ಇಂದು ಮದ್ಯಪ್ರಿಯರಿಗೆ ಸುದಿನ : ಬಾರ್ಗಳೆಲ್ಲಾ ಓಪನ್ – ಕಿಲೋಮೀಟರ್’ಗಟ್ಟಲೆ ಕ್ಯೂ
ರಾಜ್ಯದಲ್ಲಿ ಲಾಕ್ ಡೌನ್ ನಿಂದಾಗಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇಂದು ಬಾರ್ ಶಾಪ್ ಗಳು ತೆರೆಯುವ ಮುನ್ನವೇ ಜನ ಸರಧಿ ಸಾಲಿನಲ್ಲಿ ನಿಂತು ಮದ್ಯ ಖರೀದಿಗೆ ಶಿಸ್ತು ಕಾಯ್ದುಕೊಳ್ಳುತ್ತಿರುವುದು ಬಹುತೇಕ ಕಡೆ ಕಂಡು ಬಂತು.
ಹೌದು… ಸುಮಾರು ಒಂದು ತಿಂಗಳಕ್ಕೂ ಅಧಿಕ ದಿನಗಳವರೆಗೂ ಎಣ್ಣೆಗಾಗಿ ಕಾದು ಕುಳಿತಿದ್ದ ಮದ್ಯಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ. ಅದೆಷ್ಟೋ ಕಡೆ ರಾತ್ರಿಯಿಂದಲೇ ಮದ್ಯ ಖರೀದಿಗೆ ಜನ ಕಾದು ಕುಳಿತ ಘಟನೆಗಳು ನಡೆದಿವೆ.
ಲಾಕ್ ಡೌನ್ ಏಕಾಏಕಿ ಬಂದ್ ಆದ ಕಾರಣ ಅದೆಷ್ಟೋ ಮದ್ಯವ್ಯಸನಿಗಳು ಮದ್ಯವಿಲ್ಲದೇ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ರಾಜ್ಯದ ಎಲ್ಲ ಕಡೆಗಳಲ್ಲಿ ಇಂದಿನಿಂದ ಎಂಎಸ್ಐಎಲ್, ಎಂಆರ್ಪಿ, ವೈನ್ ಶಾಪ್ಗಳು ತೆರೆಯಲ್ಪಟ್ಟಿವೆ. ಹೀಗಾಗಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿ ಮದ್ಯ ಖರೀದಿ ಮಾಡುತ್ತಿದ್ದಾರೆ.
ಮದ್ಯ ಖರೀದಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದ್ದು, ಎಣ್ಣೆ ಕೊಂಡು ಕೊಳ್ಳುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಬಾರ್ ಎದುರು ಬಾಕ್ಸ್ಗಳನ್ನು ಹಾಕಲಾಗಿದೆ. ಎಲ್ಲರೂ ಬಾಕ್ಸ್ನಲ್ಲೇ ಬಂದು ಮದ್ಯ ತೆಗೆದು ತೆರಳಬೇಕು. ಇನ್ನು, ಬಾರ್ಗಳಲ್ಲಿ ಕೇವಲ ಪಾರ್ಸಲ್ ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ನೂಕು ನುಗ್ಗಲು ಆಗದಂತೆ ಎಚ್ಚರ ವಹಿಸಿ ಪೊಲೀಸರು ಬ್ಯಾರಿಕೇಡ್ಗಳನ್ನು ಕೂಡ ಹಾಕಿದ್ದಾರೆ.
ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ವದಗಿಸಲಾಗಿದೆ.

