ಭಾರತದಲ್ಲಿ ಏರುತ್ತಿದೆ ಕೊರೊನಾ ಆಕ್ರಮಣ; ಒಂದೇ ದಿನ 14,933 ಪ್ರಕರಣ!

ದೇಶದಲ್ಲಿ ಕೊರೊನಾ ವೈರಸ್‌ ತನಗೆ ತಾನೇ ಎದುರಾಳಿ ಎಂಬಂತೆ ಪೈಪೋಟಿಗೆ ಇಳಿದಂದಿದೆ. ದಿನ ಕಳೆದಂತೆ ಸೋಂಕಿತರ ದಾಖಲೆಯ ಪ್ರಮಾಣ ಏರುತ್ತಲೇ ಇದೆ. ನಿನ್ನೆ (ಮಂಗಳವಾರ) ಒಂದೇ ದಿನ 14,933 ಮಂದಿ ಕೊರೊನಾಗೆ ಒಳಗಾಗಿರುವುವು ದೃಢಪಟ್ಟಿದೆ. ಇಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 4,40,215ಕ್ಕೆ ಏರಿದೆ.

ಕೊರೊನಾ ಸೋಂಕಿಗೆ ಒಳಗಾಗಿದ್ದವರಲ್ಲಿ ಮಂಗಳವಾರ 312 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಮೃತರ ಸಂಖ್ಯೆ 14,933ಕ್ಕೆ ತಲುಪಿದೆ.

ದೇಶದಲ್ಲಿ ಇದೂವರೆಗೂ ಪತ್ತೆಯಾಗಿರುವ 4,40,215 ಮಂದಿ ಸೋಂಕಿತರ ಪೈಕಿ 2,48,190 ಮಂದಿ ಸೋಂಕಿತರು ಗುಣಮುಖರಾಗಿದ್ದು, 1,78,014 ಮಂದಿ ಇನ್ನು ಸೋಂಕಿನಿಂದ ಬಳಲುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಸತತ 11 ದಿನಗಳಿಂದ 10ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಜೂ.1ರಿಂದ ಜೂ.21ರ ಅವಧಿಯಲ್ಲಿ 2,31,747 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights