ಕೈತಪ್ಪಿದ ಮಂತ್ರಿಗಿರಿ : ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರಿಂದ ಪ್ರತಿಭಟನೆ..!

ಮಂತ್ರಿಗಿರಿ ಕೈತಪ್ಪಿದ್ದಕ್ಕೆ ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಓಲೇಕಾರ್ ಬೆಂಬಲಿಗರು ಸಿಎಂ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಇಂದು ಸಚಿವ ಸಂಪುಟ ರಚನೆಯಾಗಲಿದ್ದು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ರಾಜಭವದಲ್ಲಿ 2.30ಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಒಂದು ಕಡೆ ಸಚಿವರಾದವರ ಸಂಭ್ರಮ ಪಡುತ್ತಿದ್ದಾರೆ. ಇನ್ನೊಂದು ಕಡೆ ಸಚಿವ ಸ್ಥಾನ ಕೈತಪ್ಪಿದವರು ಆಕ್ರೋಶಗೊಂಡಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ನೆಹರು ಓಲೇಕಾರ್,”ಕಾಸ್ಟ್ ಬ್ಯಾಲೆನ್ಸ್ ಮಾಡಬಹುದಿತ್ತು. ಆದರೆ ಪಕ್ಷ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ವ್ಯತ್ಯಾಸ ಆಗೋ ಕಾರಣದಿಂದ ಬೆಂಬಲಿಗರು ಆಕ್ರೊಶಗೊಂಡಿದ್ದಾರೆ. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ನಮಗೆ ವಂಚನೆ ಆಗಿದೆ. ಈಗಲೂ ಆಗಿದೆ. ಅದಕ್ಕೆ ವಿಷಾದವಿದೆ” ಎಂದರು.

“ನಮಗೆ ಮುಖ್ಯಮಂತ್ರಿಗಳೇ ಮೋಸ ಮಾಡಿದ್ದಾರೆ. ನಾವು ವಿನಂತಿ ಮಾಡಿದರೂ ಸಿಎಂ ನಮ್ಮನ್ನು ಕಡೆಗಣಿಸಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ನಾನು ವಿನಂತಿ ಮಾಡುತ್ತೇನೆ. ನನ್ನನ್ನು ಅವಕಾಶ ವಂಚಿತರನ್ನಾಗಿ ಮಾಡಿದ್ದಾರೆ. ಇದಕ್ಕೆ ಬೇಸರವಿದೆ. ಹಾಗಂತ ನಾವು ಪಕ್ಷದ ವಿರುದ್ಧ ಹೋಗುವುದಿಲ್ಲ. ಯಾರು ನಮಗೆ ಮೋಸ ಮಾಡಿದ್ದಾರೆ ಅವರ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ” ಎಂದರು.

ಇನ್ನೂ ಪ್ರತಿಭಟನಾಕಾರರು ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಪದೇ ಪದೇ ನಮ್ಗೆ ಅನ್ಯಾಯವಾಗಿದೆ. ಸಚಿವ ಸ್ಥಾನ ನೀಡದೇ ಹೋದರೆ ಹಾವೇರಿಗೆ ಸಿಎಂ ಆಗಮಿಸಲು ಬಿಡುವುದಿಲ್ಲ ಎಂದು ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಎಚ್ಚರಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights