ಮದ್ಯ ಸಿಗದೇ ಹ್ಯಾಂಡ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಯುವಕ..!
ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಮಾಲ್, ಬಾರ್, ಪಬ್, ಕ್ಲಬ್ ಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಮದ್ಯವ್ಯಸನಿಗಳು ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಎಲ್ಲೆಡೆ ಅಧಿಕವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮದ್ಯ ಸಿಗದೇ ಆತ್ಮಹತ್ಯೆ ಮಾಡಿಕೊಂಡ ಬಗೆ ಕೇಳಿದ್ರೆ ನೀವೆಲ್ಲರೂ ಬೆಚ್ಚಿ ಬೀಳ್ತೀರಾ.
ಹೌದು… ಕೊರೊನಾ ಹರಡುವ ಭೀತಿಯಿಂದ ಜನ ಸೇರುವ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಇದರಲ್ಲಿ ಮದ್ಯದಂಗಡಿ ಕೂಡ ಒಂದು. ಇದೀಗ ಮದ್ಯ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ 35 ವರ್ಷದ ಯುವಕನೋರ್ವ ಹ್ಯಾಂಡ್ ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಮೃತನನ್ನು ಸುಲೂರ್ ಬಳಿಯ ಕರೈಯರೈಪ್ಪ ದೇವರ್ ನ ಇ. ಬರ್ನಾಡ್ ಎಂದು ಗುರುತಿಸಲಾಗಿದೆ. ಮದ್ಯ ಸಿಗದೆ ಹ್ಯಾಂಡ್ ಸ್ಯಾನಿಟೈಸರ್ ಕುಡಿದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಈತನನ್ನು ಇಂದು ಬೆಳಗ್ಗೆ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಾವಿಗೂ ಮುನ್ನ ಹ್ಯಾಂಡ್ ಸ್ಯಾನಿಟೈಸರ್ ಕುಡಿದಿರುವುದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. ಕುಡಿತದ ದಾಸನಾಗಿದ್ದ ಬರ್ನಾಡ್ ಲಾಕ್ ಡೌನ್ ನಿಂದ ಮದ್ಯ ಸಿಗದೆ ಸಾಕಷ್ಟು ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ.

