ನಾಸಾ ಸಹಕಾರದೊಂದಿಗೆ ಮೊದಲ ಬಾರಿಗೆ ಯಶಸ್ವಿಯಾಗಿ ಉಡಾವಣೆಗೊಂಡ ಖಾಸಗೀ ರಾಕೇಟ್

ಅಮೆರಿಕೆಯ ನಾಸಾದ ಸಹಕಾರ ಪಡೆದು ಅಮೆರಿಕಾದ ಖಾಸಗಿ ಸಂಸ್ಥೆಯ ರಾಕೇಟ್‌ ಬಾಹ್ಯಾಕಾಶ ನೌಕೆಯನ್ನು ಹೊತ್ತು ಆಕಾಶಕ್ಕೆ ಜಿಗಿದಿದೆ. ಶನಿವಾರ ಮಧ್ಯಾಹ್ನ (ಭಾರತೀಯ ಕಾಲಮಾನ ಭಾನುವಾರ 1.50AM) ರಾಕೇಟ್‌ ಯಶಸ್ವಿಯಾಗಿ ಉಡಾವಣೆಯಾಗಿದೆ.

ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯ ರಾಕೆಟ್  ಬಾಹ್ಯಾಕಾಶ ಯಾತ್ರೆಯನ್ನು ಆರಂಭಿಸಿದೆ. ಖಾಸಗಿ ಕಂಪನಿ ಎಲೋನ್ ಮಸ್ಕ್‌ರವರ ಸ್ಪೇಸ್‌ಎಕ್ಸ್ ಕಂಪನಿಯು ವಿನ್ಯಾಸಗೊಳಿಸಿದ್ದ ಫಾಲ್ಕನ್-9  ರಾಕೆಟ್ ಶನಿವಾರ ಉಡಾವಣೆಗೊಂಡಿದ್ದು,  ಇಬ್ಬರು ಗಗನಯಾತ್ರಿಗಳಾದ ಡೌಗ್ ಹರ್ಲಿ ಮತ್ತು ಬಾಬ್ ಬೆಹ್ನಕನ್ ಅವರಿದ್ದ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ದ ರಾಕೇಟ್‌ ನಾಸಾದ ಉಡಾವಣಾ ಕೇಂದ್ರ ಕೆನಡಿ ಸೆಂಟರ್‌ನಿಂದ ಉಡಾವಣೆಗೊಂಡಿದೆ.

2011 ರಲ್ಲಿ ನಾಸಾವು ಮಾನವರನ್ನೊಳಗೊಂಡ ತನ್ನ ಬಾಹ್ಯಾಕಾಶ ಯಾನವನ್ನು ಸ್ಥಗಿತಗೊಳಿಸಿತ್ತು. 2011 ರಿಂದ ಇಲ್ಲಿಯವರೆಗೆ ಮನುಷ್ಯರನ್ನೊಳಗೊಂಡ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿರಲಿಲ್ಲ. ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಖಾಸಗೀ ಸಂಸ್ಥೆಯ ಬಾಹ್ಯಾಕಾಶ ನೌಕೆಯು ವ್ಯಕ್ತಿಗಳನ್ನೊಳಗೊಂಡ ಬಾಹ್ಯಾಕಾಶ ಯಾನವನ್ನು ಪುನರಾರಂಭಿಸಿದೆ. ಮೇ 27 ರಂದೇ ಉಡಾವಣೆಗೊಳ್ಳಬೆಕಿದ್ದ ಬಾಹ್ಯಾಕಾಶ ಯಾನ ಹವಮಾನ ವೈಪರಿತ್ಯದ ಕಾರಣದಿಂದಾಗಿ ರಾಕೇಟ್‌ ಉಡಾವಣೆಯನ್ನು ವಿಳಂಬ ಮಾಡಲಾಗಿದೆ.

19 ತಾಸುಗಳ ಪ್ರಯಾಣದ ಬಳಿಕ ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದ್ದಾರೆ. ಉಡಾವಣೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದರು.

ಸ್ಪೇಸ್‌ಎಕ್ಸ್‌ ಕಂಪನಿಯು  2006, 2012 ಮತ್ತು 2016ರಲ್ಲಿ ಇದುವರೆಗೂ ಮೂರು ಬಾರಿ ಬಾಹ್ಯಾಕಾಶ ನೌಕಾ ಉಡಾವಣೆ ಮಾಡಿ ವಿಫಲವಾಗಿತ್ತು. ನಾಲ್ಕನೇ ಬಾರಿಗೆ ಉಡಾವಣೆ ಯಶಸ್ವಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights