ನೆಪೊಟಿಸಮ್‌ಗೆ ಬ್ರೇಕ್‌ ಹಾಕಿದ ಪುನೀತ್‌; PRK ಸಿನಿಮಾದಲ್ಲಿ ಹೊಸಬರಿಗೆ ಅವಕಾಶ!

ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಭಾರತೀಯ ಚಿತ್ರರಂಗದಲ್ಲಿ ನೆಪೊಟಿಸಮ್‌ (ವಂಶಾಧಾರಿತ ಅವಕಾಶ) ಹೆಗ್ಗಿಲ್ಲದೆ ಸಾಗುತ್ತಿದೆ. ಅಂತಹ ನೆಪೊಟಿಸಮ್‌ಗೆ ಪುನೀತ್‌ ರಾಜ್‌ಕುಮಾರ್‌ ಬ್ರೇಕ್‌ ಹಾಕಿರುವುದು ವಿಶೇಷ.

ಚಿತ್ರರಂಗದಲ್ಲಿ ಒಬ್ಬರು ಬೆಳೆದರೆಂದರೆ, ಅವರ ಮಕ್ಕಳು, ಸಂಬಂಧಿಗಳಿಗೆ ಅವಕಾಶಗಳು ಬೇಕೇಬೇಕು. ಅವರಲ್ಲದೆ ಬೇರೆ ಯಾರು ಚಿತ್ರರಂಗದಲ್ಲಿ ಬೆಳೆಯಲು ಬಿಡುವುದಿಲ್ಲ. ಬೆಳೆಯಲು ಅವಕಾಶವನ್ನೂ ಕೊಡುವುದಿಲ್ಲ ಎಂಬುದು ಸಾಮಾನ್ಯವಾಗಿ ಹರಿದಾಡುತ್ತಿದೆ.

ಇಂತಹ ನೆಪೊಟಿಸಮ್‌ ಕಾರಣಕ್ಕಾಗಿಯೇ ಕನ್ನಡದಲ್ಲೂ ರಾಜ್‌ಕುಮಾರ್ ಮತ್ತು, ವಿಷ್ಣುವರ್ಧನ್‌ ನಡುವೆ ಶೀಲತ ಸಮರವಿತ್ತು ಎಂಬ ಗಾಸಿಪ್‌ ಇಂದಿಗೂ ಹರಿದಾಡುತ್ತಿದೆ. ಆದರೆ, ಅದು ಸಾಬೀತಾಗಿಲ್ಲ.

ಆದರೂ, ಚಿತ್ರರಂಗಲ್ಲಿ ತಮ್ಮ ಮಕ್ಕಳು ಬೆಳೆಯಬೇಕು ಎಂಬ ಕಾರಣಕ್ಕೆ ಹೊಸಬರಿಗೆ ಉತ್ತಮ ಸಿನಿಮಾಗಳು ದೊರೆಯಂತೆ ರಾಜಕೀಯ ಮಾಡುವ ಕುತಂತ್ರವಂತೂ ಇದ್ದೇ ಇರುತ್ತದೆ. ಅದರಲ್ಲೂ ತೆಲುಗು ಇಂಡಟ್ರಿ ಟಾಲಿವುಡ್‌ನಲ್ಲಂತೂ ವಂಶರಾಜಕಾರಣದ ರೀತಿಯಲ್ಲಿ ಸಿನಿಮಾದ ವಂಶಪರಂಪರೆಯೇ ಮುಂದುವರೆಯುತ್ತಿದೆ.

ಮೊನ್ನೆಯಷ್ಟೇ ಆತ್ಮಹತ್ಯೆಗೆ ಶರಣಾದ ನಟ ಸುಶಾಂತ್‌ ಸಿಂಗ್ ರಾಜಪುತ್‌ ಕೂಡ ಇಂತಹ ನೆಪೊಟಿಸಮ್‌ಗೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಳ್ಳೆಯ ಸಿನಿಮಾಗಳೊಂದಿಗೆ ಖ್ಯಾತಿ ಪಡೆಯುತ್ತಿದ್ದ ಸುಶಾಂತ್‌ರನ್ನು ಹಣಿಯಲು ಅವರಿಗೆ ಅವಕಾಶಗಳು ಸಿಗದೇ ಇರುವ ರೀತಿಯಲ್ಲಿ, ಅವಾರ್ಡ್‌ಗಳಿಗೆ ನಾಮಿನೇಟ್‌ ಮಾಡದಂತೆ, ಸಿನಿಮಾಗಳು ಥಿಯೇಟರ್‌ಗಳಲ್ಲಿ ಹೆಚ್ಚು ದಿನ ಪ್ರದರ್ಶನ ಕಾಣದ ರೀತಿಯಲ್ಲಿ ಸುಶಾಂತ್‌ಅವರಿಗೆ ಕಿರುಕುಳ ನೀಡಲಾಗಿತ್ತು ಎಂಬುದು ಜಗಜ್ಜಾಹೀರಾಗಿದೆ.

ಕನ್ನಡದಲ್ಲಿ ಈ ಮಟ್ಟಿಗಿನ ಧೊರಣೆಯುಳ್ಳ ನೆಪೊಟಿಸಮ್‌ ಇಲ್ಲದೇ ಇದ್ದರೂ,  ನೆಪೊಟಿಸಮ್ ಇಲ್ಲವೇ ಇಲ್ಲ ಎಂದು ಹೇಳಲಾಗುವುದಿಲ್ಲ. ರಾಜ್‌ಕುಮಾರ್, ರವಿಚಂದ್ರನ್, ಅಂಬರೀಶ್‌ ಸೇರಿದಂತೆ ಹಲವರು ತಮ್ಮ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಸಲು ಯತ್ನಿಸಿರುವುದು, ಬೆಳೆಸಿರುವುದನ್ನೂ ನಾವು ಕಾಣಬಹುದು,

ಇಂತಹ ನೆಪೊಟಿಸಮ್‌ ಕಾರಣದಿಂದಲೂ ಬೆಳೆದ ಪುನೀತ್‌ ಈಗ ವಂಶ ಪರಂಪರೆಯ ಸಿನಿಮಾ ಅವಕಾಶಗಳ ಬದಲಾಗಿ ಹೊಸಬರಿಗೆ ಅವಕಾಶ ನೀಡುವ ಮೂಲಕ ನೆಪೊಟಿಸಮ್‌ಗೆ ಬ್ರೇಕ್‌ ಹಾಕುವ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ.

ಪುನೀತ್ ರಾಜಕುಮಾರ್ ಅವರದು ಸಿನಿಮಾ ಕುಟುಂಬವಾಗಿದ್ದರಿಂದ ಸಿನಿಮಾ ರಂಗಕ್ಕೆ ಪ್ರವೇಶ ಸುಲಭವಾಗಿ ಸಿಕ್ಕಿತು. ತಮಗೆ ಸಿಕ್ಕ ಸುಲಭ ಅವಕಾಶ ಬೇರೆಯವರಿಗೆ ಸಿಗಬೇಕು ಎನ್ನುವ ಕಾರಣಕ್ಕೆ ತಮ್ಮ ಒಡೆತನದ ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಾಣವಾಗುತ್ತಿರುವ ಸಿನಿಮಾಗಳಲ್ಲಿ ಹೊಸಬರಿಗೆ, ಉತ್ಸಾಹಿಗಳಿಗೆ, ಸಿನಿಮಾ ಅಭಿನಯದಲ್ಲಿ ಆಸಕ್ತಿಯಿರುವವರಿಗೆ ಅವಕಾಶ ನೀಡುತ್ತಿದ್ದಾರೆ.

ಸದ್ಯ ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಾಣವಾಗುತ್ತಿರುವ O2 ಸಿನಿಮಾಗಳಲ್ಲಿ ಹೊಸಬರಿಗೆ ಅವಕಾಶ ನೀಡಲೆಂದು ಆಡಿಷನ್‌ಗೆ ಕರೆ ಮಾಡಿ ಕಲಾವಿದರನ್ನು ಆಯ್ಕೆ ಮಾಡಿರುವುದು ನೆಪೊಟಿಸಮ್‌ಗೆ ಬ್ರೇಕ್‌ ಹಾಕುವ ಮೊದಲ ಹೆಜ್ಜೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights