ಉದ್ಯೋಗವೂ ಇಲ್ಲ, ಜೀವನವೂ ಇಲ್ಲ; ವಲಸಿಗರ ಅಳಲು ಕೇಳುವವರೂ ಇಲ್ಲ!

ಕಲಬುರ್ಗಿ ಜಿಲ್ಲೆಯ ಚಿಂಚೋಲಿ ತಾಲ್ಲೂಕಿನ ಹೇಮ್ಲಾ ನಾಯಕ್ ತಂಡದ ನಾಮಾದೇವ್ ಎಂಬುವವರು ಕಟ್ಟಡ ಕಾರ್ಮಿಕರಾಗಿ ಮಹಾರಾಷ್ಟ್ರದ ಕಲ್ಯಾಣ್ ಎಂಬ ಪ್ರದೇಶದಲ್ಲಿ ದುಡಿಯುತ್ತಿದ್ದರು. ಲಾಕ್ ಡೌನ್ ಪರಿಣಾಮವಾಗಿ ಅಲ್ಲೇ ನೆಲೆಸಿದ್ದರು. ಆದರೆ, ದುಡಿಮೆಯೂ ಇಲ್ಲದೆ, ಜೀವನೋಪಾಯಕ್ಕೆ ಹಣವೂ ಇಲ್ಲದೆ ಪರದಾಡಿದ್ದ ನಾಮಾದೇವ್‌, ಲಾಕ್ ಡೌನ್ ಸಡಿಲಗೊಂಡ ನಂತರ ತಮ್ಮ ಹಳ್ಳಿಗೆ ಹಿಂತಿರುಗಿದ್ದಾರೆ. ಆದರೆ, ಪರಿಸ್ಥಿತಿ ಅವರ ಬೆನ್ನುಹತ್ತಿದ್ದು, ಊರಿನಲ್ಲಿಯೂ ಅದೇ ಗೋಳು, ದುಡಿಯಲು ಕೆಲಸವಿಲ್ಲ, ಕುಟುಂಬ ನಿರ್ವಹಣೆ ಕಡುಕಷ್ಟದಿಂದಾಗಿದ್ದು, ಬದುಕಿನ ಬಂಡಿ ಎಳೆಯಲು ರೋಸುಹೋಗಿದ್ದಾರೆ. ಇದು, ಕೇವಲ ಒಬ್ಬ ಕಾರ್ಮಿಕನ ಕಥೆಯಲ್ಲ ಸಾವಿರಾರು ಕಾರ್ಮಿಕರ ವ್ಯಥೆ.

ಕಲ್ಯಾಣ ಕರ್ನಾಟಕ ಪ್ರದೇಶಗಳಿಂದ ಲಕ್ಷಾಂತರ ಕಾರ್ಮಿಕರು ಬೆಂಗಳೂರು, ಮುಂಬೈ, ಪುಣೆ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿ ದುಡಿಯುತ್ತಿದ್ದರು. ಈ ಕಾರ್ಮಿಕರು ಲಾಕ್ ಡೌನ್ ಪರಿಣಾಮವಾಗಿ ತಮ್ಮ ತಮ್ಮ ಹಳ್ಳಿಗಳಿಗೆ ಹಿಂತಿರುಗಿದ್ದಾರೆ. ತಮ್ಮ ಊರುಗಳಲ್ಲಿ ಕೆಲಸವೂ ಇಲ್ಲದೆ ದಿನನಿತ್ಯದ ಚಟುವಟಿಕೆಗಳನ್ನು ನಿಭಾಯಿಸಲೂ ಆಗದೇ, ಚಿಂತಾಕ್ರಾಂತರಾಗಿದ್ದಾರೆ.

ಜೀವನ ನಡೆಸಲು ಯಾವುದೋ ಒಂದು ರೀತಿಯ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಎಲ್ಲಾ ರೀತಿಯ ಕಾರ್ಮಿಕರು ಬೇರೆ ರೀತಿಯ ಕೆಲಸಗಳ ಕೌಶಲ್ಯವನ್ನು ಹೊಂದಿಲ್ಲ. ಇತರ ಕೆಲಸಗಳೂ ಬಾರದೆ, ತಾವು ಮಾಡಬಲ್ಲ ಕೆಲಸಗಳೂ ಸಿಗದೆ ಅವರ ಬದುಕಿನ ಸ್ಥಿತಿ ಮತ್ತಷ್ಟು ಕುಗ್ಗಿ ಹೋಗಿದೆ. ದೇಶ ಕಟ್ಟುವಲ್ಲಿ ಬುನಾದಿ ಯಾಗಿದ್ದ ಕಾರ್ಮಿಕರ ಕೈಕಟ್ಟಿಹಾಕಿದ್ದು ರಾಜ್ಯವೂ ಹಿಂದುಳಿಯುವಂತಾಗಿದೆ.

ಅರ್ಥಶಾಸ್ತ್ರಜ್ಞೆ ಸಂಗೀತ ಕಟ್ಟಿಮಣಿ ಅವರ ಪ್ರಕಾರ ಕಲ್ಯಾಣ ಕರ್ನಾಟಕದ ಉಷ್ಣತೆ ಮತ್ತು ನೀರಿನ ಅಭಾವವೇ ಆ ಪ್ರದೇಶದ ಶಾಪವಾಗಿದೆ. ಹಾಗಾಗಿ ಅಲ್ಲಿನ ಕಾರ್ಮಿಕರಿಗೆ ಸರ್ಕಾರ ಎಂಜಿಎನ್ಆರ್ ಇಜಿಎ ಯೋಜನೆ ಅಡಿಯಲ್ಲಿ ಹೆಚ್ಚು ದಿನಗಳ ಕಾಲ ಕೆಲಸ ಒದಗಿಸಿಕೊಡಬೇಕು.

ಹೇಗೆಂದರೆ, ಇದೊಂದು ಉಷ್ಣಾಂಶ ಪ್ರದೇಶವಾಗಿದ್ದು ಇಲ್ಲಿ ಗಿಡಗಳನ್ನು ನೆಡುವ ಮೂಲಕ ಅರಣ್ಯ ಪ್ರದೇಶವನ್ನು ಬೆಳೆಸಿದರೆ ಕಾರ್ಮಿಕರಿಗೆ ಕೆಲಸವೂ ಸಿಕ್ಕಾಂತಾಗುತ್ತೆ ಹಾಗೂ ಅರಣ್ಯವೂ ಬೆಳೆಯುತ್ತದೆ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಮನೆಗೆ ಮರಳುತ್ತಿರುವ ಸಂತೋಷಕ್ಕಿಂತ ಭವಿಷ್ಯ ಮಂಕಾಗಿ ಕಾಣುತ್ತಿದೆ: ವಲಸೆ ಕಾರ್ಮಿಕರ ಅಂತರಾಳದ ಗೋಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights