KSRTC/BMTC ಸಂಚಾರಕ್ಕೆ ಗ್ರೀನ್ ಸಿಗ್ನಲ್; ನಾಳೆಯಿಂದ ಯಾವೆಲ್ಲಾ ಲಭ್ಯ?
ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಕೆಎಸ್ಆರ್ಟಿಸಿ ಬಿಎಂಟಿಸಿ ಬಸ್ ಸಂಚಾರ ನಾಳೆ ಬೆಳಿಗ್ಗೆಯಿಂದ ಆರಂಭವಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ನಾಲ್ಕನೇ ಹಂತದ ಲಾಕ್ಡೌನ್ ಕುರಿತ ಮಾರ್ಗಸೂಚಿ ಹೊರಬಂದ ನಂತರ ಸುದ್ದಿಗೋಷ್ಟಿ ಕರೆದು ರಾಜ್ಯದ ಲಾಕ್ಡೌನ್ ಮುಂದುವರಿಕೆ ಬಗ್ಗೆ ಯಡಿಯೂರಪ್ಪನವರು ವಿವರಿದಿದ್ದಾರೆ.
ಲಾಕ್ಡೌನ್ 04 ಮುಖ್ಯಾಂಶಗಳು:
- ಮೇ 31ರ ವರೆಗೆ ಲಾಕ್ಡೌನ್ ಮುಂದುವರಿಕೆ.
- ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಖಾಸಗೀ ಬಸ್ ಸಂಚಾರಕ್ಕೆ ಅವಕಾಶ. ಬಸ್ಗಳಲ್ಲಿ ಕೇವಲ 30 ಪ್ರಯಾಣಿಕರಿಗೆ ಮಾತ್ರ ಸ್ಥಳಾವಕಾಶ. ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
- ಆಟೋ ರಿಕ್ಷಾ, ಟ್ಯಾಕ್ಸಿ ಮ್ಯಾಕ್ಸ್ ಕ್ಯಾಬ್ ಓಡಾಟಕ್ಜೆ ಅವಕಾಶ. ಆಟೋ ಮತ್ತು ಟ್ಯಾಕ್ಸಿ ಯಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು, ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಸೇರಿ ಮೂವರು ಪ್ರಯಾಣಿಸಲು ಅವಕಾಶ.
- ರಾಜ್ಯದಲ್ಲಿ ಒಳಭಾಗಗಳಲ್ಲಿ ಮಾತ್ರ ರೈಲುಗಳ ಸಂಚಾರ, ಹೊರ ರಾಜ್ಯಗಳಿಂದ ರೈಲು ಸಂಚಾರ ಇಲ್ಲ.
- ನಮ್ಮ ಮೆಟ್ರೋ ಸಂಚಾರಕ್ಕೆ ನಿರ್ಭಂಧ ಮುಂದುವರಿಕೆ.
- ನಾಳೆಯಿಂದ ಮಾಲ್ , ಸಿನಿಮಾ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿಗಳು ತೆರೆಯಬಹುದು.
- ಕಂಟೇನ್ಮೆಂಟ್ ಝೋನ್ ಗಳಲ್ಲಿ ಬಿಗಿ ಭಧ್ರತೆ. ಕಾನೂನು ಬಾಹಿರ ವರ್ತನೆ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು.
- ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಓಡಾಡುವಾಗ ಮಾಸ್ಕ್ ಹಾಕಿಕೊಳ್ಳೋದು ಕಡ್ಡಾಯ. ಉಲ್ಲಂಘಿಸಿದರೆ ದಂಡ.
- ಹೊರ ರಾಜ್ಯಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲು ತೀರ್ಮಾನ.
- ಪ್ರತೀ ಭಾನುವಾರ ಕಂಪ್ಲೀಟ್ ಲಾಕ್ ಡೌನ್.
- ಪಾರ್ಕ್ ಗಳಲ್ಲಿ ಬೆಳಿಗ್ಗೆ ಏಳರಿಂದ ಸಂಜೆ ಒಂಬತ್ತು ಗಂಟೆ ವರೆಗೆ ಅವಕಾಶ.
- ಕಂಟೇನ್ಮೆಂಟ್ ಬಿಟ್ಟು ಎಲ್ಲಾ ಕಡೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ.
- ಸದ್ಯಕ್ಕೆ ಬಸ್ ಟಿಕೆಟ್ ದರ ಏರಿಕೆ ಇಲ್ಲ.ಸಾರಿಗೆ ಇಲಾಖೆಯ ನಷ್ಟವನ್ನು ಸರ್ಕಾರದಿಂದ ಭರಿಸುವ ಕೆಲಸ ಮಾಡಲಾಗುವುದು.
- ಹೋಟೆಲ್ ಗಳಲ್ಲಿ ಪಾರ್ಸೆಲ್ ಮಾತ್ರ.
- ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ತೆರೆಯಲು ಅವಕಾಶ.
- ಕ್ರೀಡೆ ಹಾಗೂ ಕ್ರೀಡಾಂಗಣಗಳಿಗೆ ಅವಕಾಶ – ಪ್ರೇಕ್ಷಕರು ಸೇರುವಂತಿಲ್ಲ. ಆದ್ರೆ ಜಿಮ್ ಓಪನ್ ಇಲ್ಲ.
- ಶರತ್ತು ಬದ್ಧ ಮದುವೆಗೆ ಅವಕಾಶ. 50 ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

