ಸರ್ಕಾರಿ ಅತಿಥಿ ಗೃಹದಲ್ಲಿ ಬರ್ತ್ ಡೇ ಪಾರ್ಟಿ : ಕ್ರಮ ಕೈಗೊಳ್ಳದೇ ಅಧಿಕಾರಿಗಳು ಮೌನ..
ಬೆಳಗಾವಿ ಸರ್ಕಾರಿ ಅತಿಥಿ ಗೃಹದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಬರ್ತ್ ಡೇ ಪಾರ್ಟಿ ಮಾಡಿ, ಸಂಭ್ರಮಿಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ನಿನ್ನೆ ಬಿಜೆಪಿ ಕಾರ್ಯಕರ್ತೆ ಪ್ರೇಮಾ ಭಂಡಾರಿ ಅವರ ಹುಟ್ಟುಹಬ್ಬವಿತ್ತು. ಲೋಕೋಪಯೋಗಿ ಇಲಾಖೆಯ ಬೆಳಗಾವಿ ಸರ್ಕೀಟ್ ಹೌಸ್ ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಸವಿತಾ ಗುಡ್ಡಾಕಾಯಿ, ಲಿನಾ ಟೋಪಣ್ಣವರ್, ಮಾಜಿ ಅಧ್ಯಕ್ಷೆ ಉಜ್ವಲಾ ಬಡವಣಾಚೆ ಸೇರಿ ಅನೇಕರು ಭಾಗಿಯಾಗಿದ್ದರು.


ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತೆಯರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸರ್ಕಾರಿ ಅತಿಥಿ ಗೃಹದಲ್ಲಿ ಹುಟ್ಟ ಹಬ್ಬದ ಆಚರಣೆಗೆ ಅನುಮತಿ ಕೊಟ್ಟವರು ಯಾರು? ಮಾಹಿತಿ ಇದ್ರುಅಧಿಕಾರಿಗಳು ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದು ವಿರೋಧಕ್ಕೆ ಕಾರಣವಾಗಿದೆ.

