OMG : ಕೊರೊನಾ ವೈರಸ್ ದೇಹ ಹೊಕ್ಕರೆ ಮಾಡುವ ಅಪಾಯಕಾರಿ ಕೆಲಸವೇನು ಗೊತ್ತಾ..?

ಇವತ್ತು ಇಡೀ ವಿಶ್ವವೇ ತಲ್ಲಣಗೊಂಡು ನಿಶಬ್ದವಾಗಿದೆ ಅಂದ್ರೆ ಅದು ಕಣ್ಣಿಗೆ ಕಾಣದ ಕೊರೊನಾ ವೈರಸ್ ನಿಂದ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಮಾತು ಈ ವೈರಸ್ ಗೆ ತುಂಬಾನೇ ಹೋಲಿಕೆಯಾಗುತ್ತೆ. ಅಷ್ಟಕ್ಕೂ ಈ ಕಣ್ಣಿಗೆ ಕಾಣದ ವೈರಸ್ ಮಾಡುವ ಅಪಾಯಕಾರಿ ಕೆಲಸದ ಬಗ್ಗೆ ನೀವು ತಿಳಿದ್ರೆ ಬೆಚ್ಚಿ ಬೀಳ್ತೀರಾ.

ಹೌದು… ವಿಶ್ವದ ಜನ ಆತಂಕಕ್ಕೆ ಒಳಗಾಗಿರುವುದು, ಮನೆಯಲ್ಲೇ ಬಂಧಿಯಾಗಿರುವುದು, ರಾಜ್ಯ ಹಾಗೂ ವಿವಿಧ ರಾಜ್ಯಗಳು ಲಾಕ್ ಡೌನ್ ಆಗಿರುವುದು ಈ ಮಹಾಮಾರಿ ಕೊರೊನಾ ವೈರಸ್ ನಿಂದ. ದೃಷ್ಟಿಗೆ ನಿಲುಕದ ಈ ವೈರಸ್ ಸೃಷ್ಟಿಸಿದ ಭೀತಿ ನಿಜಕ್ಕೂ ರೋಚಕ. ಮನುಷ್ಯನ ದೇಹವನ್ನು ಸೇರಲು ಕಾಯುವ ವೈರಸ್ ದೇಹ ಸೇರಿದ ಮೇಲೆ ಮಾಡುವ ಕಾರ್ಯ ಮಾತ್ರ ಅಘಾದವನ್ನುಂಟು ಮಾಡುತ್ತೆ. ಮನುಷ್ಯನ ದೇಹ ಸೇರುವ ಈ ಒಂದು ವೈರಾಣು ದೇಹ ಸೇರಿದ ಬಳಿಕ ಬರೊಬ್ಬರಿ 10,000 ವೈರಸ್ ಗಳನ್ನು ಸೃಷ್ಟಿ ಮಾಡುತ್ತಂತೆ. ಅದಾಗಿ ಕೆಲವೇ ದಿನಗಳಲ್ಲಿ ಸೋಂಕಿತ ವ್ಯಕ್ತಿಯ ದೇಹದಲ್ಲಿರುವ ರಕ್ತದಲ್ಲಿ ಈ ವೈರಸ್​ ಲಕ್ಷಾಂತರ ವೈರಸ್​ಗಳಾಗಿ ಪರಿವರ್ತನೆಯಾಗುತ್ತದೆ. ಆ ವೇಳೆ ಸೋಂಕಿತನ ದೇಹದಲ್ಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳು ಶುರುವಾಗುತ್ತವೆ. ಈ ವೈರಸ್​ ದೇಹದಲ್ಲಿನ ಬಿಳಿ ರಕ್ತಕಣಗಳನ್ನು ನಾಶ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಮತ್ತೊಂದು ವಿಚಾರ ಅಂದರೆ ಕಳೆದ 100 ವರ್ಷಗಳಲ್ಲಿ ಕಾಣಿಸಿಕೊಂಡ ವೈರಸ್​ಗಳಲ್ಲಿ ಕೊರೋನಾ ವೈರಸ್​ ಅತ್ಯಂತ ಅಪಾಯಕಾರಿಯಾಗಿದೆ. ಈ ವೈರಸ್ ಅದೆಷ್ಟು ಅಪಾಯಕಾರಿ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಕೊರೊನಾ ಹರಡಿದ ವ್ಯಕ್ತಿಯಲ್ಲಿ ಕೊಮ್ಮು, ನಗಡಿ, ಜ್ವರ , ತಲೆನೋವು ಕಾಣಿಸಿಕೊಳ್ಳಬಹುದು ಕಾಣಿಸಿಕೊಳ್ಳದೇ ಇರಬಹುದು. ಈ ವೈರಸ್ ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಈ ವೇಳೆ ಪ್ರಾಣಕ್ಕೆ ನೋಗ್ಯಾರೆಂಟಿ. ಹೀಗಾಗಿ ಶಂಕಿತರೂ ಕೂಡ ಸಾಮಾನ್ಯರಂತೆ ಕಾಣುವ ಸಾಧ್ಯತೆ ಇರುತ್ತದೆ ಎನ್ನಲಾಗುತ್ತಿದೆ.

ವೈದ್ಯಕೀಯ ವರದಿ ಪ್ರಕಾರ, ಆದಷ್ಟು ಜನ ಲವಲವಿಕೆಯಿಂದ ಕೆಲಸ ಕಾರ್ಯದಲ್ಲಿ ತಲ್ಲೀನರಾಗಿರಬೇಕು. ಯಾವುದೇ ಕೆಲಸವಿಲ್ಲದೇ ಕುಳಿತುಕೊಳ್ಳುವವರಲ್ಲಿ ಸೋಂಕು ಬಹುಬೇಗ ಹರಡುವುದು ಕಂಡುಬರುತ್ತದೆಯಂತೆ. ಹೀಗಾಗಿ ಹೊರಗಡೆ ಗುಂಪು ಗುಂಪಾಗಿ ಓಡಾಡದೇ ಮನೆಯಲ್ಲೇ ಸಾಧ್ಯವಾದಷ್ಟು ಕೆಲಸ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights