ದುಬಾರಿ ಬೆಲೆಗೆ ಬಿಬಿಎಂಪಿ ಕಡಿವಾಣ : ಕೋಳಿ, ಮೇಕೆ ಮಾಂಸಕ್ಕೆ ಸರ್ಕಾರಿ ಬೆಲೆ ನಿಗಧಿ…

ಲಾಕ್ ಡೌನ್ ನಿಂದಾಗಿ ಮಾರುಕಟ್ಟೆಯಲ್ಲವೂ ದುಬಾರಿಯಾಗಿದೆ. ಲಾಕ್ ಡೌನ್ ನ ಎಫೆಕ್ಟ್ ಕೋಳಿ ಮತ್ತು ಕುರಿ ಮಾಂಸಕ್ಕೂ ತಟ್ಟಿದ್ದು ದುಬಾರಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಬಿಬಿಎಂಪಿ ಕಡಿವಾಣ ಹಾಕಿದ್ದು ಕೋಳಿ, ಮೇಕೆ ಮತ್ತು ಮೀನು ಮಾಂಸಕ್ಕೆ ಸರ್ಕಾರಿ ಬೆಲೆಯನ್ನು ನಿಗದಿ ಪಡಿಸಿದೆ.

ಹೌದು.. ಇತ್ತೀಚೆಗೆ  ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿರುವವರ ಸಮಖ್ಯೆ ಹೆಚ್ಚಾಗುತ್ತಿದೆ. ಇದು ಮಾಂಸ ಮಾರಾಟಕ್ಕೂ ಹೊರತಾಗಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಪದೇ ಪದೇ ದೂರುಗಳು ಕೇಳಿಬರುತ್ತಿರುವುದರಿಂದ ಬಿಬಿಎಂಪಿ ಎಚ್ಚತ್ತುಕೊಂಡಿದೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಬಿಬಿಎಂಪಿ, “ಕೋವಿಡ್‌-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಮಳಿಗೆಗಳಲ್ಲಿ ಮಾಂಸವನ್ನು ದುಬಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ರೀತಿಯಾಗಿ ದರವನ್ನು ಏಕಾಏಕಿ ಹೆಚ್ಚಿಸುತ್ತಿರುವುದು ಸಾರ್ವಜನಿಕರಿಗೆ ಅನಗತ್ಯ ಆರ್ಥಿಕ ಹೊರೆಯಾಗಿದೆ.

ಇದರಿಂದಾಗಿ ಗ್ರಾಹಕ ರಕ್ಷಣಾ ಕಾಯ್ದೆ ಕಲಂ 1ರ ಅನ್ವಯ ನ್ಯಾಯ ಸಮ್ಮತವಲ್ಲದ ವಹಿವಾಟು ಅಪರಾಧವಾಗಿರುತ್ತದೆ. ಹೀಗಾಗಿ ಪಾಲಿಗೆ ನಿಗದಿ ಪಡಿಸಿರುವ ದರದಲ್ಲೇ ಮಾಂಸವನ್ನು ಮಾರಾಟ ಮಾಡಬೇಕು. ಇಲ್ಲದಿದ್ದರೆ ಅಂತಹ ಮಾಂಸದ ಮಳಿಗೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದು ತಿಳಿಸಲಾಗಿದೆ.

ಜೊತೆಗೆ ಪ್ರತಿಯೊಂದು ಮಾಂಶಕ್ಕೂ ಬೆಲೆ ನಿಗಧಿ ಮಾಡಲಾಗಿದ್ದು. ಈ ಬೆಲೆಯ ಪ್ರಕಾರ ಮಾಂಸ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಕೋಳಿ ಕೆ.ಜಿ ಗೆ 125, ಸ್ಕಿನ್‌ಔಟ್ ಕೋಳಿ ಕೆ.ಜಿ ಮಾಂಸಕ್ಕೆ 180, ವಿತ್‌ ಸ್ಕಿನ್ ಕೆ.ಜಿ ಗೆ 160 ಮತ್ತು ಮೇಕೆ-ಕುರಿ ಮಾಂಸಕ್ಕೆ ಕೆ.ಜಿಗೆ 700 ರೂಪಾಯಿ ದರ ನಿಗದಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights