ದಿಢೀರನೇ ಪಿಜಿ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕ ಹೆಚ್ಚಿಸಿದ ಸರ್ಕಾರ!

ಕೊರೊನಾ ವೇಗವಾಗಿ ಹರಡುವ ಆತಂಕ ಎಲ್ಲೆಡೆ ಹೆಚ್ಚಾಗಿದ್ದು, ಚಿಕಿತ್ಸೆ ನೀಡಲು ಆಗದೇ ಬಿಡಲು ಆಗದೇ ವೈದ್ಯರು ತಮ್ಮ ಜೀವದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಕೊರೊನಾ ವಿರುದ್ಧ ಯುದ್ಧ ಸಾರಿರುವವರ ಪೂಕಿ ವೈದ್ಯರು, ನರ್ಸ್, ವೈದ್ಯಕೀಯ ಸಿಬ್ಬಂದಿಗಳೇ ಮುಂಚುಣಿಯಲ್ಲಿದ್ದಾರೆ.  ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗಿನಿಂದಲೂ ಅದೇಷ್ಟೋ ಜನ ಆಸ್ಪತ್ರೆಗಳಿಂದ ಕಾಲ್ಕಿತ್ತಿದ್ದಾರೆ. ಕೆಲ ಆಸ್ಪತ್ರೆಗಳು ಬಂದ್ ಆಗಿವೆ. ಇನ್ನೂ ಕೆಲವರಂತೂ ಪತ್ತೆನೇ ಇಲ್ಲ. ಹೀಗಿರುವಾಗ ಇವರ ರಕ್ಷಣೆಗೆ ಸರ್ಕಾರದ ಮುತುವರ್ಜಿವಹಿಸಬೇಕಿದೆ. ಆದರೆ ಇದನ್ನ ಬಿಟ್ಟು ಏಕಾಏಕಿ ಪಿಜಿ ಮೆಡಿಕಲ್ ಮತ್ತು ಡೆಂಟಲ್ ಸೀಟುಗಳ ಶುಲ್ಕವನ್ನು ಸರ್ಕಾರ ಹೆಚ್ಚಿಸದೆ.

ಹೌದು…  ಈಗಾಗಲೇ ಕೊರೊನಾ ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. 10-15% ಶುಲ್ಕ ಪ್ರತಿ ವರ್ಷ ಹೆಚ್ಚಳ ಆಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ಮತ್ತಷ್ಟು ಶುಲ್ಕ ಹೆಚ್ಚಳ ಮಾಡಿದೆ. ಇನ್ನೆರಡು ದಿನಗಳಲ್ಲಿ ಸಿಟಿಇ ಕೌನ್ಸಿಲಿಂಗ್ ಇದೆ. ಈಗ ದಿಢೀರ್ ಅಂತ ಸರ್ಕಾರ ಹೊಸ ಶುಲ್ಕದ ಪಟ್ಟಿ ಬಿಡುಗಡೆ ಮಾಡಿದೆ.  ಖಾಸಗಿ ಕಾಲೇಜು, ಖಾಸಗಿ ವಿವಿಗಳು, ಡೀಮ್ಡ್ ವಿವಿಗಳ ಸೀಟುಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಖಾಸಗಿ ಕೋಟಾದ ಸೀಟುಗಳಿಗೆ ಶೇ. 30ರಷ್ಟು ಶುಲ್ಕ ಅಧಿಕವಾಗಿದೆ. ಇನ್ನೂ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಶೇ. 20ರಷ್ಟು ಶುಲ್ಕವನ್ನು ಸರ್ಕಾರ ಹೆಚ್ಚಿಸಿದೆ.

ಸರ್ಕಾರಿ ಕಾಲೇಜುಗಳ ಶುಲ್ಕ ಹಚ್ಚಳ ಇಲ್ಲ ಸರ್ಕಾರಿ ಕಾಲೇಜುಗಳ ಸೀಟು ಶುಲ್ಕ ಹೆಚ್ಚಳ ಇಲ್ಲ. ಆದರೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಮತ್ತು ಮ್ಯಾನೇಜ್‌ಮೆಂಟ್ ಕೋಟಾದ ಶುಲ್ಕವನ್ನು ಮಾತ್ರ ಸರ್ಕಾರ ಹೆಚ್ಚಳ ಮಾಡಿದೆ.

2020- 21ನೇ ಸಾಲಿನ ಶುಲ್ಕ ವಿವರ

ಮೆಡಿಕಲ್ – ಖಾಸಗಿ ಕೋಟಾ ಕ್ಲಿನಿಕಲ್ – 11,34,705 ರೂ. ಪ್ಯಾರಾ ಕ್ಲಿನಿಕಲ್ – 2,83,677 ರೂ. ಪ್ರಿ-ಕ್ಲಿನಿಕಲ್ – 1,42,698 ರೂ.

ಮೆಡಿಕಲ್ – ಖಾಸಗಿ ಕಾಲೇಜ್‌ನಲ್ಲಿ ಸರ್ಕಾರಿ ಕೋಟಾ ಕ್ಲಿನಿಕಲ್ – 6,98,280 ರೂ. ಪ್ಯಾರಾ ಕ್ಲಿನಿಕಲ್ – 1,74,570 ರೂ. ಪ್ರಿ-ಕ್ಲಿನಿಕಲ್ – 87,286 ರೂ.

ಡೆಂಟಲ್ ಕೋರ್ಸ್ ಖಾಸಗಿ ಕಾಲೇಜು ಕೋಟಾ – 6,05,176 ರೂ. ಖಾಸಗಿ ಕಾಲೇಜಲ್ಲಿ ಸರ್ಕಾರಿ ಕೋಟಾ – 3,57,076 ರೂ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights