ಕೊರೊನ ಚಿಕಿತ್ಸೆಗೆ ತಲೆ ಹೇನು ಔಷದ ಐವರ್ ಮೆಕ್ಟಿನ್ ಪರೀಕ್ಷೆ

ತಲೆ ಹೇನು ಔಷಧಿಯಾದ ಐವರ್ ಮೆಕ್ಟಿನ್, ಕೊರೊನ ಸೋಂಕಿಗೆ ಚಿಕಿತ್ಸೆಯಾಗಿ ಬಳಸಬಹುದೇ ಎಂದು ಸಂಶೋಧಕರು ಪರೀಕ್ಷೆ ನಡೆಸುತ್ತಿದ್ದಾರೆ. ಇದು ಸಂಭವನೀಯ ಔಷಧಿಯಾಗಿ ಬಳಸಬಹುದಾದ ಲಕ್ಷಣಗಳನ್ನು ಪರೀಕ್ಷಾಲಯದ ಅಧ್ಯಯನ ತಿಳಿಸಿದೆ ಎನ್ನಲಾಗಿದೆ.

ಆದರೆ ಇದು ಪ್ರಾಥಮಿಕ ಹಂತದಲ್ಲಿ ಇದ್ದು, ಕೋವಿಡ್-19 ಸೋಂಕಿನ ಮನುಷ್ಯರ ಮೇಲೆ ಪರೀಕ್ಷೆ ನಡೆಸಬೇಕಿದೆ. ಇದು ಎಷ್ಟು ಪ್ರಮಾದಲ್ಲಿ ಕೊಡಬೇಕು, ಯಾರು ಕೊಡಬೇಕು ಎಂಬುದರ ಬಗ್ಗೆ ಇನ್ನೂ ನಿಖರಾವಾಗಿ ಪರೀಕ್ಷಿಸಬೇಕಿದೆ.

ತಲೆ ಹೇನು ಮುಂತಾದವುಗಳಿಂದ ಮನುಷ್ಯ ಮತ್ತಿತರ ಸಾಕುಪ್ರಾಣಿಗಳಿಗೆ ಉಂಟಾಗುವ ರೋಗಗಳ ಚಿಕಿತ್ಸೆಗಾಗಿ  ಐವರ್ ಮೆಕ್ಟಿನ್ ನನ್ನು ಸದ್ಯಕ್ಕೆ ಬಳಸಲಾಗುತ್ತಿದೆ. ಇದು ಈ ಮೊದಲು ಎಚ್ ಐ ವಿ , ಡೆಂಗ್ಯು, ಜಿಕಾ ವೈರಸ್ ಗಳು ಹೆಚ್ಚಾಗದಂತೆ ತಡೆಯಲು ಸಹಕರಿಸಿತ್ತು ಎನ್ನಲಾಗಿದೆ.

ಸಾರ್ಸ್-ಕೋವ್-2 ವೈರಸ್ ಮೇಲೆ ಕೂಡ ಈಗ ಔಷಧ, ಪರೀಕ್ಷಾಲಯದಲ್ಲಿ ಪರಿಣಾಮಕಾರಿ ಫಲಿತಾಂಶ ತೋರಿದ್ದು, 24 ರಿಂದ 48 ಘಂಟೆಗಳಲ್ಲಿ ವೈರಸ್ ಹೆಚ್ಚಾಗದಂತೆ ತಡೆಯಲು ಸಾಧ್ಯಾವಿದೆ ಎಂದಿದ್ದಾರೆ ಆಸ್ಟ್ರೇಲಿಯಾದ ಸಂಶೋಧಕರು.

ಈ ಔಷಧದ ಬಗ್ಗೆ ಇನ್ನೂ ಅಂತಿಮವಾಗಿ ಎಲ್ಲ ಫಲಿತಾಂಶಗಳೂ ಹೊರಗೆ ಬಿದ್ದಿಲ್ಲವಾದ್ದರಿಂದ ಯಾರೂ ಇದನ್ನು ಉಪಯೋಗಿಸಬಾರದು ಮತ್ತು ಈ ಔಷಧವನ್ನು ಕೊಂಡು ಸ್ಟಾಕ್ ಮಾಡಬಾರದು ಎಂದು ಕೂಡ ಸಂಶೋಧಕರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights