ಸೋಷಿಯಲ್ ಮೀಡಿಯಾ ಕಂಪನಿಗಳನ್ನು ಮುಚ್ಚುವ ಬೆದರಿಕೆ ಹಾಕಿದ ಟ್ರಂಪ್! ಕಾರಣವೇನು?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಕಂಪನಿಗಳನ್ನು ನಿಯಂತ್ರಿಸುವ ಅಥವಾ ಮುಚ್ಚುವ ಬೆದರಿಕೆ ಹಾಕಿದ್ದಾರೆ. ಟ್ವಿಟರ್‌ನಲ್ಲಿ ಟ್ರಂಪ್‌ ಅವರ ಟ್ವೀಟ್‌ಗಳ ಬಗ್ಗೆ ಫ್ಯಾಕ್ಟ್‌ ಚೆಕ್‌ ಮಾಡಿದ ನಂತರ ಟ್ವಿಟರ್‌ ಅನ್ನು ಗುರಿಯಾಗಿಟ್ಟುಕೊಂಡು ಈ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

“ಸಾಮಾಜಿಕ ಜಾಲತಾಣಗಳು ಸಂಪ್ರದಾಯವಾದಿ ಧ್ವನಿಯನ್ನು ಮೌನಗೊಳಿಸಲು ಮುಂದಾಗಿದ್ದು, ಇದಕ್ಕೆ ತಕ್ಕ ಕ್ರಮಗಳನ್ನು ಎದುರಿಸಬೇಕಾಗಿದೆ” ಎಂದು ಟ್ರಂಪ್ ಟ್ವೀಟ್‌ ಮಾಡಿದ್ದಾರೆ.

“ರಿಪಬ್ಲಿಕನ್ ಪಕ್ಷದವರು ಸಾಮಾಜಿಕ ಜಾಲತಾಣ ವೇದಿಕೆಗಳು ಸಂಪ್ರದಾಯವಾದಿಗಳ ಧ್ವನಿಯನ್ನು ಸಂಪೂರ್ಣವಾಗಿ ಮೌನಗೊಳಿಸುತ್ತವೆ ಎಂದು ಭಾವಿಸಿದ್ದಾರೆ. ಇದು ಸಾಧ್ಯವಾಗಲು ನಾವು ಬಿಡುವುದಿಲ್ಲ. ಬಲವಾಗಿಯಾಗಿಯಾದರೂ ನಿಯಂತ್ರಿಸುತ್ತೇವೆ ಅಥವಾ ಮುಚ್ಚುತ್ತೇವೆ” ಎಂದು ಟ್ರಂಪ್‌ ಟ್ವೀಟ್ ಮಾಡಿದ್ದಾರೆ.

ಬುಧವಾರ ಟ್ರಂಪ್‌ ಟ್ವೋಟ್‌ ,ಆಡಿನ ನಂತರ ನ್ಯೂಯಾರ್ಕ್‌ನಲ್ಲಿ ಟ್ವಿಟರ್ ಆರಂಭಿಕ ವಹಿವಾಟಿನ ಶೇರುಗಳು 1.65% ಕುಸಿದಿದ್ದವು.

ಟ್ರಂಪ್‌ ಅವರ ಹಿಂದಿನ ಟ್ವೀಟ್‌ಗಳನ್ನ ಪರಿಶೀಲಿದ್ದ ಟ್ವಿಟರ್, ಮೇಲ್-ಇನ್ ಮತದಾನದ ಬಗ್ಗೆ ಟ್ರಂಪ್‌ ಮಾಡಿದ್ದ ಟ್ವೀಟ್‌ ನಾಗರೀಕರನ್ನು ದಾರಿ ತಪ್ಪಿಸುತ್ತದೆ. ಮೇಲ್‌-ಇನ್ ಮತದಾನದ ಬಗ್ಗೆ ಆಧಾರರಹಿತವಾಗಿ ಫೋಸ್ಟ್ ಮಾಡಲಾಗಿದೆ ಎಂಬುದನ್ನು ಅರಿತು ಫ್ಯಾಕ್ಟ್‌ ಚೆಕ್‌ ಲೇಬಲ್ ಅಂಟಿಸಿತ್ತು. ಟ್ವಿಟರ್‌ ಮೊದಲ ಬಾರಿಗೆ ಈ ಕ್ರಮವನ್ನು ಕೈಗೊಂಡಿದೆ. ಈ ಕಾರಣಕ್ಕಾಗಿ ಟ್ರಂಪ್‌ ಸಾಮಾಜಿಕ ಜಾಲತಾಣಗಳನ್ನು ಮುಚ್ಚುವ ಬೆದರಿಕೆ ಹಾಕುತ್ತಿದ್ದಾರೆ.

