Covid 19 : ಬಗ್ಗದ ರಾಮುಲು, ಸುಧಾಕರ್: ಸುರೇಶ್ಗೆ ಕೊರೋನಾ ಉಸ್ತುವಾರಿ ನೀಡಿದ CM..
ಕೊರೋನಾ ಕುರಿತಾದ ಸರಕಾರದ ಮಾಹಿತಿಯನ್ನು ನೀಡುವ ಹೊಣೆಗಾರಿಕೆಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವಹಿಸಲಾಗಿದೆ. ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯ ಶಿಕ್ಷಣ ಸಚಿವ ಸುಧಾಕರ್ ನಡುವಿಎನ ಪೈಪೋಟಿ ಕೊನೆಗೊಳ್ಳದ ಹಿನ್ನೆಲೆಯುಲ್ಲಿ ಸಿಎಂ ಈ ನಿರ್ಧಾರ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಭೀತಿ ಕಾಣಿಸಿಕೊಂಡ ದಿನದಿಂದಲೂ ಇದರ ಬಗ್ಗೆ ಯಾರು ಸರಕಾರದ ಮುಖವಾಣಿ ಆಗಬೇಕು ಎನ್ನುವ ಬಗ್ಗೆ ರಾಮುಲು ಮತ್ತು ಸುಧಾಕರ್ ನಡುವೆ ಪೈಪೋಟಿ ನಡೆದಿತ್ತು. ಕೊರೋನಾ ಕ್ರೆಡಿಟ್ಗಾಗಿ ಇಬ್ಬರ ಮೇಲಾಟ ತ್ಪಿಸಲು ರಾಜ್ಯದ ಹೊಣೆಯನ್ನು ಶ್ರೀರಾಮುಲು ಅವರಿಗೆ ಮತ್ತು ಬೆಂಗಳೂರಿನ ಹೊಣೆಯನ್ನು ಸುಧಾಕರ್ಗೆ ಹಂಚಲಾಗಿತ್ತು.
ಆದರೂ ಕೊರೋನಾ ಕುರಿತಾದ ದೈನಂದಿನ ಮಾಹಿತಿ ಪ್ರಸರಣದಲ್ಲಿ ಗೊಂದಲು ಪೂರ್ಣವಾಗಿ ಕೊನೆಗೊಳ್ಳದೇ ಇಬ್ಬರೂ ಸಚಿವರ ಭಿನ್ನ ಧ್ವನಿ ಸರಕಾರಕ್ಕೆ ಮುಜುಗರ ತಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿಯ ಅಧಿಕೃತ ಚಿತ್ರಣ ನೀಡುವ ಹೊಣೆಗಾರಿಕೆಯನ್ನು ಸಿಎಂ ಯಡಿಯೂರಪ್ಪನವರು ಹಿರಿಯ ಸಚಿವ ಸುರೇಶ್ ಕುಮಾರ್ ಅವರಿಗೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ..

ಕೊರೋನಾ ಕುರಿತಾದ ಮಹಿತಿ ಕುರಿತಾಗಿ ಜನರನ್ನು ಯಾವುದೇ ಗೊಂದಲಕ್ಕೆ ಸಿಲುಕಿಸದಂತೆ ನೋಡಿಕೊಲ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರು ಶುಕ್ರವಾರ ರಾಜ್ಯದಲ್ಲಿ ಕೊರೋನ ಆಪರಿಸ್ಥಿತಿ ಕುರಿತಾಗಿ ಸರಣಿ ಸಭೆಗಳನ್ನು ನಡೆಸಿ ಪರಿಹಾರ ಕಾರ್ಯಗಳ ಮಾಹಿತಿ ಪಡೆದರು.
ಮುಸ್ಲಿಂ ನಾಯಕರು, ಅಧಿಕಾರಿಗಳು, ಮಂತ್ರಿಗಳು ಹಾಗೂ ಬೆಂಗಳೂರಿನ ಮಂತ್ರಿಗಳ ಜೊತೆ ಸಿಎಂ ಯಡಿಯೂರಪ್ಪ ವ್ಯಾಪಕ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ವರದಿಯಾದ ಕೋವಿಡ್ 19 ಪ್ರಕರಣಗಳಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲಿ ಇವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಬೆಂಗಳೂರು ನಗರದ ಸಚಿವರೊಂದಿಗೆ ಸಭೆ ನಡೆಸಲಾಯಿತು.

ಇದಲ್ಲದೇ ಶನಿವಾರ ಬೆಳಿಗ್ಗೆ ಬೆಂಗಳೂರಿನ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ಕರೆಯಲು ಸಿಎಂ ತೀರ್ಮಾನ ಮಾಡಿದ್ದಾರೆ. ನಗರದ ಶಾಸಕರು, ಪಾಲಿಕೆ ಸದಸ್ಯರ ಸಹಕಾರದೊಂದಿಗೆ ಬಡವರು, ಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಿತರಣೆ ಸಮರ್ಪಕವಾಗಿ ಆಗುವಂತೆ ಖಾತರಿ ಪಡಿಸಿಕೊಳ್ಳಲು ಸಿಎಂ ಸೂಚಿಸಿದ್ದಾರೆ…

