ಕೊರೊನಾ ಹರಡುವ ಹಿನ್ನೆಲೆ : ಬೆಂಗಳೂರು ಐತಿಹಾಸಿಕ ಕರಗಕ್ಕೆ ಹೈಕೋರ್ಟ್ ಬ್ರೇಕ್!

ದೇಶಾದ್ಯಂತ ಕೊರೊನಾ ಭೀತಿ ಹೆಚ್ಚಾಗಿದ್ದು ಬೆಂಗಳೂರಿನ ಐತಿಹಾಸಿಕ ಕಗರಗಕ್ಕೆ ಸದ್ಯ ಹೈಕೋರ್ಟ್ ತಡೆಯೊಡ್ಡಿದೆ.

ಕೆಲ ದಿನಗಳ ಹಿಂದೆ ರಾಜ್ಯದ ಸಿಎಂ ಯಡಿಯೂರಪ್ಪ ಅವರೊಂದಿಗೆ ಉನ್ನತ ಸಭೆ ನಡೆಸಿ, ಕರಗವನ್ನು ಸಿಂಪಲ್ಲಾಗಿ ಮಾಡುವ ಅನುಮತಿ ಪಡೆಯಲಾಗಿತ್ತು. ಸಭೆಯಲ್ಲಿ ತೀರ್ಮಾನಗೊಂಡಂತೆ ನಾಳೆ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ನಡೆಯಬೇಕಿತ್ತು. ಆದರೆ ಇಂದು ಹೈಕೋರ್ಟ್ ಕರಗಕ್ಕೆ ಸದ್ಯ ಬ್ರೇಕ್ ಹಾಕಿದೆ.

ಕೇಂದ್ರ ಸರ್ಕಾರದ ಆದೇಶದಂತೆ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿಲ್ಲ. ಹೀಗಾಗಿ ಬೆಂಗಳೂರು ಕರಗ ಸಹ ನಡೆಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇಂದ್ರ ಸರ್ಕಾರ ಆದೇಶ ಪಾಲನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಇದನ್ನು ದಾಖಲಿಸಿಕೊಂಡಿದ್ದು, ಕರಗ ನಡೆಸದಂತೆ ಆದೇಶಿಸಿದೆ.

ಈ ಕುರಿತಂತೆ ಮಾಧ್ಯಮಗಳ ವರದಿಯ ಅನುಸಾರ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮದ್ಯಪ್ರವೇಶಿಸಿದ್ದು, ನಾಳೆ ಐತಿಹಾಸಿಕ ಬೆಂಗಳೂರು ಕರಗ ನಡೆಸಲು ಸರ್ಕಾರ ಅನುಮತಿ ನೀಡಿದ್ಯಾ ಎಂಬುದಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಲಾಕ್ ಡೌನ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಹೈಕೋರ್ಟ್ ಸಿಜೆಯ ಪ್ರಶ್ನೆಗೆ ಉತ್ತರಿಸಿರುವ ರಾಜ್ಯ ಸರ್ಕಾರದ ಪರ ವಕೀಲರು, ಯಾವುದೇ ಅನುಮತಿಯನ್ನು ಬೆಂಗಳೂರು ಕರಗವನ್ನು ನಡೆಸಲು ರಾಜ್ಯ ಸರ್ಕಾರ ಇದುವರೆಗೆ ನೀಡಿಲ್ಲ ಎಂಬುದಾಗಿ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದಂತ ಐತಿಹಾಸಿಕ ಬೆಂಗಳೂರು ಕರಗಕ್ಕೆ ಬ್ರೇಕ್ ಹಾಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights