ಕೊರೊನಾದಿಂದ ಗುಜರಾತ್ ಮಾಡೆಲ್ ಫೇಕ್ ಎಂಬುದು ಬಹಿರಂಗವಾಗಿದೆ: ರಾಹುಲ್ಗಾಂಧಿ
ನಿಯಂತ್ರಣಕ್ಕೆ ಬಾರದ ಕೊರೊನಾ ವೈರಸ್ ಸಂದರ್ಭದಲ್ಲಿ ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಕೊರೊನಾ ಸೋಂಕಿತರು ಗುಜರಾತ್ನಲ್ಲಿ ಪತ್ತೆಯಾಗುತ್ತಿದ್ದು, ಮರಣದರದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಹಾಗಾಗಿ ಗುಜರಾತ್ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಗುಜರಾತ್ ಮೊಡೆಲ್ ದೇಶದೆಲ್ಲೆಡೆ ಬಹಿರಂಗವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿನ ಕೋವಿಡ್ ಮರಣ ದರ ಕುರಿತಂತೆ ಬಿಬಿಸಿ ವರದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಗುಜರಾತ್ ಶೇ. 6. 25, ಮಹಾರಾಷ್ಟ್ರ- ಶೇ.3. 73, ರಾಜಸ್ಥಾನ ಶೇ. 2.32 ಪಂಜಾಬ್ ಶೇ. 2.17, ಪುದುಚೇರಿ ಶೇ. 1. 98, ಜಾರ್ಖಂಡ್ ಶೇ. 0.5, ಛತ್ತೀಸ್ ಗಢ ಶೇ. 0.35 ರಷ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರೂರು ಗುಜರಾತ್ ನಲ್ಲಿಯೇ ಅತಿ ಹೆಚ್ಚಿನ ಸಂಖ್ಯೆ ಸಾವಿನ ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಮಾದರಿಯು ಎಂಥಹದ್ದು ಎಂದು ದೇಶಾದ್ಯಂತ ಬಹಿರಂಗವಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
Covid19 mortality rate:
Gujarat: 6.25%
Maharashtra: 3.73%
Rajasthan: 2.32%
Punjab: 2.17%
Puducherry: 1.98%
Jharkhand: 0.5%
Chhattisgarh: 0.35%Gujarat Model exposed.https://t.co/ObbYi7oOoD
— Rahul Gandhi (@RahulGandhi) June 16, 2020
ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಗುಜರಾತ್ ನಲ್ಲಿ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ತಮಿಳುನಾಡು ಮತ್ತು ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ, ಮರಣ ಪ್ರಮಾಣ ಕಡಿಮೆಯಿದೆ. ಗುಜರಾತಿನಲ್ಲಿ ಪ್ರತಿದಿನ ಅಂದಾಜು 400 ಹೊಸ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ.