24 ಗಂಟೆಯಲ್ಲಿ ದೇಶಾದ್ಯಂತ 3,722 ಹೊಸ ಕೊರೊನಾ ಕೇಸ್ – 78,003ಕ್ಕೇರಿದ ಸೋಂಕಿತರ ಸಂಖ್ಯೆ!
ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಕಡಿಮೆಯಾಗುವ ಲಕ್ಷಣಗಳೇ ಗೋಚರವಾಗುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕಿಲ್ಲರ್ ಕೊರೊನಾಗೆ 134 ಜನ ಬಲಿಯಾಗಿದ್ದಾರೆ. ಜೊತೆಗೆ ಹೊಸದಾಗಿ 3,722 ಕೇಸ್ ದಾಖಲಾಗಿದ್ದು ಈವರೆಗೆ ದೇಶಾದ್ಯಂತ 78,003ಕ್ಕೇರಿಕೆಯಾಗಿದೆ ಸೋಂಕಿತರ ಸಂಖ್ಯೆ.
ಹೌದು… ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 134 ಜನರನ್ನು ಬಲಿ ಪಡೆದ ಮಹಾಮಾರಿ ಕೊರೊನಾ ಈ ವರೆಗೆ 2,545 ಜನರನ್ನ ಸಾವನಿ ದವಡೆಗೆ ನೂಕಿದೆ. ಇನ್ನೂ ಹೊಸದಾಗಿ ದಾಖಲಾದ 3,722 ಪ್ರಕರಣಗಳನ್ನೊಳಗೊಂಡಂತೆ ಈವರೆಗೆ 78,003ಕ್ಕೆ ಸೋಂಕಿತರ ಸಂಖ್ಯೆ ದಾಖಲಾಗಿದೆ. ಸೋಂಕು ತಗಲುವ ರೇಸ್ ನಲ್ಲಿ ಕೊರೊನಾ ವೈರಸ್ ದೇಶದ ಮಹಾರಾಷ್ಟ್ರವನ್ನು ಮುನ್ನಡೆಸುತ್ತಿದೆ. ಈವರೆಗೆ ಮಹಾರಾಷ್ಟ್ರದಲ್ಲಿ 975 ಜನರನ್ನು ಬಲಿ ಪಡೆದ ಡೆಡ್ಲಿ ಸೋಂಕು 25,922 ಜನರ ದೇಹ ಹೊಕ್ಕಿದೆ. ಈ ಪೈಕಿ 5,547 ಮಂದಿ ಗುಣಮುಖರಾಗಿದ್ದಾರೆ.
ಇನ್ನೂಕೇರಳದಲ್ಲಿ 535 ಮಂದಿಯಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. 490 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ತಮಿಳುನಾಡಿನಲ್ಲಿ 9,227 ಮಂದಿಗೆ ಕೊರೊನಾ ತಗುಲಿದ್ದು, 64 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಗುಜರಾತ್ ನಲ್ಲಿ 9,268 ಮಂದಿ ಸೋಂಕಿಗೆ ತುತ್ತಾಗಿದ್ದು, 566 ಮಂದಿ ಮರಣಹೊಂದಿದ್ದಾರೆ. ತೆಲಂಗಾಣದಲ್ಲಿ 1,367 ಮಂದಿ ಕೊರೊನಾ ತುತ್ತಾಗಿದ್ದು, 34 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಆಂಧ್ರಪ್ರದೇಶದಲ್ಲಿ 2,137 ಮಂದಿಗೆ ಸೋಂಕು ತಗುಲಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 7,998 ಮಂದಿ ಕೊರೊನಾಗೆ ತುತ್ತಾಗಿದ್ದು, 106 ಮಂದಿ ಮೃತಪಟ್ಟಿದ್ದಾರೆ. ಸುಮಾರು 2,858 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ 964 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 34ಕ್ಕೆ ಏರಿದೆ. ಒಟ್ಟು 451 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಸೇರಿದ್ದಾರೆ.

