FACT CHECK | ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಇರುವ ಚಿತ್ರ ಎಂದು AI ರಚಿತ ಫೊಟೊ ಹಂಚಿಕೆ
ವಿರಾಟ್ ಕೊಹ್ಲಿಯ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಇಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಈ ರೀತಿ ಕಾಣಿಸಿಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ‘deepak__singh___302‘ ಎಂಬ ಬಳಕೆದಾರರು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ತಮ್ಮ ಇಬ್ಬರು ಮಕ್ಕಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಹಂಚಿಕೊಳ್ಳುವಾಗ ಅವರು, ‘ವಿರಾಟ್ ತಮ್ಮ ಕುಟುಂಬದೊಂದಿಗೆ ಮೊದಲ ಬಾರಿಗೆ’ ಎಂದು ಬರೆದುಕೊಂಡಿದ್ದಾರೆ.
‘Cricket Amitava Ds Sports’ ಎಂಬ ಯೂಟ್ಯೂಬ್ ಚಾನಲ್‌ನಲ್ಲಿಯೂ ಇದನ್ನು ಕಾಣಬಹುದಾಗಿದೆ. ಅಲ್ಲೂ ಇದನ್ನು ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಕುಟುಂಬದ ಫೋಟೋ ಎಂದು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳ ಫೋಟೋದ ಕೀವರ್ಡ್‌ಗಳನ್ನು ಬಳಸಿ ಸರ್ಚ್ ಮಾಡಿದಾಗ, ಜನವರಿ 11ರಂದು ಇ-ಟೈಮ್ಸ್‌ನಲ್ಲಿ ಪೋಸ್ಟ್ ಮಾಡಲಾಗಿರುವು ವಿಡಿಯೋ ವೊಂದು ಲಭ್ಯವಾಗಿದೆ.
View this post on Instagram
ಈ ವಿಡಿಯೋದಲ್ಲಿ ವಿರಾಟ್ ಮತ್ತು ಅನುಷ್ಕಾ ಅವರ ಮಕ್ಕಳು ಅವರ ತೊಡೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದರಲ್ಲಿ ಇಬ್ಬರೂ ಮಕ್ಕಳು ತುಂಬಾ ಚಿಕ್ಕವರಿರುವುದನ್ನು ಗಮನಿಸಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವ ಫೋಟೋದಲ್ಲಿ ಇಬ್ಬರೂ ಮಕ್ಕಳು ತುಂಬಾ ದೊಡ್ಡವರಾಗಿ ಕಾಣಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಕೊಹ್ಲಿ ಕುಟುಂಬವು ಪ್ರೇಮಾನಂದ ಮಹಾರಾಜ್ ಅವರೊಂದಿಗೆ ಇರುವುದನ್ನು ಕಾಣಬಹುದು.
ಅಲ್ಲದೆ ಸರಿಯಾಗಿ ನೋಡಿದಾಗ ಕೊಹ್ಲಿ ಮಗನ ಚಿತ್ರ ಸ್ವಲ್ಪ ಅಸಹಜವಾಗಿ ಕಾಣುತ್ತದೆ. ಅಲ್ಲದೆ ವಿರಾಟ್ ಕೊಹ್ಲಿಯ ಜೀನ್ಸ್ ಕೂಡ ಸ್ವಲ್ಪ ವಿಚಿತ್ರವಾಗಿದೆ. ಇನ್ನೂ ಫೋಟೋದಲ್ಲಿರುವ ಮಗಳ ಪಾದಗಳು ಕಾಣಿಸುತ್ತಿಲ್ಲ. ವಿರಾಟ್ ಕೊಹ್ಲಿಯ ಕೈಬೆರಳುಗಳು ಕೂಡ ಸಾಮಾನ್ಯದಂತೆ ಇಲ್ಲ. ಹೀಗಾಗಿ ಇದು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಈ ಚಿತ್ರವನ್ನು ರಚಿಸಿರಬಹುದು ಎಂಬ ಅನುಮಾನ ಮೂಡಿತು.
![]()
ಇದನ್ನು ಖಚಿತಪಡಿಸಿಕೊಳ್ಳಲು ನಾವು ಈ ಫೋಟೋವನ್ನು ಎಐ ಚಿತ್ರಗಳನ್ನು ಪತ್ತೆ ಹಚ್ಚುವ ಸೈಟ್ ಎಂಜಿನ್ ಎಂಬ ಟೂಲ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ಇದು ಶೇ. 99ರಷ್ಟು ಎಐನಿಂದ ರಚಿಸಿದ ಚಿತ್ರ ಎಂಬ ಫಲಿತಾಂಶವನ್ನು ನೀಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಕ್ಕಳೊಂದಿಗೆ ಇರುವ ಚಿತ್ರ AI (ಕೃತಕ ಬುದ್ದಿ ಮತ್ತೆ) ಯಿಂದ ರಚಿಸಲಾಗಿದೆ. ಹಾಗಾಗಿ ಈ ಫೋಟೊ ನಕಲಿ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ 10 ರೂಪಾಯಿ ನೋಟನ್ನು ನೆಹರು ಬ್ಯಾನ್ ಮಾಡಿದ್ದು ನಿಜವೇ?

