Lockdown 4: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ; ಏನೆಲ್ಲಾ ಲಭ್ಯ
ಕೊರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. 54 ದಿನಗಳ ಲಾಕ್‌ಡೌನ್ ಇಂದಿನಿಂದ 4ನೇ ಹಂತಕ್ಕೆ ಕಾಲಿರಿಸಿದೆ. ಮೇ 18 ರಿಂದ ಮೇ 31ರವರೆಗೆ ಇನ್ನೂ 2 ವಾರಗಳ ಕಾಲ ಲಾಕ್‌ಡೌನ್ ಮುಂದುವರೆಯಲಿದೆ.
04ನೇ ಹಂತದ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, 54 ದಿನಗಳಿಂದ ಇದ್ದ ಹಲವು ನಿರ್ಬಂಧಗಳನ್ನು ಸಡಿಗೊಳಿಸಿದೆ.
ಆದರೆ, ರೈಲು ಹಾಗೂ ವಿಮಾನಗಳ ಸೇವೆಗಳ ಮೇಲಿನ ನಿರ್ಬಂಧವನ್ನು ಎಂದಿನಂತೆ ಮುಂದುುವರೆಸಲಾಗಿದೆ. ಈಗಾಗಲೇ ಚಲಿಸುತ್ತಿರುವ ಶ್ರಮಿಕ ಸ್ಫೆಷಲ್, ರಾಜಧಾನಿ ಎಕ್ಸ್’ಪ್ರೆಸ್, ಸರಕು ಸಾಗಣೆ ರೈಲು ಹಾಗೂ ಕರೆತರಲು ಕಾರ್ಯಾಚರಿಸುತ್ತಿರುವ ವಿಮಾನ, ಸರಕು ಸಾಗಣೆ ವಿಮಾನ ಹಾಗೂ ಏರ್ ಆ್ಯಂಬುಲೆನ್ಸ್ ಗಳಿಗೆ ನಿರ್ಬಂಧ ಇರುವುದಿಲ್ಲ.
ಇನ್ನು ಕೆಂಪು ವಲಯದಲ್ಲಿನ ಕಂಟೈನ್ಮೆಟ್ ಪ್ರದೇಶಗಳಲ್ಲಿ ಲಾಕ್’ಡೌನ್ ನಿರ್ಬಂಧಗಳು ಹಿಂದಿನಂತೆಯೇ ಮುಂದುವರೆಯಲಿದ್ದು, ಜನರ ಅಗತ್ಯ ಚಟುವಟಿಕೆಗಳಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಉಳಿದ ಕಾರಣಗಳಿಗೆ ಜನರು ಕಂಟೈನ್ಮೆಂಟ್ ವಲಯಗಳಿಂದ ಹೊರಗೆ ಸಂಚರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, ರೋಗ ಲಕ್ಷಣ ಇರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ವೇಳೆ ಮನೆಯಿಂದ ಹೊರಬಂದು ಓಡಾಡುವುದಕ್ಕೆ ಅವಕಾಶ ಇರುವುದಿಲ್ಲ.
ಇದೇ ವೇಳೆ ರಾತ್ರಿ 7ಗಂಟೆಯಿಂದ ಬೆಳಿಗ್ಗೆ 7ಗಂಟೆಯವರೆಗೆ ಜನರ ಅನಗತ್ಯ ಓಡಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಆದರೆ, ಕರ್ನಾಟಕದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ತಿಳಿಸಿದ್ದರು. ಅಲ್ಲದೆ, ಬೆಂಗಳೂರಿನಲ್ಲಿ ಓಲ, ಉಬಸ್ ಕ್ಯಾಬ್ ಸಂಚಾರಕ್ಕೂ ಹಾಗೂ ಬಾರ್, ರೆಸ್ಟೋರೆಂಟ್‌ಗಳಿಗೂ ಅನುಮತಿ ನೀಡಿಲ್ಲ.

