ರಾಜ್ಯದಲ್ಲಿ ನಾಲ್ಕು ಮಂದಿ ಕೊರೊನಾ ಸಚಿವರಿದ್ದಾರೆ – ಪ್ರಿಯಾಂಕ್ ಖರ್ಗೆ ಗರಂ

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೆಂಡ ಕಾರಿ ರಾಜ್ಯದಲ್ಲಿ 4 ಮಂದಿ ಕೊರೊನಾ ಸಚಿವರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ರಾಜ್ಯದಲ್ಲಿ ನಾಲ್ಕು ಮಂದಿ ಕೊರೊನಾ ಸಚಿವರಿದ್ದಾರೆ. ಸುರೇಶ್ ಕುಮಾರ್ ಬರ್ತಾರೆ ನ್ಯೂಸ್ ಬುಲೆಟಿನ್ ಓದಿ ಹೇಳ್ತಾರೆ. ಹಾಗೆ ನೋಡಿದರೆ ಸುರೇಶ್ ಕುಮಾರ್ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಇಲ್ಲ ಎಂದು ಗರಂ ಆಗಿದ್ದಾರೆ.

ಈ ವೇಳೆ ರಾಜ್ಯದಲ್ಲಿರುವ ವೈದ್ಯಕೀಯ ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಪ್ರತಿಯೊಂದು ಜಿಲ್ಲೆಗೆ ಲ್ಯಾಬ್ ತೆಗೆಯುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಸರ್ಕಾರ ಆ ಗೋಜಿಗೆ ಹೋಗಿಲ್ಲ. ಕೋವಿಡ್ -19 ಯುದ್ಧ ಗೆಲ್ಲಬೇಕು ಅಂದ್ರೆ ರಕ್ಷಕರಿಗೆ ರಕ್ಷಣೆಯಿಲ್ಲ. ಕ್ವಾಲಿಟಿ ಪ್ರಕಾರ ಪಿಪಿಇ ಕಿಟ್ ವಿತರರಣೆಯನ್ನು ನೀಡಿಲ್ಲ. ಕೊರೊನಾ ವಾರ್ಡಿನಲ್ಲಿ ಎಸಿ ಸಹ ಹಾಕಲು ಆಗಿಲ್ಲ. ಹೀಗಾಗಿ ಬೆವರು ಬಂದು ಚಿಕಿತ್ಸೆ ನೀಡಲು ನಮಗೆ ತೊಂದೆರೆಯಿದೆ. ಅಲ್ಲಿನ ರೋಗಿಗಳಿಗೂ ಸಹ ತೊಂದರೆಯಾಗುತ್ತಿದೆ. ಕೊರೊನಾ ವಾರ್ಡಿನಲ್ಲಿ ಸ್ಯಾನಿಟೈಸರ್ ಸಹ ನೀಡಿಲ್ಲ. ರೋಗಿಗಳಿಗೆ ನೀಡುವ ಆಹಾರ ಸಹ ಸರಿಯಾಗಿಲ್ಲ. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಇಎಸ್‍ಐ ಸಿಬ್ಬಂದಿ ದೂರು ನೀಡಿದ್ದಾರೆ ಎಂದರು.

ಇನ್ನೂ ಹಾಟ್ ಸ್ಪಾಟ್ ಕಲಬುರಗಿ ಇಎಸ್‍ಐಗೆ ಇಲ್ಲಿಯವರೆಗೆ ಒಂದು ರೂಪಾಯಿ ಬಂದಿಲ್ಲ. ಈ ಬಗ್ಗೆ ಸಂಸದ ಉಮೇಶ್ ಜಾಧವ್ ಕೇಂದ್ರಕ್ಕೆ ಕೇಳುತ್ತಿಲ್ಲ. ಹೀಗಾಗಿ ಜಾಧವ್ ಸುಮ್ಮನೆ ರಾಜೀನಾಮೆ ನೀಡಿ ಆಸ್ಪತ್ರೆ ತೆಗೆಯಲಿ ಎಂದು ಜಾಧವ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights