ಹೋಳಿಗೂ ಕೊರೊನಾ ಭೀತಿ : ಹಬ್ಬದಲ್ಲಿ ಹಣ್ಣು, ಅರಿಶಿಣದ ಬಣ್ಣ ಬಳಕೆ
ದೇಶದೆಲ್ಲೆಡೆ ಹೋಳಿ ಹಬ್ಬದ ಪ್ರಯುಕ್ತ ರಾಜ್ಯದಲ್ಲಿ ಕೆಲವೆಡೆ ಜನ ಜಾಣ್ಮೆಯಿಂದ ರಾಸಾಯನಿಕವಲ್ಲದ ಬಣ್ಣ ಬಳಕೆ ಮಾಡುವುದರ ಮೂಲಕ ಸಾಂಪ್ರದಾಯಿಕ ಹಬ್ಬವನ್ನು ಆಚರಿಸಿ ಗಮನ ಸೆಳೆದಿದ್ದಾರೆ.
ಇಂದು ದೇಶಾದ್ಯಂತ ಹೋಳಿ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಬೇಕಿತ್ತು. ವಿಭಿನ್ನ ಬಣ್ಣವನ್ನು ಪರಸ್ಪರ ಮೈಗೆರೆಚಿಕೊಂಡು ಸಂಭ್ರಮಿಸುವುದರಲ್ಲಿರುವ ಆತ್ಮೀಯತೆ ಖುಷಿನೇ ಬೇರೆ. ಆದರೆ ಕೊರೊನಾ ಎಂಬ ಸೋಂಕಿಗೆ ಹೆದರಿ ಜನ ಹೋಳಿ ಆಚರಣೆಗೆ ಕೆಲವೆಡೆ ಬ್ರೇಕ್ ಹಾಕಿದ್ರೂ ಇನ್ನೂ ಕೆಲವರು ಜಾಣತನದಿಂದ ರಾಸಾಯನಿಕವಲ್ಲದ ಬಣ್ಣ ಬಳಸಿ ಹಬ್ಬ ಆಚರಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.
ಹೌದು.. ವರ್ಷಕ್ಕೊಮ್ಮೆ ಬರುವ ಹಬ್ಬವನ್ನ ಆಚರಿಸಬೇಕು. ಆಚರಿಸುವು ಮಾತ್ರವಲ್ಲ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದನ್ನ ಯೋಚಿಸಿದ ಧಾರವಾಡದ ಮುರುಘಾಟದ ನಗರದ ಮಹಿಳೆಯರು, ಯುವಕ, ಯುವತಿಯರು ಮನೆಯಲ್ಲೇ ಸಿಗುವ ಅರಿಶಿಣವನ್ನು ಬಳಕೆ ಮಾಡಿ ಬಣ್ಣ ಆಡಿ ಪರಸ್ಪರ ಶುಭಾಶಯ ಕೋರಿದ್ದಾರೆ. ಕೋರೋನಾ ವೈರಸ್ ಭೀತಿಯಲ್ಲಿ ಔಷಧಿ ಗುಣವುಳ್ಳ ಅರಶಿನ ಬಳಸಿ ಬಣ್ಣದಾಟ ಆಡಿದ್ದಾರೆ ಗ್ರಾಮದ ನಿವಾಸಿಗಳು.
ಇನ್ನೂ ಇದೇ ರೀತಿ ಹಣ್ಣುಗಳನ್ನ ಬಳಸಿ ದಾವಣಗೆರೆಯಲ್ಲಿ ಮಹಿಳೆಯರು ಹೋಳಿ ಸಂಭ್ರಮಿಸಿದ್ದಾರೆ. ನಗರದ ಎಂ ಸಿ ಸಿ ಬ್ಲಾಕ್ ನಲ್ಲಿ ನೈಸರ್ಗಿಕವಾದ ಹಣ್ಣು ತರಕಾರಿಗಳಿಂದ ತಯಾರಿಸಿದ ಬಣ್ಣ ಹಚ್ಚಿಕೊಂಡು ಹೋಳಿ ಆಚರಿಸಲಾಗಿದೆ. ಇಂಥಹ ಬಣ್ಣ ಹಚ್ಚಿಕೊಂಡು ಮಹಿಳೆಯರು ಸಾಮೂಕ ನೃತ್ಯ ಮಾಡಿದ ವಿಡಿಯೋ ಸದ್ಯ ವೈರಲ್ ಆಗಿದೆ.
ದೇಶದಲ್ಲೇ ಕಲ್ಕತ್ತಾ ಬಿಟ್ಟರೆ ಅತಿ ಹೆಚ್ಚು ಹೋಳಿ ಬಣ್ಣ ಆಡುವ ನಗರ ಎಂಬ ಹೆಗ್ಗಳಿಕೆ ಹೊಂದಿರೋ ಬಾಗಲಕೋಟೆ ನಗರದಲ್ಲಿ ಇಂದಿನಿಂದ ಮಕ್ಕಳು ಯ,ಯುವಕರು, ಯುವತಿಯರಿಂದ ಭಜ೯ರಿ ಹೋಳಿ ಬಣ್ಣದಾಟ ಶುರುವಾಗಿದೆ. ಮಕ್ಕಳು ಪರಸ್ಪರ ಬಣ್ಣದ ನೀರು ಎರಚಿ ಎಂಜಾಯ್ ಮಾಡ್ತಿದ್ದಾರೆ.
ಗಂಡು ಹೆಣ್ಣು ಎಂಬ ಭೇದಭಾವ ಇಲ್ಲದೆ ಬಾಯಿ ಬಾಯಿ ಬಡಿದುಕೊಂಡು ಬಣ್ಣದಾಟದಲ್ಲಿ ಇಂದಿನಿಂದ ನಿರಂತರ ಮೂರು ದಿನಗಳ ಕಾಲ ಮಿಂದೇಳಲಿದ್ದಾರೆ.

