Corona : Online shopping ಮಾರಟಕ್ಕೆ ಸಿದ್ದತೆ, ಏಪ್ರಿಲ್ 20 ಸಿಗಲಿದೆ ಹಸಿರು ನಿಶಾನೆ..
ಕೊರೋನಾ ಲಾಕ್ಡೌನ್ ಕಾರಣ ಬಾಗಿಲು ಮುಚ್ಚಿರುವ ಆನ್ಲೈನ್ ಮಾರಾಟ ಸಂಸ್ಥೆಗಳು ಇದೇ 20ರ ಬಳಿಕ ಗರಿಗೆದರುವ ಲಕ್ಷಣಗಳಿವೆ. ಎಲ್ಲ ಅಂದುಕೊಂಡಂತೆ ನಡೆದರೇ ಗ್ರಾಹಕರು ಇದೇ 20ರ ನಂತರ ಆನ್ಲೈನ್ನಲ್ಲಿ ಫೋನು, ಫ್ರಿಜ್ಜು, ಫ್ಯಾನುಗಳನ್ನು ಕೊಳ್ಳಬಹುದಾಗಿದೆ. ಇದೇ 20 ರಂದು ದೇಶದ ಸ್ಥಿತಿಯನ್ನು ಪರಿಶಿಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು..

ಕೇಂದ್ರ ಸರಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ 20ರ ಬಳಿಕ ಎಲ್ಲ ರೀತಿಯ ಸರಕು ಸಾಗಣೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಆನ್ಲೈನ್ ಮಾರಾಟಕ್ಕೆ ಅಮೇಜಾನ್, ಫ್ಲಿಪ್ಕಾರ್ಟ್ ಮುಂತಾದವು ಸಜ್ಜಾಗುತ್ತಿವೆ. ಈಗಾಗಲೇ ಇಲೆಕ್ಟ್ರಾನಿಕ್ ವಸ್ತುಗಳ ಪೂರೈಕೆಗೆ ಸಿದ್ಧವಾಗಿರುವಂತೆ ಅಮೇಜಾನ್ ತನ್ನ ಪೂರೈಕೆದಾರರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇದೇ 18ರಿಂದ ಇಲೆಕ್ಟ್ರಾನಿಕ್ ವಸ್ತುಗಳ ಬುಕಿಂಗ್ ಆರಂಭಿಸಲು ಸಂಸ್ಥೆ ಚಿಂತನೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ ಲಾಕ್ಡೌನ್ ಜಾರಿಯಾದ ದಿನದಿಂದ ಈ ಸಂಸ್ಥೆಗಳು ಕೇವಲ ಅವಶ್ಯಕ ವಸ್ತುಗಳ ಮಾರಾಟದಲ್ಲಿ ಮಾತ್ರ ನಿರತವಾಗಿವೆ ಎಂದೂ ವರದಿ ಹೇಳಿದೆ.

ಆನ್ಲೈನ್ ಮಾರಾಟಗಾರರಿಗೆ ತಮ್ಮ ಒಟ್ಟು ವಹಿವಾಟಿನ ಅರ್ಧಕ್ಕೂ ಹೆಚ್ಚನಂಶ ಈ ಇಲೆಕ್ಟ್ರಾನಿಕ್ ವಸ್ತುಗಳ ಮಾರಾಟವೇ ಆಗಿರುವುದರಿಂದ ಸದ್ಯ ಇವು ಭಾರೀ ನಷ್ಟದಲ್ಲಿವೆ. ಒಂದು ವೇಳೆ ಅಂದುಕೊಂಡಂತೆ ಮುಂದಿನ ವಾರದಿಂದ ವಹಿವಾಟು ಆರಂಭವಾದರೂ ಡೆಲಿವರಿಯಲ್ಲಿ ಕೊಂಚ ವಿಳಂಬವಾಗಬಹುದು ಎಂದು ಸಂಸ್ಥೆಯನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಕೊರೋನಾ ಸಂಕಷ್ಟದ ಮೇಲೆ ಬರೆ ಎಳೆಯುವಂತೆ ಈ ಮಾರಿಯಿಂದಾಗಿ ದೇಶದಲ್ಲಿ ತಂಡೋಪತಂಡವಾಗಿ ವಲಸಿಗ ಕಾರ್ಮಿಕರು ಗುಳೆ ಹೋಗಿರುವ ಅಂಶ ಬಯಲಾಗಿದೆ.

