ಲಾಕ್​ಡೌನ್ ವಿಸ್ತರಣೆ : ಹಸಿರು ವಲಯದಲ್ಲಿ ಷರತ್ತು ಬದ್ಧ ಮದ್ಯ ಮಾರಾಟ..!

ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಖ್ ಡೌನ್ ಏನೋ ಮುಂದುವರೆಸಲಾಗಿದೆ. ಆದರೆ ಕೆಲವು ಹಸಿರು ವಲಯಗಳಲ್ಲಿ ಷರತ್ತು ಬದ್ಧ ಮದ್ಯ ಮಾರಾಟಕ್ಕೆ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಿದೆ.

ಹೌದು…. ನಿನ್ನೆ ಸಂಜೆ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಮೇ 4ರಿಂದ ಮೇ 17ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿ, ಮದ್ಯ ಮಾರಟಕ್ಕೆ ಷರತ್ತು ಬದ್ಧ ಅನುಮತಿ ನೀಡಿದೆ.

ಕೇಂದ್ರ ಸರ್ಕಾರ ನೀಡಿದ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳು ತುಸು ಭಿನ್ನವಾಗಿರಲಿವೆ. ಈ ನಿಯಮಾವಳಿಗಳೇನು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ. ಅದರಂತೆ ಹಸಿರು ವಲಯದ ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆರೆಂಜ್ ಜೋನ್​ನ ಪಟ್ಟಿಯಲ್ಲಿರುವ ಪ್ರದೇಶಗಳಿಗೂ ವಿನಾಯಿತಿಗಳನ್ನು ಕಲ್ಪಿಸಲಾಗಿದೆ. ಆದರೆ ರೆಡ್ ಜೋನ್​ನಲ್ಲಿರುವ ಪ್ರದೇಶಗಳಲ್ಲಿ ಕಠಿಣ ನಿಯಮಗಳು ಮುಂದುವರಿಯಲಿವೆ. ಹಸಿರು ವಲಯದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

ಹಸಿರು ವಲಯದ ಜಿಲ್ಲೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಬಹುದಾಗಿದೆ. ಆದರೆ,  ಇಲ್ಲೂ ಕೆಲವು ನಿಯಮಗಳನ್ನು ವಿಧಿಸಲಾಗಿದೆ. ಮದ್ಯದಂಗಡಿಗಳಲ್ಲಿ ಕನಿಷ್ಠ ಪಕ್ಷ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಮತ್ತು ಏಕಕಾಲದಲ್ಲಿ ಐದು ಜನರಿಗಿಂತ ಹೆಚ್ಚಿಗೆ ಜನರು ಸೇರಬಾರದು ಎಂಬ ನಿಯಮ ವಿಧಿಸಲಾಗಿದೆ. ಹಾಗೆಯೇ, ಪಾನ್​ ಶಾಪ್​ ತೆರೆಯುವುದಕ್ಕೂ ಅನುಮತಿ ನೀಡಲಾಗಿದೆ.

ದೇಶವ್ಯಾಪಿ ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ನಿರ್ಧಾರ ಮುಂದುವರಿಯಲಿದೆ. ಹಾಗೆಯೇ, ಶಾಲೆ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಸಿನಿಮಾ ಹಾಲ್, ಮಾಲ್​ಗಳು, ಹೊಟೆಲ್, ರೆಸ್ಟೋರೆಂಟ್​ಗಳ ಬಂದ್ ಮುಂದುವರಿಯುತ್ತದೆ. ಜನಜಾತ್ರೆ ಸೇರುವ ಕಾರ್ಯಕ್ರಗಳು ನಿಷಿದ್ಧ. ಪೂಜಾ ಮಂದಿರಗಳಿಗೂ ಅವಕಾಶ ಇರುವುದಿಲ್ಲ. ಮೊದಲಿದ್ದ ಇವೆಲ್ಲ ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯಲಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights