ಚೀನಾ ಗಡಿ ವಿವಾದ: ಟ್ರಂಪ್ ಮೋದಿಯವರೊಂದಿಗೆ ಮಾತೇ ಆಡಿಲ್ಲ ಎಂದ ಭಾರತ
ಟ್ರಂಪ್ ಅವರು ಮೋದಿ ಅವರೊಂದಿಗೆ ಚೀನಾ ಗಡಿ ವಿವಾದ ಕುರಿತು ಚರ್ಚಿಸಿಯೇ ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ.
ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದೊಂದಿಗಿನ ಗಡಿ ವಿವಾದ ಮಧ್ಯಸ್ಥಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದಾರೆ ಎಂಬ ಹೇಳಿಕೆಯನ್ನು ಸರ್ಕಾರ ಶುಕ್ರವಾರ ತಿರಸ್ಕರಿಸಿದೆ.
ಭಾರತ ಚೀನಾ ಮಧ್ಯಸ್ಥಿಕೆ ವಹಿಸುವ ಟ್ರಂಪ್ರ ಪ್ರಸ್ತಾಪವನ್ನು ಭಾರತ ಸ್ವೀಕರಿಸುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಅಮೆರಿಕಾದ ಗಮನಕ್ಕೆ ತಂದಿದ್ದಾರೆ.
“ಪಿಎಂ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ಇತ್ತೀಚೆಗೆ ಯಾವುದೇ ಸಂಭಾಷಣೆ ನಡೆದಿಲ್ಲ. ಅವರ ನಡುವಿನ ಕೊನೆಯ ಸಂಭಾಷಣೆ ಏಪ್ರಿಲ್ 4, 2020 ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ [ಎಚ್ಸಿಕ್ಯು] ಬಗ್ಗೆ ನಡೆಯಿತು ”ಎಂದು ವಿದೇಶಾಂಗ ಸಚಿವಾಲಯದ ಮೂಲಗಳು (ಎಂಇಎ) ತಿಳಿಸಿವೆ.
ರಕ್ಷಣಾ ಸಚಿವಾಲಯದ ಮೂಲಗಳ ಪ್ರಕಾರ, ಶ್ರೀ ಸಿಂಗ್ ಅವರು ಶುಕ್ರವಾರ ದೂರವಾಣಿ ಕರೆಯಲ್ಲಿ COVID-19 ಮತ್ತು ಯು.ಎಸ್. ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರೊಂದಿಗಿನ ರಕ್ಷಣಾ ಸಹಭಾಗಿತ್ವದ ಬಗ್ಗೆ ಚರ್ಚಿಸಿದರು.

ಭಾರತ ಮತ್ತು ಚೀನಾ ಈ ಹಿಂದೆ ಗಡಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಾರ ಮಧ್ಯಸ್ಥಿಕೆಯೂ ಇಲ್ಲದೆ ಯಶಸ್ವಿಯಾಗಿದ್ದವು.
ಯು.ಎಸ್. ಅಧ್ಯಕ್ಷರ ಪ್ರತಿಕ್ರಿಯೆಯಿಂದ ಅವರು ಆಶ್ಚರ್ಯಚಕಿತರಾದರು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ದಿ ಹಿಂದೂಗೆ ತಿಳಿಸಿದ್ದಾರೆ.

“ನಾನು ನಿಮಗೆ ಹೇಳಬಲ್ಲೆ, ನಾನು ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ್ದೇನೆ. ಅವರು ಚೀನಾದೊಂದಿಗೆ ಇರುವ ಗಡಿ ವಿವಾದದಿಂದ ಬೇಸರದ ಮನಸ್ಥಿತಿಯಲ್ಲಿ ಇದ್ದಾರೆ ”ಎಂದು ಟ್ರಂಪ್ ಗುರುವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
ಭಾರತ ಮತ್ತು ಚೀನಾ ನಡುವಿನ “ಉಲ್ಬಣಗೊಂಡ ಗಡಿ ವಿವಾದ” ದ ಬಗ್ಗೆ ಮಧ್ಯಸ್ಥಿಕೆ ವಹಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಟ್ರಂಪ್, “ನಾವು ಸಹಾಯ ಮಾಡುತ್ತೇವೆ” ಎಂದು ಉಭಯ ದೇಶಗಳ ನಡುವೆ ಮಧ್ಯಸ್ಥಿಕೆಗೆ ಸಿದ್ಧರಿರುವುದಾಗಿ ಹೇಳಿದರು.

“ನಾನು ಮಧ್ಯವಸ್ಥಿಕೆ ವಹಿಸಿದರೆ ಸಹಾಯವಾಗುತ್ತದೆ ಎಂದು ಅವರು ಭಾವಿಸಿದರೆ, ನಾನು ಅದನ್ನು ಮಾಡುತ್ತೇನೆ.”ಎಂದು ಟ್ರಂಪ್ ತಮ್ಮ ಟ್ವೀಟ್ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಯ ವರದಿಗಾರರಿಗೆ ತಿಳಿಸಿದರು.
ಸದ್ಯ ಟ್ರಂಪ್ ಅವರು ಮೋದಿ ಅವರೊಂದಿಗೆ ಚೀನಾ ಕುರಿತು ಮಾತನಾಡಲಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ.

