ವಿಶ್ಯಾದ್ಯಂತ ಕೊರೊನಾ ಅಟ್ಟಹಾಸ : 35 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು – 2.48 ಲಕ್ಷ ಜನ ಬಲಿ!
ಕಾಲಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ವಿಶ್ವಾದ್ಯಂತ 35 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 2.48 ಲಕ್ಷ ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ.
ಜಗತ್ತಿನಾದ್ಯಂತ 35,66,330 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ಹರಡಿದ್ದು, ಈವರೆಗೆ ಒಟ್ಟು 2,48,286 ಮಂದಿ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. 11,54,072 ಮಂದಿ ಸೊಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ತಗಲಿರುವ ದೇಶಗಳಲ್ಲಿ ವಿಶ್ವದ ದೊಡ್ಡಣ್ಣ ಮೇಲುಗೈ ಸಾಧಿಸಿದ್ದು, ಕಳೆದ 24 ಗಂಟೆಗಳಲ್ಲಿ 10,550 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಒಟ್ಟು 11,88,122 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೆ 68,598 ಮಂದಿ ಕೊರೊನಾ ವೈರಸ್ನಿಂದ ಸಾವನ್ನಪ್ಪಿದ್ದಾರೆ.
ಇನ್ನೂ ಸ್ಲೇನ್ ನಲ್ಲಿ 2,47,122 ಜನ ಸೋಂಕಿತರಿದ್ದು, ಹಾಗೆಯೇ ಇಟಲಿಯಲ್ಲಿ 2,10,717 ಮಂದಿಗೆ ಸೋಂಕು ತಗುಲಿದೆ. ಬ್ರಿಟನ್ನಲ್ಲಿ 1,86,599, ಫ್ರಾನ್ಸ್ ನಲ್ಲಿ 1,68,693, ಜರ್ಮನಿಯಲ್ಲಿ 1,65,664 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ವರದಿಯಾಗಿದೆ.
ಜೊತೆಗೆ ಭಾರತದಲ್ಲಿ 42,533 ಮಂದಿಗೆ ಸೋಂಕು ತಗುಲಿದ್ದು, 1,391 ಮಂದಿ ಕೊರೊನಾ ವೈರಸ್ ಸೊಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಒಟ್ಟು 11,775 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೆಯೇ ಪಾಕಿಸ್ತಾನದಲ್ಲಿ 20,084 ಸೋಂಕು ಪತ್ತೆಯಾಗಿದ್ದು, 457 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 212 ರಾಷ್ಟ್ರಗಳು ಹಾಗೂ ಪ್ರಾಂತ್ಯಗಳು ಕೊರೊನಾ ಹಾವಳಿಗೆ ತತ್ತರಿಸಿ ಹೋಗಿವೆ.

