ಕೇಂದ್ರ ಸಚಿವರ ‘ಗೋ ಕೊರೋನಾ’ ಮಂತ್ರ; ವಿಡಿಯೋ ವೈರಲ್‌

ಸಾಮಾನ್ಯವಾಗಿ ದಕ್ಷಿಣ ಭಾರತದ ಜನರಿಗೆ ಅಯ್ಯಪ್ಪ ಸ್ವಾಮಿಯ ಭಜನೆ ಚಿರಪರಿತ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅಯ್ಯಪ್ಪ ಮಾಲೆಯನ್ನು ಧರಿಸಿದ ಮಾಲಾಧಾರಿಗಳು ಬೆಳಗ್ಗಿನ ಜಾವ ಐದ ಗಂಟೆಯಿಂದ ಹಿಡಿದು ರಾತ್ರಿ ಮಲಗುವ ವರೆಗೆ ವಿವಿಧ ಸಮಯಗಳ್ಳಿ “ಸ್ವಾಮಿಯೇ ಅಯ್ಯಪ್ಪ” ಎಂದು ಭಜನೆ ಮಾಡುವುದು ನಡೆಯುತ್ತಲೇ ಇರುತ್ತದೆ.

ಸಂಕ್ರಾಂತಿ ಹಬ್ಬ ಮುಗಿದ ಬೆನ್ನಲ್ಲೇ ಕೇಂದ್ರ ಸಚಿವ ರಾಮದಾಸ್‌ ಅಥಾವಾಲೆಯವರು ಮುಂಬೈನಲ್ಲಿ ಅಯ್ಯಪ್ಪನ ಭಜಯನ್ನ ರಿಮೇಕ್‌ ಮಾಡಿ ಹೊಸದೊಂದು ಭಜನೆಯನ್ನು ಬರೆದಿದ್ದು, ಈಗದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಚೀನಾದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಪತ್ತೆಯಾದ ಕೊರೋನಾ ವೈರಸ್‌ಗೆ ಫೆಬ್ರವರಿ ಅಂತ್ಯದ ವೇಳೆಗೆ 4,092 ಜನರು ಜಗತ್ತಿನಲ್ಲಿ ಬಲಿಯಾಗಿದ್ದಾರೆ. ಭಾರತದಲ್ಲಿಯೂ 54 ಜನರಿಗೆ ಸೋಂಕು ತಗುಲಿರುವುದಾಗಿ ಪತ್ತೆಯಾಗಿದೆ. ಇದನ್ನೇ ಶಿವರಾಜ್‌ ಕುಮಾರ್ ಅಭಿನಯದ ‘ಕಿಲ್ಲಿಂಗ್‌ ವೀರಪ್ಪನ್‌’ ಸಿನಿಮಾದ ಟೈಟಲ್‌ ಅನ್ನು “ಕಿಲ್ಲರ್‌ ಕೊರೋನಾ” ಎಂದು ಬದಲಾಯಿಸಿಕೊಂಡು ಭಯ-ಭೀತಿಯನ್ನು ಮಾಧ್ಯಮಗಳು ಜನರಲ್ಲಿ ಬಿತ್ತುತ್ತಿವೆ. ಇದನ್ನೇ ಎನ್‌ಕ್ಯಾಚ್‌ ಮಾಡಿಕೊಂಡಿರುವ ಮಾಸ್ಕ್‌ ಮಾರಾಟಗಾರರು ಹತ್ತು-ಹದಿನೈದು ಪಟ್ಟು ಬೆಲೆ ಏರಿಸಿ ಬೇಜು ತುಂಬಿಕೊಳ್ಳುತ್ತಿದ್ದಾರೆ. ಇಂತಹ ಭಯದ ವಾತಾವರಣದಲ್ಲಿ ಸಚಿವ ರಾಮದಾಸ್‌ ಅಥಾವಾಲೆ ‘ಗೋ ಕೊರೋನಾ’ ಮಂತ್ರ ಜಪಿಸಿ ಜನರಿಗೆ ಮನರಂಜನೆ ನೀಡಿದ್ದಾರೆ.

https://twitter.com/santoshspeed/status/1237471415516852224?ref_src=twsrc%5Etfw%7Ctwcamp%5Etweetembed%7Ctwterm%5E1237471415516852224&ref_url=https%3A%2F%2Fwww.ndtv.com%2Findia-news%2Fwatch-union-minister-chants-go-corona-at-prayer-meet-in-mumbai-2192898

ಫೆಬ್ರವರಿ 20ರಂದು ಮುಂಬೈನ ಗೇಟ್‌ವೇ ಆಫ್‌ ಇಂಡಿಯಾ ಬಳಿ ಆಯೋಜಿದ್ದ ಪ್ರಾರ್ಥನಾ ಸಭೆಯಲ್ಲಿ ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಮತ್ತು ಬೌದ್ಧ ಸನ್ಯಾಸಿಗಳು ‘ಗೋ ಕರೋನಾ, ಗೋ ಕರೋನಾ’ ಎಂದು ಜಪಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights