ಫ್ಯಾಕ್ಟ್‌ಚೆಕ್ : ಗಲ್ಫ್ ನ್ಯೂಸ್ ಪತ್ರಿಕೆ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆದಿದೆಯೇ?
ಭಾರತದಲ್ಲಿ ಮಾತ್ರವಲ್ಲ ಶ್ರೀಯುತರನ್ನು ವಿದೇಶದಲ್ಲೂ ಅದೇ ಹೆಸರಿನಿಂದ ಕರೆಯುತ್ತಾರೆ ಎಂದು ಪ್ರತಿಪಾದಿಸಿ ರಾಹುಲ್ ಗಾಂಧಿಯವರ ವ್ಯಂಗ್ಯ ಚಿತ್ರವಿರುವ ಗಲ್ಫ್ ನ್ಯೂಸ್ ಎಂಬ ಸುದ್ದಿ ಪತ್ರಿಕೆಯೊಂದರ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ ‘ಪಪ್ಪು’ ಎಂದು ಕರೆದಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.
ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಿದ್ದು ಯಾತ್ರೆಯು ಮಣಿಪುರದಿಂದ ಪ್ರಾರಂಭವಾಗಿದೆ. ಕಾಂಗ್ರೆಸ್‌ನ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳಲ್ಲಿ ಹಾದುಹೋಗಲಿದೆ. ಈ ಅವಧಿಯಲ್ಲಿ, ಒಟ್ಟು 6,713 ಕಿಲೋಮೀಟರ್ ದೂರವನ್ನು ಬಸ್ ಮತ್ತು ಕಾಲ್ನಡಿಗೆಯಲ್ಲಿ ಕ್ರಮಿಸಲಾಗುವುದು ಮತ್ತು ಇದು ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ರಾಹುಲ್ ಅವರಿಗೆ ಪಪ್ಪು ಹೆಸರಿನಿಂದ ಕರೆಯಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಿದಾಗ, ರಾಹುಲ್ ಅವರ ಚಿತ್ರದ ಕೆಳಗೆ “How Pappu label” ಎಂದ ಬರೆದಿರುವುದನ್ನು ಕಾಣಬಹುದಾಗಿದೆ. ಇದನ್ನೆ ಕೀವರ್ಡ್ ರೀತಿ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಗಲ್ಫ್ ನ್ಯೂಸ್ ಮಾಧ್ಯಮದಲ್ಲಿ ಪ್ರಸಾರ ಮಾಡಲಾದ ವರದಿಯೊಂದು ಲಭ್ಯವಾಗಿದೆ.
ಗಲ್ಫ್ ನ್ಯೂಸ್ ನಲ್ಲಿ ಪ್ರಸಾರವಾಗಿರುವ ವರದಿಯ ಪ್ರಕಾರ, ಗಲ್ಫ್ ನ್ಯೂಸ್ ರಾಹುಲ್ ಗಾಂಧಿಯವರನ್ನು ಪಪ್ಪು ಎಂದಿದೆ ಎಂಬ ಸುಳ್ಳು ಸುದ್ದಿಯನ್ನು ಭಾರತದ ಮೂಲದ ಫ್ಯಾಕ್ಟ್‌ಚೆಕ್ ಮಾಧ್ಯವು ಸುದ್ದಿಯನ್ನು ಭಿತ್ತರಿಸಿ ಗಲ್ಫ್ ನ್ಯೂಸ್ ರಾಹುಲಾ ಗಾಂಧಿಯನ್ನು ಪಪ್ಪು ಎಂದಿದೆ ಎಂದು ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂಬುದನ್ನು ಸ್ವತಃ ಅದೇ ಪತ್ರಿಕೆ ವರದಿ ಮಾಡಿದೆ.
ಇದೇ ವರದಿಯಲ್ಲಿ ಗಲ್ಫ್ ನ್ಯೂಸ್ ಜನವರಿ 8, 2019ರಂದು ಮಾಡಿದ ರಾಹುಲ್ ಗಾಂಧಿಯವರ ಸಂದರ್ಶನವನ್ನು ಲಭ್ಯವಾಗಿದೆ. ಇದೇ ಸಂದರ್ಶನವನ್ನು ಗಲ್ಫ್ ನ್ಯೂಸ್ ಪತ್ರಿಕೆಯ ಮುಖ ಪುಟದಲ್ಲಿ ರಾಹುಲ್ ಗಾಂಧಿಯವರ ಕಾರ್ಟೂನ್ ಜೊತೆಗೆ ಪ್ರಸಾರ ಮಾಡಿದೆ ಎಂದು ಉಲ್ಲೇಖಿಸಲಾಗಿದೆ.

ಗಲ್ಫ್ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ರಾಹುಲ್ ಗಾಂಧಿಯವರನ್ನು ಭಾರತದಲ್ಲಿ ಅವರನ್ನು ಕೆಲವರು ಪಪ್ಪು ಎಂದು ಕರೆಯುತ್ತಾರಲ್ಲ ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಸಿರುವ ರಾಹುಲ್ ಗಾಂಧಿ “ಇದು 2014ರಲ್ಲಿ ನಾನು ಸ್ವೀಕರಿಸಿದ ಅತ್ಯುತ್ತಮ ಉಡುಗೊರೆ. ನಾನು ಬೇರೆ ಯಾವುದರಿಂದಲೂ ಕಲಿಯಲು ಸಾಧ್ಯವಾಗದಷ್ಟು ಅದರಿಂದ ಕಲಿತಿದ್ದೇನೆ. ನನ್ನ ವಿರೋಧಿಗಳು ನನ್ನ ಜೀವನವನ್ನು ಹೆಚ್ಚು ಕಷ್ಟಕರವಾಗಿಸಿದಷ್ಟೂ ನನಗೆ ಅದು ಉತ್ತಮವಾಗುತ್ತದೆ. ಪಪ್ಪು ಎಂದರೆ ನಾನು ವಿಚಲಿತನಾಗುವುದಿಲ್ಲ. ನನ್ನ ವಿರೋಧಿಗಳ ದಾಳಿಯನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಅವರಿಂದ ನಾನು ಕಲಿಯುತ್ತೇನೆ.” ಎಂದು ರಾಹುಲ್ ಗಾಂಧಿ ಹೇಳಿರುವುದನ್ನು ಸ್ಪಷ್ಟವಾಗಿದೆ.
Good morning. Our #frontpage stories today: EU sanctions Iran over murder plots; How 'pappu' label changed Rahul Gandhi; Trump downgrades EU diplomatic status. January 9, 2019 https://t.co/80YdQLJRMy pic.twitter.com/4RY9D6CpWX
— Gulf News (@gulf_news) January 9, 2019
ಪತ್ರಿಕೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಅದರಲ್ಲಿ “How pappu lable has changed Rahul” ಎಂದು ಕ್ಯಾಪ್ಷನ್ ನೀಡಿ ವರದಿ ಮಾಡಿರುವುದನ್ನು ಗಮನಿಸಬಹುದು. ಗಲ್ಭ್ ನ್ಯೂಸ್ ಟ್ವೀಟ್ ಅನ್ನೂ ನೋಡಬಹುದು. ಇದರಲ್ಲಿ ಇಡೀ ಪತ್ರಿಕೆಯ ಫೋಟೋವನ್ನು ಹಾಕಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಗಲ್ಫ್ ನ್ಯೂಸ್ ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಕರೆದಿಲ್ಲ, ಪಪ್ಪು ಎಂದು ಹೀಗಳೆಯುತ್ತಿದ್ದವರ ನಡುವೆ ರಾಹುಲ್ ಗಾಂಧಿಯಾಗಿ ಅದನ್ನು ಸ್ವೀಕರಿಸಿದ ರೀತಿಯನ್ನು ವಿವರಿಸಲಾಗಿದೆ. ಇದನ್ನೆ “How pappu lable has changed Rahul” ಎಂಬ ಹೆಡ್ಡಿಂಗ್ ನೀಡಿ ವರದಿಯನ್ನು ಪ್ರಕಟಿಸಲಾಗಿದೆ. ಈ ಶೀರ್ಷಿಕೆಯನ್ನು ಅರ್ಧಕ್ಕೆ ಎಡಿಟ್ ಮಾಡಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಇದು ಜನರನ್ನು ದಾರಿತಪ್ಪಿಸುವಂತಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕರ್ನಾಟಕ ಸರ್ಕಾರ ದಲಿತರಿಗೆ ಕೊಡಬೇಕಿದ್ದ 5 ಎಕರೆ ಭೂಮಿಯನ್ನು ಬಾಂಗ್ಲಾ ವಲಸೆ ಮುಸಲ್ಮಾನರಿಗೆ ನೀಡುತ್ತಿದೆ ಎಂಬುದು ನಿಜವೇ?

