24 ಗಂಟೆಯಲ್ಲಿ 9,987 ಹೊಸ ಕೊರೊನಾ ಕೇಸ್ : 331 ಜನ ಬಲಿ – ಬೆಚ್ಚಿದ ಭಾರತ..!
ಭಾರತದಲ್ಲಿ ಕೊರೊನಾ ಕಾರ್ಮೋಡ ಎಲ್ಲೆಡೆ ವೇಗವಾಗಿ ಹರಡುತ್ತಿದ್ದು, ಅಮೇರಿಕದಂತೆ ದೇಶದ ಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.
ಹೌದು… ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 9987 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 331 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದಾರೆ. ಆ ಮೂಲಕ ಸೋಂಕಿತರ ಸಂಖ್ಯೆ 2,66,598ಲಕ್ಷಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ ಕೂಡ 7466ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟು ಸೋಂಕಿತರಲ್ಲಿ ಸಕ್ರಿಯ ಪ್ರಕರಣಗಳು 129917 ಜನರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 129215 ಮಂದಿ ಗುಣಮುಖರಾಗಿದ್ದಾರೆ. ಮುಂಬೈನಲ್ಲಿ ನಿನ್ನೆ ಒಂದೇ ದಿನ 1311 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಮಹಾನಗರದಲ್ಲಿ ಸೋಂಕಿತರ ಸಂಖ್ಯೆ 50085ಕ್ಕೆ ತಲುಪಿದೆ. ಜೊತೆಗೆ ಈವರೆಗೆ ನಗರದಲ್ಲಿ 1702 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮುಂಚುಣಿಯಲ್ಲಿದೆ.