ಘೋಷಣೆಗಷ್ಟೇ ಸೀಮಿತವಾದ ಟಿಕೆಟ್ ರಹಿತ ಪ್ರಯಾಣ; ಕಾರ್ಮಿಕರಿಂದ ವಸೂಲಿಗಿಳಿದ ಸರ್ಕಾರ
ವಿವಿಧ ರಾಜ್ಯಗಳಿಂದ ಕೂಲಿಗಾಗಿ ಬಂದಿದ್ದ ವಲಸೆ ಕಾಮಿ೯ಕರನ್ನು ಉಚಿತವಾಗಿ ಅವರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆಂದು ಹೇಳಿಕೊಂಡಿದ್ದ ಸರ್ಕಾರ ಕಾರ್ಮಿಕರನ್ನು ಸುಲಿಗೆ ಮಾಡುವುದನ್ನು ಇನ್ನೂ ಬಿಟ್ಟಿಲ್ಲ. ರಾಜ್ಯದ ಜನರೆದುರು ಉಚಿತ ರೈಲು ಸೇವೆ ಕಲ್ಪಸಿದ್ದೇವೆಂದು ಬೋಂಗು ಬಿಟ್ಟಿರುವ ಸರ್ಕಾರ ಕಾರ್ಮಿಕರ ಕಣ್ಣಿಗೆ ಮಣ್ಣೆರಚುತ್ತಿರುವುದು ಯಾರಿಗೂ ತಿಳಿದಿಲ್ಲ. ಹೆಸರಿಗೆ ಉಚಿತ ಪ್ರಯಾಣವೆಂದು ಘೋಷಿಸಿ ಕಾರ್ಮಿಕರಿಂದಲೇ ಪ್ರಯಾಣದರವನ್ನು ಕತ್ತುಕೊಳ್ಳುತ್ತಿರುವುದು ನಿನ್ನೆ ಬೆಳಕಿಗೆ ಬಂದಿದೆ.
40ಕ್ಕೂ ಹೆಚ್ಚು ದಿನಗಳ ಕಾಲ ದೇಶದ ಮೇಲೆ ಹೇರಲಾದ ಲಾಕ್ಡೌನ್ನಿಂದಾಗಿ ಕೂಲಿಯೂ, ಕೆಲವೂ ಇಲ್ಲದೆ ಹಸಿವಿನಿಂದ ಕಂಗೆಟ್ಟಿದ್ದ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ರೈಲುಗಳನ್ನು ಪುನರಾರಂಭಿಸಿದೆ. ಅಲ್ಲದೆ, ತೀವ್ರ ಟೀಕೆಗಳ ನಂತರ ಆ ಕಾರ್ಮಿಕರಿಗೆ ಉಚಿತ ಪ್ರಯಾಣವನ್ನೂ ಘೋಷಿಸಿದೆ. ಆದರೆ, ಕರ್ನಾಟಕ ಸರ್ಕಾರ ಕಾರ್ಮಿಕರಿಂಲೇ ಅಷ್ಟೂ ಪ್ರಯಾಣದರವನ್ನು ಕಿತ್ತುಕೊಳ್ಳುತ್ತಿದೆ. ಕೇವಲ ರೈಲಿನ ಟಿಕೆಟ್ ದರವನ್ನಷ್ಟೇ ಅಲ್ಲದೆ, ರೈಲ್ವೇ ನಿಲ್ದಾಣಕ್ಕೆ ಕರೆದೊಯ್ಯುವ ಬಿಎಂಟಿಸಿ ದರವನ್ನೂ ಸೇರಿಸಿ ಸುಲಿಗೆ ಮಾಡುತ್ತಿದೆ.
ಮಾರ್ಚ್ 08 ರಂದು ಲಖನೌಗೆ ರೈಲಿನಲ್ಲಿ ಹೊರಟ ಕಾರ್ಮಿಕರಿಂದ ರಾಜ್ಯ ಸರ್ಕಾರವು ತಲಾ 970 ರೂಗಳನ್ನು (ಬಿಎಂಟಿಸಿ ವೆಚ್ಚವೂ ಸೇರಿ) ಪಡೆದುಕೊಂಡಿದೆ.

ಸರ್ಕಾರ ಸುಲಿಗೆ ಯಾವಮಟ್ಟಿಗೆ ಇದೆ ಎಂದರೆ, ರೈಲು ನಿಲ್ದಾಣಕ್ಕೆ ಕರೆದೊಯ್ಯುವ ಬಿಬಿಎಂಸಿ ಬಸ್ಗಳನ್ನು ಏರುವ ಮೊದಲೇ 97೦ ರೂಗಳನ್ನು ಕೊಟ್ಟು ಬಿಎಂಟಿಸಿ ಟಿಕೆಟ್ ಖರೀಸಬೇಕು. ನಂತರ ರೈಲು ಏರಿದ ಬಳಿಕ ಬಿಎಂಟಿಸಿ ಟಿಕೆಟ್ ವಾಪಸ್ ನೀಡಿ ೮೩೦ ರೂಗಳ ರೈಲ್ವೇ ಟಿಕೆಟ್ ಪಡೆದುಕೊಳ್ಳಬೇಕು. ಬಿಎಂಟಿಸಿ ಪ್ರತಿ ಕಾಮಿ೯ಕರಿಂದ 140 ರೂಗಳನ್ನು (ಎಸಿ ಬಸ್ಗಳ ದರ) ಸಾಮಾನ್ಯ ಬಸ್ಗಳಿಗೆ ವಲಸೆ ಕಾಮಿ೯ಕರಿಂದ ಸುಲಿಗೆ ಮಾಡುತ್ತಿದೆ. ಈ ಮಧ್ಯೆ 1,000 ಕೊಟ್ಟವರ 30 ರೂ ಚಿಲ್ಲರೆ ದುಡ್ಡೂ ವಾಪಸ್ ಬಂದಿಲ್ಲ ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ.

ನಾಲ್ಕು ಜನರ ಕುಟುಂಬವೊಂದು ತಮ್ಮೂರು ತಲುಪಲು 4,೦೦೦ ರೂಗಳನ್ನು ಭರಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದು, ಇಲ್ಲಿ ಇದು ಪರದಾಡಲಾದರೆ ರೈಲು ಏರಿ ತಮ್ಮೂರಿನ ಹಾದಿ ಹಿಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸಕಾ೯ರಗಳು ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾಮಿ೯ಕರ ನೆರವಿಗೆ ಧಾವಿಸದೆ, ಅದಕ್ಕೆ ಪ್ರತಿಯಾಗಿ ಪ್ರತಿ ಹಂತದಲ್ಲೂ ಅವರನ್ನು ದೋಚುತ್ತಿರುವಂತಹ ನೀಚತನವನ್ನು ತೋರುತ್ತಿವೆ. ಕಾರ್ಮಿಕರ ಮೂಲಭೂತ ಹಕ್ಕುಗಳನ್ನೇ ಬುಡಮೇಲು ಮಾಡಿರುವ ಸರ್ಕಾರಗಳು ಇನ್ನಷ್ಟು ಸುಲಿಗೆ ಮಾಡಲು ಮುಂದಾಗಿರುವುದು ಸರ್ಕಾರ ಬಡ ವಿರೋಧಿ, ಕಾರ್ಮಿಕ ವಿರೋಧಿತನವನ್ನು ಸಾಬೀತು ಮಾಡಿದೆ.
“ಕೋಟಿಗಟ್ಟಲೆ ಖರ್ಚು ಮಾಡಿ ಸಿರಿವಂತರ ಬಂಡವಾಳಿಗರ ಕುಟುಂಬದವರನ್ನು ವಿದೇಶಗಳಿಂದ ಕರೆತಂದ ಹಾಗೂ ಕಾರ್ಪೋರೇಟ್ ಖುಳಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡುತ್ತಿರುವ, ಅವರಿಗೆ ಮತ್ತಷ್ಟು ಅನುದಾನವನ್ನು ನೀಡುತ್ತಿರುವ ಕೇಂದ್ರ ಬಿಜೆಪಿ ಸರಕಾರ ಬಡ ಕಾಮಿ೯ಕರಿಗೆ ಉಚಿತ ರೈಲಿನ ವ್ಯವಸ್ಥೆ ಮಾಡದೆ ತನ್ನ ಕಾಮಿ೯ಕ ವಿರೋಧಿ ನೀತಿಯನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ” ಎಂದು ಸಿಪಿಐ(ಎಂ)ನ ಕೆ.ಎನ್.ಉಮೇಶ್ ಹೇಳಿದ್ದಾರೆ.

