್ಥಿನಿ ಸಾವು ಕೊಲೆಯೂ ಅಥವಾ ಸಹಜ ಸಾವೋ ಎಂಬ ಸತ್ಯ ಹೊರಬೀಳಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights