ವೀಕೆಂಡ್ ನಲ್ಲಿ ಜೀ಼ ಕನ್ನಡ ತರುತ್ತಿದೆ, ತ್ರಿವಳಿ ರಿಯಾಲಿಟಿ ಶೋಗಳ ಸಂಭ್ರಮ…
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಜೀ ಕನ್ನಡ ವಾಹಿನಿ, ಕನ್ನಡಿಗರಿಗೆ ನಾನಾ ರೀತಿಯ ವಿಭಿನ್ನ ಪ್ರಯೋಗಗಳ ಮೂಲಕ ರಂಜಿಸುತ್ತಿದೆ. ಅದೇ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಜೀ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಅದೂ ಮೂರು ರೀತಿಯ ರಿಯಾಲಿಟಿ ಶೋಗಳನ್ನು ಜೊತೆಯಾಗಿಯೇ ಪ್ರಸಾರ ಮಾಡಲು ಮುಂದಾಗಿರುವುದು ಸಧ್ಯದ ವಿಶೇಷ. ಈ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುಲು ಸಜ್ಜಾಗಿದೆ.
ಜೀ ಕನ್ನಡದಲ್ಲಿ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.00 ಗಂಟೆಗೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಕಾಲ ಕಳೆದ ತಾರೆಯರ `ಲಾಕ್ ಡೌನ್ ಡೈರೀಸ್’ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಿದ್ಧಪಡಿಸಲಾಗಿದೆ. ಜನಪ್ರಿಯ ತಾರೆಯರು ತಮ್ಮ ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ನೀಡುತ್ತದೆ.
ಸರಿಗಮಪ ಕಾರ್ಯಕ್ರಮದ ಜನಪ್ರಿಯ ನಿರೂಪಕಿ ಅನುಶ್ರೀ ಅವರಿಂದ ವಿನೂತನ ಕಾರ್ಯಕ್ರಮ,`ಕಾಫಿ ವಿಥ್ ಅನು’ ಜೀ಼ ಕನ್ನಡ ಮತ್ತೊಂದು ಆಕರ್ಷಣೆಯಾಗಿದ್ದು ಅನುಶ್ರೀ ಅವರು ಖ್ಯಾತನಾಮರೊಂದಿಗೆ ತರಲೆ, ಹಾಸ್ಯ, ಮಾತುಕತೆ ಮಾಡಿ ನಿಮಗೆ ನಿಮ್ಮ ತಾರೆಯರ ಕಾಣದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳು ಕನ್ನಡ ಕಿರುತೆರೆಯಲ್ಲಿಯೇ ವಿನೂತನ ಪರಿಕಲ್ಪನೆಯಾಗಿದ್ದು ವೀಕ್ಷಕರನ್ನು ರಂಜಿಸಲಿವೆ.

ಈ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಅನುಶ್ರೀ ಅವರೊಂದಿಗೆ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ‘ಕಾಫಿ ವಿಥ್ ಅನು’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೀ಼ ಟಿ.ವಿ.ಯಲ್ಲಿ ಸ ರೆ ಗ ಮ ಪ ಕಾರ್ಯಕ್ರಮದ 25ನೇ ಯಶಸ್ವಿ ವರ್ಷಗಳ ಸಂಭ್ರಮಾಚರಣೆಗೆ ಮೇ 23, 2020ರಂದು ಶನಿವಾರ ಸಂಜೆ 4.30ಕ್ಕೆ 2.5-ಗಂಟೆಗಳ ಲೈವಥಾನ್ ಡಿಜಿಟಲ್ ಮ್ಯೂಸಿಕ್ ಕನ್ಸರ್ಟ್ ಆಯೋಜಿಸಿದೆ. ಈ ನೆಟ್ ವರ್ಕ್ ಸಂಗೀತವನ್ನು ಜನರನ್ನು ಒಗ್ಗೂಡಿಸಲು ಮತ್ತು ಈ ಸಾಂಕ್ರಾಮಿಕದ ಸಮಯದಲ್ಲಿ ಮನೆಯಲ್ಲಿಯೇ ರಂಜಿಸಲು ಆಯೋಜಿಸಿದೆ.
ಭಾನುವಾರ ಸಂಜೆ 7.00 ಗಂಟೆಗೆ `ಒಂದೇ ದೇಶ, ಒಂದೇ ರಾಗ’ಈ ಸಂಗೀತ ಕಾರ್ಯಕ್ರಮದ ಪ್ರಸಾರ ಜೀ಼ ಕನ್ನಡದಲ್ಲಿ ವೀಕ್ಷಕರನ್ನು ರಂಜಿಸಲಿದೆ.
ಜೀ಼ ಕನ್ನಡದಲ್ಲಿ ಸರಿಗಮಪ ಹಲವು ಸೀಸನ್ ಗಳಲ್ಲಿ ಕನ್ನಡ ವೀಕ್ಷಕರನ್ನು ರಂಜಿಸಿರುವುದಲ್ಲದೆ ಹಲವು ಉದಯೋನ್ಮುಖ ಗಾಯಕ, ಗಾಯಕಿಯರಿಗೆ ವೇದಿಕೆ ಒದಗಿಸಿ ಅವರು ಗಾಯಕರಾಗಿ ವೃತ್ತಿಜೀವನಕ್ಕೆ ಪ್ರವೇಶ ಪಡೆಯಲು ನೆರವಾಗಿದೆ. ಸರಿಗಮಪದಿಂದ ಇಂದು ಹಲವು ಸ್ಟಾರ್ ಗಾಯಕರಿಗೆ ವೇದಿಕೆಯಾಗಿದೆ.
ಲಾಕ್ ಡೌನ್ 4.0 ಕಾಲದಲ್ಲಿ ಈ ಡಿಜಿಟಲ್ ಕನ್ಸರ್ಟ್ ಭಾರತವನ್ನು ಕೋವಿಡ್-19ರ ವಿರುದ್ಧ ಹೋರಾಡಲು ಒಗ್ಗೂಡಿಸಲು ಸ್ಫೂರ್ತಿ ತುಂಬಲಿದೆ. ಈ ಸಂಗೀತ ಕಾರ್ಯಕ್ರಮ ಭಾರತದ ಖ್ಯಾತ ಗಾಯಕರನ್ನು ಒಟ್ಟುಗೂಡಿಸಲಿದ್ದು 10 ಜೀ಼ ಫೇಸ್ ಬುಕ್ ಪುಟಗಳಲ್ಲಿ 350ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮ್ ಮಾಡಲಿದ್ದಾರೆ.
ಲಾಕ್ ಡೌನ್ ಟೈಮಲ್ಲಿ ಮ್ಯೂಟ್ ಡೌನ್ ಆಗಿರುವ ನಿಮಗಾಗಿ ನಿಮ್ಮ ನೆಚ್ಚನ ತಾರೆಯರ ಹೊಸ ಪ್ರಯತ್ನ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ಸ ರೆ ಗ ಮ ಪ , ಲಾಕ್ ಡೌನ್ ಡೈರೀಸ್ , ಕಾಫಿ ವಿಥ್ ಅನು ನೋಡಿ ಕುಟುಂಬದ ಜೊತೆ ಸಿಕ್ಕಾಪಟ್ಟೆ ಎಂಜಾಯ್ ಮಾಡಿ.

