Good News : ನಿರ್ಭಯಾ ಅಪರಾಧಿಗಳಿಗೆ ನಾಳೆ ಬೆಳಿಗ್ಗೆ ಗಲ್ಲು ಫಿಕ್ಸ್…!

ಭಾರತದ ಇತಿಹಾಸದಲ್ಲಿ ತುಂಬಾ ನೆನಪಿನಲ್ಲಿ ಉಳಿಯುವಂತಹ ದಿನ ನಾಳೆ ಆಗಲಿದ್ದು, ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ನಾಳೆ ಬೆಳಿಗ್ಗೆ 5.30ಕ್ಕೆ ಗಲ್ಲು ನಿಗಧಿಯಾಗಿದೆ.

ನಿರ್ಭಯಾ ಅತ್ಯಾಚಾರಿಗಳು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇಂದಿಗೂ ಕ್ಷಮಾಧಾನ ಅರ್ಜಿ ಸಲ್ಲಿಸುವ ಮೂಲಕ ಸಾಕಷ್ಟು ಸಾಹಸ ಪಡುತ್ತಿದ್ದಾರೆ. ಹೀಗಾಗಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಗಲ್ಲು ಶಿಕ್ಷೆ ಮುಂದೂಡಲಾಗುತ್ತಿದೆ.  ಈ ಅಪರಾಧಿಗಳು ಸಲ್ಲಿಸಿದ ಕ್ಷಮಾಧಾನ ಅರ್ಜಿಯನ್ನ ತಿರಸ್ಕರಿಸಲಾಗುತ್ತಿದೆ.

ಅಕ್ಷಯ್, ಪವನ್, ಮುಖೇಶ್ ಸಿಂಗ್ , ವಿನಯ್ ಶರ್ಮಾಗಾಗಿ ನಿನ್ನೆಯಷ್ಟೇ ಗಲ್ಲು ಶಿಕ್ಷೆ ತಾಲೀಮು ನಡೆಸಲಾಗಿತ್ತು. ಕ್ಷಮಾಧಾನ ಅರ್ಜಿ ಕೂಡ ತಿರಸ್ಕಾರಗೊಂಡಿದೆ. 7 ವರ್ಷಗಳಿಂದ ನಡೆದ ಬೃಹತ್ ನಾಟಕಕ್ಕೆ ತೆರೆ ಬಿದ್ದಿದೆ.

ನಿರ್ಭಯಾ ಆರೋಪಿ, ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಹಿಂದೆ ಪ್ರಕರಣ ನಡೆದಾಗ ನಾನು ಬಾಲಾಪರಾಧಿಯಾಗಿದ್ದೆ. ಹೀಗಾಗಿ ನನ್ನ ಬಾಲಾಪರಾಧಿಯ ಹಕ್ಕುಗಳನ್ನು ನನಗೆ ಮರಳಿಸುವಂತೆ ಅಪರಾಧಿ ಪವನ್ ಗುಪ್ತಾ ಕೇಳಿದ್ದ. ಅಲ್ಲದೆ ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಕ್ಯುರೇಟಿವ್ ಅರ್ಜಿಯಲ್ಲಿ ಮನವಿ ಮಾಡಿದ್ದ. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ನಾಳೆಯೇ ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್ ಆದಂತೆ ಆಗಿದೆ. ಈ ಬಗ್ಗೆ ದೆಹಲಿಯ ಹೈಕೋರ್ಟ್ ನಲ್ಲಿರುವ ಅರ್ಜಿಯ ವಿಚಾರಣೆ ತೀರ್ವೊಂದು ಬಾಕಿ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಭಯಾ ತಾಯಿ ಆಶಾದೇವಿ, “3-4 ತಿಂಗಳಿಂದ ಗಲ್ಲು ತಡೆಗೆ ಪಾಟಿಯಾಲ ಹೌಸ್ ನಲ್ಲಿ ಯತ್ನ ನಡೆದಿತ್ತು. ನನ್ನ ಮಗಳ ಆತ್ಮಕ್ಕೆ ನಾಳೆ ಶಾಂತಿ ಸಿಗುತ್ತದೆ” ಎಂದು ದೆಹಲಿಯಲ್ಲಿ ಆಶಾದೇವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2012ರ ಡಿ. 16ರಂದು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್ಸಿನೊಳಗೆ ಈ ಪೈಶಾಚಿಕ ಕೃತ್ಯ ಎಸಗಿ ಆಕೆಯನ್ನು ತೀರಾ ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಸ್ಸಿನಿಂದ ಹೊರ ಎಸೆದುಹೋಗಿದ್ದರು. ಬಹು ಅಂಗಾಂಗ ವೈಫಲ್ಯಗೊಂಡು ಈ ವಿದ್ಯಾರ್ಥಿನಿಯ ಕೆಲ ದಿನಗಳ ಬಳಿಕ ಅಸು ನೀಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದ. ರಾಮ್ ಸಿಂಗ್ ಎಂಬ ಮತ್ತೊಬ್ಬ ಆರೋಪಿ ತಿಹಾರ್ ಜೈಲಿನ ಕೋಣೆಯಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights