ಕೊರೊನಾ ಉಲ್ಬಣ : ಒಡಿಶಾ ಮೇ 5 ರಿಂದ 14 ದಿನಗಳ ಲಾಕ್‌ಡೌನ್ ಘೋಷಣೆ!
ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಒಡಿಶಾ ಮೇ 5 ರಿಂದ 14 ದಿನಗಳ ಲಾಕ್‌ಡೌನ್ ಘೋಷಿಸಿದೆ.
ಭಾರತವು 4 ಲಕ್ಷ ಕೋವಿಡ್ -19 ಪ್ರಕರಣಗಳ ಒಂದೇ ದಿನದ ಏರಿಕೆಯೊಂದಿಗೆ ಜಾಗತಿಕ ದಾಖಲೆಯನ್ನು ಮುಟ್ಟುತ್ತಿದ್ದಂತೆ, ಕೊರೊನಾ ನಿಯಂತ್ರಿಸಲು ಹಲವಾರು ರಾಜ್ಯಗಳು ಲಾಕ್ ಡೌನ್ ಘೋಷಿಸಿವೆ. ಇದರಲ್ಲಿ ಕೋವಿಡ್ -19 ಉಲ್ಬಣದಿಂದಾಗಿ ಮೇ 5-19 ರಿಂದ ಒಡಿಶಾ ಸರ್ಕಾರ 14 ದಿನಗಳ ಲಾಕ್‌ಡೌನ್ ಘೋಷಿಸಿದೆ.
ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ 8,015 ಹೊಸ ಕೋವಿಡ್ -19 ಪ್ರಕರಣಗಳು, 5,634 ಚೇತರಿಕೆ ಮತ್ತು ಸಂಬಂಧಿತ 14 ಸಾವುಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಭಾನುವಾರ ತಿಳಿಸಿದೆ.
ಕೊರೋನವೈರಸ್ ಕಾಯಿಲೆ (ಕೋವಿಡ್ -19) ಹೆಚ್ಚುತ್ತಿರುವ ಮಧ್ಯೆ ಒಡಿಶಾ ಸರ್ಕಾರ ಮೇ 5 ರಿಂದ 19 ರವರೆಗೆ 14 ದಿನಗಳ ಲಾಕ್ ಡೌನ್ ಘೋಷಿಸಿದೆ.
ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,62,622 ಕ್ಕೆ ಏರಿದೆ, ಅದರಲ್ಲಿ 3,91,048 ಜನ ಚೇತರಿಸಿಕೊಂಡರೆ ಸೋಂಕಿನಿಂದ 2,068 ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳು 6,9453 ರಷ್ಟಿದೆ.
ರಾಜ್ಯ ಸರ್ಕಾರ ಈವರೆಗೆ ಒಟ್ಟು 1,01,80,678 ಮಾದರಿಗಳನ್ನು ಪರೀಕ್ಷಿಸಿದೆ. ಪ್ರತಿದಿನ 3 ರಿಂದ 4 ಲಕ್ಷ ಜನರಿಗೆ ಚುಚ್ಚುಮದ್ದನ್ನು ನೀಡುವ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ.