Cricket : BCCI ಸುನೀಲ್ ಜೋಶಿಗೆ ಒಲಿದ ಆಯ್ಕೆ ಸಮಿತಿ ಅಧ್ಯಕ್ಷ ಪಟ್ಟ…. !
ಮುಂಬೈ: ಮಾಜಿ ಆಫ್ ಸ್ಪಿನ್ನರ್ ಸುನೀಲ್ ಜೋಶಿ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಮದನ್ ಲಾಲ್ ನೇತೃತ್ವದ ತ್ರಿಸದಸ್ಯ ಕ್ರಿಕೆಟ್ ಸಮಿತಿಯ ಶಿಫಾರಸಿನ ಮೇರೆಗೆ ಜೋಶಿ ಪ್ರಧಾನ ಆಯ್ಕೆದಾರನ ಸ್ಥಾನ ಅಲಂಕರಿಸಲಿದ್ದಾರೆ.

ಕರ್ನಾಟಕದ ಹೆಮ್ಮಯ ಕ್ರಿಕೆಟಿಗ ಜೋಶಿ ಈ ಹಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಸಹ ಕೆಲಸ ಮಾಡಿದ್ದಾರೆ. ಜೋಶಿ ಜೊತೆಗೆ ತೆರವಾಗಿರುವ ಮತ್ತೊಂದು ಸ್ಥಾನಕ್ಕೆ ಹರ್ವೀಂರ್ ಸಿಂಗ್ ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಸೇರಿದಂತೆ ಐವರನ್ನು ಕ್ರಿಕೆಟ್ ಸಮಿತಿ ಸಂದರ್ಶಿಸಿತು.

ಜೋಶೀ ಮತ್ತು ಹರ್ವೀಂದರ್ ಅಲ್ಲದೇ ವೆಂಕಟೇಶ್ ಪ್ರಸಾದ್, ಎಲ್ ಶಿವರಾಮಕೃಷ್ಣನ್, ರಾಜೇಶ್ ಚೌಹಾಣ್ ಸಹ ರೇಸ್ನಲ್ಲಿದ್ದರು.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಹೊಸ ಸರಣಿಗೆ ಸುನೀಲಕ್ ಜೋಶಿ ನಾಯಕತ್ವದ ಆಯ್ಕೆ ಸಮಿತಿ ಇದೀಗ ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡಬೇಕಿದೆ.

