ಹಿರಿಯ ಮಗಳ ಚಿಕಿತ್ಸೆಗಾಗಿ ಕಿರಿಯ ಮಗಳನ್ನು ಮಾರಿದ ಪೋಷಕರು..!

16 ವರ್ಷದ ಮಗಳ ಚಿಕಿತ್ಸೆಗೆ ಹಣವಿಲ್ಲದ ದಂಪತಿಗಳು ತಮ್ಮ 12 ವರ್ಷದ ಮಗಳನ್ನು 46 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.

ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಹಿರಿಯ ಮಗಳಿಗೆ ಚಿಕಿತ್ಸೆ ನೀಡಲು ಪೋಷಕರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ 12 ವರ್ಷದ ಬಾಲಕಿಯನ್ನು 46 ವರ್ಷದ ಚಿನ್ನ ಸುಬ್ಬಯ್ಯ ಎಂಬುವವರಿಗೆ 10,000 ರೂ.ಗೆ ಮಾರಾಟ ಮಾಡಿದ್ದಾರೆ. ಈತ ಬುಧವಾರ ಬಾಲಕಿಯನ್ನು ಮದುವೆಯಾಗಿದ್ದಾನೆ.

ಒಂದು ದಿನದ ನಂತರ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಜಿಲ್ಲಾ ಶಿಶುಪಾಲನಾ ಕೇಂದ್ರಕ್ಕೆ ಸ್ಥಳಾಂತರಿಸಿ ಅಲ್ಲಿ ಬಾಲಕಿಗೆ ಸಲಹೆ ನೀಡಲಾಗುತ್ತಿದೆ.

ಕೊಟ್ಟೂರು ಮೂಲದ ದಂಪತಿಗಳು ನೆರೆಯ ಸುಬ್ಬಯ್ಯ ಅವರನ್ನು ಸಂಪರ್ಕಿಸಿ 25 ಸಾವಿರ ರೂ.ಗಳ ಬೇಡಿಕೆಯೊಂದಿಗೆ ಮಗಳನ್ನು ಮಾರಾಟ ಮಾಡಲು ಒಪ್ಪಿಕೊಂಡರು. ಬಳಿಕ ಕೇವಲ10,000 ರೂ.ಗೆ ಚೌಕಾಶಿ ಮಾಡಿ ಒಪ್ಪಂದ ಮಾಡಿಕೊಂಡರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೊಲೀಸರ ಪ್ರಕಾರ, ವೈವಾಹಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಸುಬ್ಬಯ್ಯ ಅವರ ಪತ್ನಿ ಆತನನ್ನು ತೊರೆದಿದ್ದ ಎನ್ನಲಾಗುತ್ತಿದೆ.

ಸುಬ್ಬಯ್ಯ ಬಾಲಕಿಯನ್ನು ಖರೀದಿಸಿದ ನಂತರ ಬುಧವಾರ ರಾತ್ರಿ ದಂಪೂರಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆತಂದರು. ಮಗು ಕಿರುಚುತ್ತಾ ಅಳುತ್ತಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. “ನೆರೆಹೊರೆಯವರು ಏನಾಗುತ್ತಿದೆ ಎಂದು ವಿಚಾರಿಸಲು ಸುಬ್ಬಯ್ಯ ಅವರ ಸಂಬಂಧಿಕರ ಮನೆಗೆ ಹೋಗಿದ್ದಾರೆ. ನಂತರ ಸ್ಥಳೀಯರೇ ಮಕ್ಕಳ ಅಭಿವೃದ್ಧಿ ಸೇವೆಗಳ ಅಧಿಕಾರಿ ಸಂಪರ್ಕಿಸಿದ್ದಾರೆ.  ಪೊಲೀಸರು ಸುಬಯ್ಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *