ಮಹಿಳೆಯ ಮೇಲೆ ಗ್ಯಾಂಗ್-ರೇಪ್ : ಅತ್ಯಾಚಾರದ ಬಳಿಕ ಬೆಂಕಿ ಹಚ್ಚಿದ ತಂದೆ-ಮಗ!

ಮನೆಗೆ ತೆರಳುತ್ತಿದ್ದಾಗ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ತಂದೆ-ಮಗ ಮಹಿಳೆಗೆ ಬೆಂಕಿಯಿಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದ ಮಿಶ್ರಿಖ್ ಪ್ರದೇಶದಲ್ಲಿ ನಡೆದಿದೆ.

ಗುರುವಾರ ಈ ಘಟನೆ ನಡೆದಿದೆ. ಮಹಿಳೆ ಸಿಧೌಲಿ ಪ್ರದೇಶದ ತನ್ನ ತಾಯಿಯ ಮನೆಯಿಂದ ಮಿಶ್ರಿಖ್‌ಗೆ ಹೋಗುತ್ತಿದ್ದಳು. ಮನೆಗೆ ಹೋಗುವಾಗ ಆರೋಪಿಗಳಲ್ಲಿ ಒಬ್ಬರಿಂದ ಲಿಫ್ಟ್ ತೆಗೆದುಕೊಂಡಿದ್ದಾಳೆ. ಈ ವೇಳೆ 55 ವರ್ಷದ ವ್ಯಕ್ತಿ ಮತ್ತು ಆತನ ವಯಸ್ಕ ಮಗ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಗೆ ಬೆಂಕಿ ಹಚ್ಚಿದ್ದಾರೆ.

ಗಂಭೀರವಾಗಿ ಸುಟ್ಟಗಾಯಗಳಿಂದ ನರಳಾಡುತ್ತಿದ್ದ ಮೂವತ್ತರ ಮಹಿಳೆಯನ್ನು ಸೀತಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಕೆಗೆ ಶೇ 30 ರಷ್ಟು ಸುಟ್ಟ ಗಾಯಗಳಾಗಿದ್ದು, ಅಪಾಯದಿಂದ ಹೊರಗುಳಿದಿದ್ದಾರೆ ಎಂದು ವೈದ್ಯರ ತಂಡ ಖಚಿತಪಡಿಸಿದೆ. ಈ ವೇಳೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಮತ್ತು ಈ ಬಗ್ಗೆ ವಿವರವಾದ ತನಿಖೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್.ಪಿ. ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights