Fact Check: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ಜನರು ಕಲ್ಲು ತೂರುವ ವೈರಲ್ ಚಿತ್ರ ಎರಡು ವರ್ಷ ಹಿಂದಿನದ್ದು

ಹೇಳಿಕೆ: “ಭಯೋತ್ಪಾದಕ ರಿಯಾಜ್ ನಾಯ್ಕು ಹತ್ಯೆಯ ನಂತರ, ಜನರು ಅವಂತಿಪುರದಲ್ಲಿ ಭದ್ರತಾ ಪಡೆಗಳ ಮೇಲೆ ಕಲ್ಲುತೂರಲು ಪ್ರಾರಂಭಿಸಿದರು. ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆಯಬೇಡಿ, ಏಕೆಂದರೆ ಮತ್ತೆ, “ಪ್ರತಿಯೊಬ್ಬರ ರಕ್ತವು ಈ ದೇಶದ ಮಣ್ಣಿನಲ್ಲಿರುತ್ತದೆ” ಎಂಬ ಅದೇ ರಾಗದ ಸಾಲುಗಳು ಪ್ರಾರಂಭವಾಗುತ್ತವೆ.”

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ರಿಯಾಜ್ ನಾಯ್ಕು ಹತ್ಯೆಯ ನಂತರ ಜನರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಲು ಪ್ರಾರಂಭಿಸಿದ್ದಾರೆ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‍ ಆಗಿದೆ.

ಫೇಸ್‍ಬುಕ್

ಈ ನಿರ್ದಿಷ್ಟ ಪೋಸ್ಟ್ 2 ಸಾವಿರಕ್ಕೂ ಬಾರಿ ಹಂಚಿಕೆಯಾಗಿದೆ, ಜನರ ಪ್ರತಿಕ್ರಿಯೆಗಳು 3ಸಾವಿರಕ್ಕಿಂತ ಹೆಚ್ಚು.

https://www.facebook.com/photo.php?fbid=3048731505165356&set=gm.2302866749845541&type=3&eid=ARDqvuQlguWGeYmTmPGmku0roczkT5zaqFtrcDIyOIqLydPSVW2f9Ab6x8PbtiTjICZQ-yoyZhY2xuv6

ಸ್ವಲ್ಪ ಸಮಯದಲ್ಲೇ, ಬಹಳಷ್ಟು ಜನರುಚಿತ್ರವನ್ನು ಬೇರೆ ಬೇರೆ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು.

ಟ್ವಿಟರ್

ಚಿತ್ರವನ್ನುಟ್ವಿಟ್ಟರ್‍ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಈ ನಿರ್ದಿಷ್ಟ ಪೋಸ್ಟ್ 464 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ, ಮತ್ತು 1000ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆಯುತ್ತಿದೆ.

https://twitter.com/SushmaDwive89/status/1258085257523453952?ref_src=twsrc%5Etfw%7Ctwcamp%5Etweetembed%7Ctwterm%5E1258085257523453952%7Ctwgr%5E&ref_url=https%3A%2F%2Fsmhoaxslayer.com%2Fviral-image-of-people-pelting-stones-at-security-forces-in-jk-is-two-years-old%2F

ಕಡಿಮೆ ಸಮಯದಲ್ಲಿ, ಬಹಳಷ್ಟು ಜನರು ಚಿತ್ರವನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದರು.

ನಿಜಾಂಶ

ಚಿತ್ರವು 2018ರದ್ದು. ಚಿತ್ರದ ಗೂಗಲ್‍ ರಿವರ್ಸ್‍ ಇಮೇಜ್ ಸರ್ಚ್ ಮಾಡಿದ ನಂತರ, ಇದು ಜೂನ್ 22, 2018ರಂದು ಪ್ರಕಟವಾದ ಹಿಂದೂಸ್ತಾನ್‍ ಟೈಮ್ಸ್ ಲೇಖನಕ್ಕೆ ನಮ್ಮನ್ನು ಕರೆದೊಯ್ಯಿತು.

2018 ರಲ್ಲಿ ಹಿಂದೂಸ್ತಾನ್‍ ಟೈಮ್ಸ್ ಗಾಗಿ ಫೋಟೋವನ್ನು ವಸೀಮ್ ಆಂಡ್ರಾಬಿ ಕ್ಲಿಕ್ ಮಾಡಿರುವುದಾಗಿ ತಿಳಿದಿದೆ.

ಹಿಂದೂಸ್ತಾನ್‍ ಟೈಮ್ಸ್ ವರದಿಯ ಪ್ರಕಾರ, ಇಸ್ಲಾಮಿಕ್ ಸ್ಟೇಟ್ (ಐಎಸ್)ನ ಸ್ಥಳೀಯ ಘಟಕವನ್ನು ನಡೆಸುತ್ತಿರುವ ಶಂಕಿತ ನಾಲ್ಕು ಉಗ್ರರು, ಒಬ್ಬ ಪೊಲೀಸ್ ಮತ್ತು ನಾಗರಿಕನನ್ನು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‍ ಜಿಲ್ಲೆಯ ನೌಶೇರಾ ಗ್ರಾಮದಲ್ಲಿ 2018ರ ಜೂನ್ 22ರಂದು ಹತ್ಯೆ ಮಾಡಲಾಗಿದೆ.

ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ನಡುವಿನ ಘರ್ಷಣೆಯಲ್ಲಿ 20ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ. ಈ ಚಿತ್ರವು ಅಲ್ಲಿ 2018 ರಲ್ಲಿ ನಡೆದ ಘರ್ಷಣೆಗಳದ್ದು ಈ ವರ್ಷದ್ದಲ್ಲ ಎಂದು ನಿರ್ವಿವಿದಾವಾಗಿ ಸಾಬೀತಾಗುತ್ತದೆ.

ಆದ್ದರಿಂದ, ಚಿತ್ರವು ವೈರಲ್ ಪೋಸ್ಟ್  ಗಳಲ್ಲಿ ಹೇಳಿರುವಂತೆ ಅವಂತಿಪುರದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುವ ಜನರದ್ದಲ್ಲ ಎಂದು ಸಾಬೀತಾಗಿದೆ.

(ಕೃಪೆ) ಸೋಶಿಯಲ್ ಮೀಡಿಯ ಹೋಕ್ಸ್ ಸ್ಲೇಯರ್

(ಕನ್ನಡಕ್ಕೆ) ದಿವ್ಯ ಶರ್ಮ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights