FACT CHECK | ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ 10 ರೂಪಾಯಿ ನೋಟನ್ನು ನೆಹರು ಬ್ಯಾನ್ ಮಾಡಿದ್ದು ನಿಜವೇ?

ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ 10 ರೂಪಾಯಿ ನೋಟಿನ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ಅನೇಕ ಬಳಕೆದಾರರು ಹಂಚಿಕೊಂಡಿದ್ದು ‘ಐತಿಹಾಸಿಕ’ 10 ರೂ. ನೋಟು ಎಂದು ಹೇಳಲಾಗುತ್ತಿದೆ, ಈ ಚಿತ್ರವಿರುವ 10ರೂಪಾಯಿ ನೋಟನ್ನು ಜವಾಹರಲಾಲ್ ನೆಹರು ಅವರು ಬ್ಯಾನ್ ಮಾಡುವ ಮೂಲಕ ನೆಹರೂ ಸುಭಾಶ್‌ ಚಂದ್ರ ಬೋಸ್‌ ಅವರಿಗೆ ಅಪಮಾನ ಮಾಡಿದ್ದರು ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವರು ನೆಹರೂ ಮತ್ತು ಸುಭಾಶ್‌ ಚಂದ್ರ ಬೋಸ್‌ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದಿದ್ದು ನಿಜ, ಆದರೆ ನೆಹರು ಅವರು ಅದನ್ನು ತೀರ ವೈಯಕ್ತಿಕವಾಗಿ ತೆಗೆದುಕೊಂಡಿದ್ದರು. ಇದರ ಪರಿಣಾಮವಾಗಿ ಸುಭಾಶ್‌ ಚಂದ್ರ ಬೋಸ್‌ ಅವರಿಗೆ ಸಿಗಬೇಕಾದ ಯಾವುದೇ ರೀತಿಯಾದ ಗೌರವಗಳು ಸಿಗಲಿಲ್ಲ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್‌ ಫೊಟೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಬಿಡುಗಡೆಯಾದ ನೋಟುಗಳು ಮತ್ತು ನಾಣ್ಯಗಳ ವಿವರವಾದ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ವೆಬ್‌ಸೈಟ್ ಹೊಂದಿರುವುದು ಲಭ್ಯವಾಗಿದೆ.

ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸ್ವತಂತ್ರ ಭಾರತದ ಮೊದಲ ಬ್ಯಾಂಕ್ ನೋಟುಗಳು ಅಶೋಕ ಸ್ತಂಭ ಸರಣಿಯ ಬ್ಯಾಂಕ್ ನೋಟುಗಳಾಗಿದ್ದವು. ಇದರ ಅಡಿಯಲ್ಲಿ, ಸ್ವತಂತ್ರ ಭಾರತದ ಮೊದಲ ಬ್ಯಾಂಕ್ ನೋಟನ್ನು 1949 ರಲ್ಲಿ ಬಿಡುಗಡೆ ಮಾಡಲಾಯಿತು, ಅದು ಒಂದು ರೂಪಾಯಿ ಬ್ಯಾಂಕ್ ನೋಟಾಗಿತ್ತು. ಇದಾದ ಬಳಿಕ ಹಲವು ನೋಟಗಳು ಕಂಡು ಬಂದರೂ ಸ್ವತಂತ್ರ ಭಾರತದಲ್ಲಿ ವ್ಯಕ್ತಿಗತವಾಗಿ ಮಹಾತ್ಮ ಗಾಂಧಿ ಅವರನ್ನು ಹೊರತು ಪಡಿಸಿ ಇನ್ಯಾವುದೇ ರಾಷ್ಟ್ರೀಯ ನಾಯಕರ ಫೋಟೋಗಳು ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಣವಾಗಿರುವುದು ಕಂಡು ಬಂದಿಲ್ಲ.

ಇನ್ನು ವೈರಲ್‌ ಫೋಟೋ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, 17 ನವೆಂಬರ್, 2021 ರಂದು ದಿ ಹಿಂದೂ ಪತ್ರಿಕೆ ವರದಿ ಲಭ್ಯವಾಗಿದೆ. ಇದರ ಪ್ರಕಾರ  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 113 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಕುರಿತು ಬ್ಯಾಂಕ್ ಆಫ್ ಇಂಡಿಪೆಂಡೆನ್ಸ್ ಬಿಡುಗಡೆ ಮಾಡಿದ ನೋಟನ್ನು ಸಾರ್ವಜನಿಕಗೊಳಿಸಲಾಯಿತು ಎಂದು ತಿಳಿದು ಬಂದಿದೆ.

ದಿ ಬೆಟರ್ ಇಂಡಿಯಾದ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೂಡ ವರದಿಯಲ್ಲಿರುವ ಸುಭಾಶ್‌ ಚಂದ್ರ ಬೋಸ್‌ ಅವರ ಚಿತ್ರವಿರುವ ನೋಟು ಕಂಡು ಬಂದಿದೆ. ಪೋಸ್ಟ್‌ನೊಂದಿಗೆ ನೀಡಲಾದ ಮಾಹಿತಿಯ ಪ್ರಕಾರ, “1944 ರಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧದ ಯುದ್ಧಕ್ಕಾಗಿ ಹಣವನ್ನು ಸಂಗ್ರಹಿಸಲು ಬರ್ಮಾದ ರಂಗೂನ್‌ನಲ್ಲಿ ಆಜಾದ್ ಹಿಂದ್ ಬ್ಯಾಂಕ್ ಅನ್ನು ಸ್ಥಾಪಿಸಿದರು. ಪ್ರಪಂಚದಾದ್ಯಂತದ ಭಾರತೀಯರಿಂದ ಬಂದ ಕೊಡುಗೆಗಳನ್ನು ನಿರ್ವಹಿಸಲು ಭಾರತೀಯ ಕರೆನ್ಸಿ ನೋಟುಗಳನ್ನು ಮುದ್ರಿಸುವುದು ಇದರ ಉದ್ದೇಶವಾಗಿತ್ತು. 1980 ರ ದಶಕದಲ್ಲಿ, ನಿವೃತ್ತ ಗುತ್ತಿಗೆದಾರ ರಾಮ್ ಕಿಶೋರ್ ದುಬೆ ಅವರ ಅಜ್ಜ ರಾಮಾಯಣ ಪುಸ್ತಕದಲ್ಲಿ ಇಟ್ಟಿದ್ದ ಈ ಅಪರೂಪದ ನೋಟುಗಳಲ್ಲಿ ಒಂದನ್ನು ಕಂಡುಕೊಂಡರು. ಅವರ ಅಜ್ಜ ಪ್ರಗಿಲಾಲ್ ಅವರು ಭಾರತೀಯ ರಾಷ್ಟ್ರೀಯ ಸೇನೆಯ (INA) ಸದಸ್ಯರಾಗಿದ್ದರು ಮತ್ತು ಬುಂದೇಲ್‌ಖಂಡ್ ಪ್ರದೇಶದಲ್ಲಿ ಅವರ ರಹಸ್ಯ ಕೆಲಸಕ್ಕಾಗಿ ನೇತಾಜಿ ಅವರು ಈ ನೋಟನ್ನು ಬಹುಮಾನವಾಗಿ ನೀಡಿದರು.” ಎಂದು ಬರೆದಿರುವುದು ಕಂಡು ಬಂದಿದೆ.

1 ಲಕ್ಷ ರೂಪಾಯಿ ಮೌಲ್ಯದ ಆ ನೋಟಿನಲ್ಲಿ ಬೋಸ್ ಅವರ ಚಿತ್ರ, ಸ್ವಾತಂತ್ರ್ಯ ಪೂರ್ವದ ಭಾರತದ ನಕ್ಷೆ ಮತ್ತು ‘ಬ್ಯಾಂಕ್ ಆಫ್ ಇಂಡಿಪೆಂಡೆನ್ಸ್’ ಎಂದು ಬರೆಯಲಾಗಿತ್ತು. “ಒಡಿಶಾದ ಕಟಕ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತುಸಂಗ್ರಹಾಲಯವು ಆಜಾದ್ ಹಿಂದ್ ಬ್ಯಾಂಕ್ ಹೊರಡಿಸಿದ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಅಪರೂಪದ ಸಂಗ್ರಹವನ್ನು ಹೊಂದಿದೆ.” ಈ ವಸ್ತುಸಂಗ್ರಹಾಲಯದ ವಿವರಗಳು ಒಡಿಶಾ ಸರ್ಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ . ಕನಿಲಾಲ್ ಬಸು ಬರೆದ ‘ನೇತಾಜಿ: ರೀಡಿಸ್ಕವರ್ಡ್’ ಪುಸ್ತಕವು ದೇಬ್ನಾಥ್ ದಾಸ್ ಅಧ್ಯಕ್ಷರಾಗಿದ್ದ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ ಆಜಾದ್ ಹಿಂದ್ ಬ್ಯಾಂಕ್ ಬಗ್ಗೆಯೂ ಉಲ್ಲೇಖಿಸಿರುವುದು ಕಂಡು ಬಂದಿದೆ. ಆ ಮೂಲಕ ಸುಭಾಶ್‌ ಚಂದ್ರ ಬೋಸ್‌ ಅವರ ಫೋಟೋ ಹೊಂದಿರುವ ಕರೆನ್ಸಿಯನ್ನು ಸ್ವತಂತ್ರ ಭಾರತದಲ್ಲಿ ಮುದ್ರಿಸಿಲ್ಲ ಎಂಬುದು ಖಚಿತವಾಗಿದೆ.

vishvasnews

ಒಟ್ಟಾರೆಯಾಗಿ ಹೇಳುವುದಾದರೆ, ಜವಹಾರ್‌ ಲಾಲ್‌ ನೆಹರು ಅವರು ಸುಭಾಶ್‌ ಚಂದ್ರ ಬೋಸ್‌ ಅವರ ಚಿತ್ರವಿರುವ ನೋಟನ್ನು ನಿಷೇದಿಸಿದ್ದರು ಎಂಬುದು ಸುಳ್ಳು. ವೈರಲ್‌ ನೋಟು ಸ್ವತಂತ್ರ ಪೂರ್ವ ಭಾರತದಲ್ಲಿ ಮುದ್ರಿಸಲಾಗಿದೆ. ಇದುವರೆಗೂ ಭಾರತದಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹೊರತು ಪಡಿಸಿ ಬೇರೆ ಯಾವುದೇ ರಾಷ್ಟ್ರೀಯ ನಾಯಕರ ಚಿತ್ರಗಳ ನೋಟನ್ನು ಮುದ್ರಿಸಲಾಗಿಲ್ಲ ಎಂಬುದು ಆರ್‌ಬಿಐ ವೆಬ್‌ಸೈಟ್‌ನಿಂದಲೂ ಖಚಿತವಾಗಿದೆ. ಹೀಗಾಗಿ ವೈರಲ್‌ ಆಗುತ್ತಿರುವ ಚಿತ್ರವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ದೆಹಲಿಯಲ್ಲಿ ಸಂಭವಿಸಿದ ಭೂಕಂಪದ ದೃಶ್ಯಗಳು ಎಂದು ಟರ್ಕಿಯ ಹಳೆಯ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights