FACT CHECK | ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಯವರ ಕೊನೆಯ ಫೋಟೊ ಎಂದು 2021ರ ಫೋಟೊ ಹಂಚಿಕೆ
ಗುಜರಾತ್ನ ಅಹಮದಾಬಾದ್ನಲ್ಲಿ ಗುರುವಾರ ಮಧ್ಯಾಹ್ನ ಭೀಕರ ವಿಮಾನ ದುರಂತ ಸಂಭವಿಸಿದೆ. ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI171), ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ, ಅಂದರೆ ಐದು ನಿಮಿಷಗಳೊಳಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಮೇಘಾನಿ ನಗರ ಜನವಸತಿ ಪ್ರದೇಶದಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಜನರ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಅಲ್ಲದೇ ಈ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಇದ್ದರು ಎಂದು ಹೇಳಲಾಗಿತ್ತು. ಇದೀಗ ಕೊನೆಗೂ ವಿಜಯ್ ರೂಪಾನಿ ಇದ್ದದ್ದು ದೃಢವಾಗಿದೆ. ಅಲ್ಲದೇ ಅವರ ಟಿಕೆಟ್ ಫೋಟೋ, ಕೊನೇಕ್ಷಣದ ಸೆಲ್ಫಿಯೊಂದು ವೈರಲ್ ಆಗುತ್ತಿದೆ ಎಂದು ನ್ಯೂಸ್18 ಸುದ್ದಿ ಪ್ರಕಟಿಸಿದೆ.

ಜೂನ್ 12 ರಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ 240 ಕ್ಕೂ ಹೆಚ್ಚು ಜನರಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ವರದಿಯ ಪ್ರಕಾರ, ಅವರು ತಮ್ಮ ಪತ್ನಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್ಗೆ ಪ್ರಯಾಣಿಸುತ್ತಿದ್ದರು.

ಈಗ, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು, ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ವಿಮಾನ ಅಪಘಾತಕ್ಕೂ ಮುನ್ನ ಸೆರೆಹಿಡಿದ ಕೊನೆಯ ಫೋಟೊ ಎಂಬ ಹೇಳೆಕೆಯೊಂದಿಗೆ ಪೋಸ್ಟ್ಅನ್ನು ಹಂಚಿಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬರ ವಿಮಾನದೊಳಗಿನ ಸೆಲ್ಫಿ ತೆಗೆದಿದ್ದು, ಅದರಲ್ಲಿ ರೂಪಾನಿಯವರನ್ನು ಮಹಿಳೆ ಪ್ರಯಾಣಿಸಿಸುತ್ತಿರುವ ಹಿಂದಿನ ಸೀಟಿನಲ್ಲಿ ಇರುವುದನ್ನು ಕಾಣಬಹುದು.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೋಟೊವನ್ನು ಹಂಚಿಕೊಳ್ಳುತ್ತಿದ್ದು, ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಗುಜರಾತ್ನ ಮಾಜಿ ಸಿ.ಎಂ ವಿಜಯ್ ರೂಪಾನಿಯವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತೆಗೆದ ಕೊನೆಯ ಚಿತ್ರ ಎಂದು ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ಗಳಿಗೆ ಮಜೀದ್ ಲಧಾನಿ ಎಂಬ ಎಕ್ಸ್ ಬಳಕೆದಾರರು ಈ ಫೋಟೋ ಹಳೆಯದು ಎಂಬ ಬರಹದೊಂದಿಗೆ ಕಾಮೆಂಟ್ ಮಾಡಿದ್ದಾರೆ. ಲಧಾನಿ ಭಾರತೀಯ ಜನತಾ ಪಕ್ಷದ ದಮನ್ ಮತ್ತು ಡಿಯು ಕಚೇರಿಯ ರಾಜ್ಯ ಮಾಧ್ಯಮ ಮುಖ್ಯಸ್ಥರಾಗಿದ್ದಾರೆ.
Last Pic of Vijay Rupani !! pic.twitter.com/LCCvAB7dp5
— Times Algebra (@TimesAlgebraIND) June 12, 2025
ತಮ್ಮ ಪ್ರತಿಕ್ರಿಯೆಗಳಲ್ಲಿ, ಮಜೀದ್ ಅವರು ಲೀನಾ ಗೋಸ್ವಾಮಿ ಎಂಬ ಮಹಿಳೆಯ ಫೇಸ್ಬುಕ್ ಪೋಸ್ಟ್ನ ಸ್ಕ್ರೀನ್ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ, ಅವರು ವೈರಲ್ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು ಜೂನ್ 12, 2021 ರಂದು ಅವರು ಮತ್ತು ರೂಪಾನಿ ಒಂದೇ ವಿಮಾನದಲ್ಲಿದ್ದಾಗ ತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದಾರೆ.
ಗೋಸ್ವಾಮಿ ಅವರ ಫೇಸ್ಬುಕ್ ಪ್ರೊಫೈಲ್ ಖಾಸಗಿಯಾಗಿದ್ದರಿಂದ, ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಜೀದ್ ಲಧಾನಿ ಮೂಲಕ ಸಂಪರ್ಕಿಸಿದೆ. ಗೋಸ್ವಾಮಿ ಆ ಫೋಟೋ ಹಳೆಯದು ಎಂದು ದೃಢಪಡಿಸಿದ್ದು, ಅದು ಅಕ್ಟೋಬರ್ 12, 2021 ರಂದು ಅವರು ಏರ್ ಇಂಡಿಯಾ ವಿಮಾನದಲ್ಲಿ ಲಂಡನ್ಗೆ ಪ್ರಯಾಣಿಸುತ್ತಿದ್ದಾಗ ತೆಗೆದಿದ್ದು ಎಂದು ತಿಳಿಸಿದ್ದಾರೆ . ಅವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಅಕ್ಟೋಬರ್ 12 ರ ಬದಲಿಗೆ ಜೂನ್ 12 ಅನ್ನು ತಪ್ಪಾಗಿ ನಮೂದಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಗೋಸ್ವಾಮಿ ಅವರು ಈ ಚಿತ್ರವನ್ನು ಅದೇ ದಿನಾಂಕದಂದು ತಮ್ಮ ಮಗನಿಗೆ ವಾಟ್ಸಾಪ್ನಲ್ಲಿ ಕಳುಹಿಸಿದ್ದಾರೆ ಎಂದು ಹೇಳಿದರು. ಅವರು ಅಕ್ಟೋಬರ್ 12, 2021 ರ ದಿನಾಂಕವನ್ನು ತೋರಿಸುವ ಅದರ ವಾಟ್ಸಾಪ್ ಸ್ಕ್ರೀನ್ಶಾಟ್ ಅನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ, ವಿಜಯ್ ರೂಪಾನಿ ಅವರ ವೈರಲ್ ಫೋಟೋ ಸುಮಾರು ನಾಲ್ಕು ವರ್ಷ ಹಳೆಯದು ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಕೊನೆಯ ಫೋಟೊ ಎಂದು 2021ರ ಹಳೆಯ ಫೋಟೊ ಹಂಚಿಕೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಹಮದಾಬಾದ್ನ ವಿಮಾನ ಅಪಘಾತ ಎಂದು AI ಚಿತ್ರ ಹಂಚಿಕೆ

