ಜೈಲು ಸಿಬ್ಬಂದಿ, ಕೈದಿಗಳು ಸೇರಿದಂತೆ 60 ಮಂದಿಗೆ ಕೊರೊನಾ ಸೋಂಕು ದೃಢ..!
ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಲೇ ಇದ್ದು ಮತ್ತೊಂದು ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿನ ಜೈಲು ಕೈದಿಗಳು ಮತ್ತು ಜೈಲು ಸಿಬ್ಬಂದಿ ಸೇರಿದಂತೆ ಒಟ್ಟು 60 ಮಂದಿಗೆ ಕೋವಿಡ್ -19 ವೈರಸ್ ದೃಢಪಟ್ಟಿದೆ.
ಮೇ 26 ರಂದು ಕೈದಿ ಮತ್ತು ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ರೋಗಿಗಳ ಪ್ರಾಥಮಿಕ ಸಂಪರ್ಕಗಳ ಮಾದರಿಗಳಲ್ಲಿ ಕೊರೊನಾ ವೈರಸ್ ಇರುವುದು ಖಾತ್ರಿಯಾಗಿದೆ.
ಇಲ್ಲಿಯವರೆಗೆ, ಎಂಟು ಸಿಬ್ಬಂದಿ ಸೇರಿದಂತೆ 60 ಜನರು ವೈರಸ್ಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಜೈಲಿನಲ್ಲಿ 300 ಕೈದಿಗಳಿದ್ದು, ಈ ಎಲ್ಲ ರೋಗಿಗಳನ್ನು ತಾತ್ಕಾಲಿಕ ಸೌಲಭ್ಯದಲ್ಲಿ ಪ್ರತ್ಯೇಕಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಿಲಿಂದ್ ಶಂಭಾರ್ಕರ್ ತಿಳಿಸಿದ್ದಾರೆ.
ಸೋಲಾಪುರ ಜಿಲ್ಲೆಯಲ್ಲಿ ಈವರೆಗೆ 1,144 ಕೋವಿಡ್-19 ಪ್ರಕರಣಗಳು ಮತ್ತು 99 ಸಾವುಗಳು ವರದಿಯಾಗಿವೆ.