ಟ್ರಂಪ್ ಅವರ ಟ್ವೀಟ್‌ಗಳನ್ನು ಅಳಿಸಲು ವಿಧುರರೊಬ್ಬರು ಟ್ವಿಟರ್‌ಗೆ ಕೇಳಿಕೊಂಡಿದ್ದರು. ಆತನ ಪತ್ನಿಯನ್ನು ಕೇಬಲ್ ನ್ಯೂಸ್‌ ಹೋಸ್ಟ್‌ ಮತ್ತು ಮಾಜಿ ರಿಪಬ್ಲಿಕನ್ ಕಾಂಗ್ರೆಸ್‌ ಸದಸ್ಯ ಜ್ಯೋ ಸ್ಕಾರ್ಬರೋ ಕೊಲೆಮಾಡಿದ್ದಾರೆಂದು ಆರೋಪಿಸಿದ್ದರು.

ಕಂಪೆನಿಗಳು ಸಾರ್ವಜನಿಕವಾಗಿ ನಡೆಸುತ್ತಿರುವ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಜನರು ಬಳಸುತ್ತಿರುವ ಸಾಮಾಜಿಕ ಜಾಲತಾಣಗಳನ್ನು ಮುಚ್ಚುವ ಸಾಮರ್ಥ್ಯ ಟ್ರಂಪ್‌ಗೆ ಇಲ್ಲ ಎಂಬುದು ತಿಳಿದಿರುವ ಸಂಗತಿ. ಅಲ್ಲದೆ, ಇದು ಅವರ ಮರು-ಚುನಾವಣಾ ಪ್ರಚಾರ ಮತ್ತು ಸಾರ್ವಜನಿಕರೊಂದಿಗೆ ಸಂವಹನ ಕಾರ್ಯತಂತ್ರಕ್ಕೂ ಸಾಮಾಜಿಕ ಜಾಲತಾಣವೇ ಕೇಂದ್ರವಾಗಿದೆ ಎಂಬುದೂ ಕೂಡ ವಾಸ್ತವ.

ಸಂಪ್ರದಾಯವಾದಿಗಳು ಮುಖ್ಯವಾಹಿನಿಯ ಮಾಧ್ಯಮಗಳನ್ನು ನಿಯಂತ್ರಿಸಲು ಮತ್ತು ಅವುಗಳ ಮೇಲೆ ಹಿಡಿತ ಸಾಧಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುತ್ತಾರೆ.

“ಗೌಪ್ಯತೆಯ ಕಾನೂನುಗಳನ್ನು ತರಲು ಅಮೆರಿಕಾ ಕಾಂಗ್ರೆಸ್‌ ಚಿಂತಿಸುತ್ತಿದೆ. ಅದು ಕಂಪನಿಗಳು ಗ್ರಾಹಕರ ಡೇಟಾವನ್ನು ಹೇಗೆ ಬಳಸಿಕೊಳ್ಳುತ್ತವೆ ಹಾಗೂ ಯಾವ ರೀತಿಯ ಜವಾಬ್ದಾರಿಗಳನ್ನು ಹೊಂದಿರುತ್ತವೆ ಎಂಬುದಕ್ಕೆ ಹೆಚ್ಚಿನ ನಿರ್ಬಂಧಗಳನ್ನು ತರಲಿದೆ. ಈಗಾಗಲೇ ಗೌಪ್ಯತೆಯ ಕುರಿತು ಕ್ಯಾಲಿಫೋರ್ನಿಯಾ ಕಟ್ಟುನಿಟ್ಟಾದ ಕಾನೂನುಗಳನ್ನು ತಂದು ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿರುವ ಕಂಪನಿಗಳನ್ನು ನಿಯಂತ್ರಿಸುತ್ತಿದೆ” ಎಂದು ಶ್ವೇತಭವನದ ಸಲಹೆಗಾರರಾಗಿರುವ ಕೆಲ್ಲಿಯೆನ್ ಕಾನ್ವೇ ತಿಳಿಸಿದ್ದಾರೆ.

ಸೊಷಿಯಲ್ ಮೀಡಿಯಾ ಕಂಪನಿಗಳು ತಾವು ನಿಷ್ಪಕ್ಷಪಾತಿಗಳು ಎಂದು ಹೇಳಿಕೊಳ್ಳುತ್ತವೆ. ಆದರೆ, ಬಳಕೆದಾರರು ಬೆದರಿಕೆ ಹಾಕುವುದು ಅಥವಾ ಹಾನಿಮಾಡುವಂತಹ ಸುಳ್ಳು ಮಾಹಿತಿಗಳನ್ನು ಹರಡಲು ಆಂರಭಿಸಿದ್ದಾರೆ. ಹಾಗಾಗಿ ಅವುಗಳನ್ನು ನಿಯಂತ್ರಿಸುವುದು ಅತ್ಯಾವಶ್ಯಕ ಎಂದು ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights