ದೆಹಲಿಯಲ್ಲೀಗ ಅಮಿತ್ ಶಾ ಮಾಡೆಲ್ ಮತ್ತು ಕೇಜ್ರಿವಾಲ್ ಮಾಡೆಲ್! ಏನಿದು ದ್ವಂದ್ವ?

ದೆಹಲಿಯ ಕೊರೊನಾ ಸೋಂಕಿತರು ಪರೀಕ್ಷೆಗಾಗಿ ಮತ್ತು ಸಂಪರ್ಕತಡೆಗಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದೊಯ್ಯಬೇಕೆಂದು ಕೇಳಬಾರದು ಎಂದು ದೆಹಲಿ ಸರ್ಕಾರ ಹೇಳಿದ್ದು, ಕೇಂದ್ರ ಸರ್ಕಾರ ಹೊಸ ನಿಯಮಾವಳಿಯಗಳು ವಿರುದ್ಧದ ಪ್ರತಿಭಟನೆಯನ್ನು ಸೂಚಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದು, ಇತ್ತೀಚೆಗೆ ಜಾರಿಮಾಡಿರುವ ಆರೋಗ್ಯ ಮೂಲ ಸೌಕರ್ಯಗಳ ಮೇಲೆ ಹೊರೆಯಾಗುವಂತಹ ಹೊಸ ನಿಯಮಾವಳಿಗಳನ್ನು ಹಿಂಪಡೆಯಬೇಕು ಎಂದು ಕೇಳಿದ್ದಾರೆ.

ಇಂದು ದೆಹಲಿಯಲ್ಲಿ ಎರಡು ರೀತಿಯ ಕೊರೊನಾ ಮಾದರಿಗಳಿವೆ – ಒಂದು ಅಮಿತ್ ಶಾ ಮಾದರಿ, ಇದು ಕೊರೊನಾ ಸೋಂಕಿತರು ಕ್ವಾರಂಟೈನ್‌ ಕೇಂದ್ರಗಳಲ್ಲಿ ಸಂಪರ್ಕ ತಡೆಗೆ ಒಳಗಾಗಬೇಕು ಎಂದು ಹೇಳುತ್ತಿದೆ. ಮತ್ತೊಂದು ಕೇಜ್ರಿವಾಲ್ ಮಾದರಿ, ಇದು ಆರೋಗ್ಯ ತಂಡವೊಂದು ರೋಗಿಯ ಮನೆಗೆ ಭೇಟಿ ನೀಡಿ ಕೊರೊನಾ ಪ್ರಕರಣದ ತೀವ್ರತೆಯನ್ನು ಪರೀಕ್ಷಿಸುತ್ತದೆ ಎಂದು ಹೇಳುತ್ತದೆ” ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

No Community Spread in Delhi as of Now, Says Sisodia; Predicts 5.5 ...

“ಇದು ‘ನಿಮ್ಮ ಮಾದರಿ ಮತ್ತು ನನ್ನ ಮಾದರಿ’ ನಡುವಿನ ಹೋರಾಟವಲ್ಲ. ಜನರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಿ ಅನುಕೂಲವನ್ನು ಹೆಚ್ಚಿಸಬೇಕಾದ ಸಂದರ್ಭ” ಎಂದು ಅಮಿತ್‌ ಶಾ ಅವರಿಗೆ ಹೇಳಿದ್ದೇನೆ ಎಂದು ಸಿಸೋಡಿಯಾ ಹೇಳಿದರು.

ದೆಹಲಿಯು ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಎರಡನೇ ರಾಜ್ಯವಾಗಿದೆ. ಮಂಗಳವಾರ, ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 4,000 ಹೊಸ ಸೋಂಕಿತರು ಪತ್ತೆಯಾಗಿದ್ದು,  66,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

“ದೆಹಲಿಯಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ನಿಮ್ಮ ಸಹಾಯಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಆದರೆ, ರೋಗಿಗಳಲ್ಲಿ ಗೊಂದಲ ಉಂಟುಮಾಡಿರುವ ವಿಚಾರರವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ದೆಹಲಿಯಲ್ಲಿ ಪ್ರತಿದಿನ ಸುಮಾರು 3,000 ದಿಂದ 4,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವಾಗ, ಎಲ್ಲಾ ರೋಗಿಗಳನ್ನು ಪ್ರತ್ಯೇಕ ಕೇಂದ್ರಗಳಿಗೆ ಕರೆದೊಯ್ಯಲು ದೆಹಲಿ ಸರ್ಕಾರವು ಆಂಬುಲೆನ್ಸ್‌ಗಳನ್ನು ಹೇಗೆ ವ್ಯವಸ್ಥೆ ಮಾಡಲು ಸಾಧ್ಯ? ಎಂದು ಅಮಿತ್‌ ಷಾ ಅವರಿಗೆ ಸಿಸೋಡಿಯಾ ಪತ್ರ ಬರೆಬಿದ್ದಾರೆ.

Only 110 out of 265 CATS ambulances in Delhi have basic facilities ...

“ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಕಂಟೈನ್‌ಮೆಂಟ್‌ ಜೋನ್‌ಗಳ ನಿರ್ವಹಣೆ ಸೇರಿದಂತೆ ಈಗಾಗಲೇ ಆರೋಗ್ಯ ಮೂಲಸೌಕರ್ಯಗಳ ಮೇಲೆ ಹೊರೆಯನ್ನು ಹೆಚ್ಚಿಸಿದೆ. ಈಗ, ಕ್ವಾರಂಟೈನ್‌ ಕೇಂದ್ರಗಳ ಹೊರೆಯನ್ನೂ ಹೇರುತ್ತಿದ್ದೀರಿ. ಇದಕ್ಕಾಗಿ ಸೋಂಕಿತರ ದೀರ್ಘ ಸರತಿ ಸಾಲುಗಳು ಎದುರಾಗಬಹುದು. ಹೊಸ ವ್ಯವಸ್ಥೆಯು ಅನೇಕ ಸವಾಲುಗಳನ್ನು ಸೃಷ್ಟಿಸುತ್ತದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ಐದು ದಿನಗಳ ಕಡ್ಡಾಯ ಕ್ಯಾರೆಂಟೈನ್ ನಿಯಮವನ್ನು ಹಿಂಪಡೆದ ರೀತಿಯಲ್ಲಿ, ಇತ್ತೀಚಿನ ಆದೇಶವನ್ನು ಸಹ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

“ದೆಹಲಿಯ ಹೋಂ ಕ್ವಾರಂಟೈನ್‌ ಯೋಜನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾದ ಅನೇಕ ರೋಗಿಗಳೊಂದಿಗೆ ನಾನು ವೈಯಕ್ತಿಕವಾಗಿ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಮತ್ತೆ ಗೊಂದಲವನ್ನುಂಟು ಮಾಡಬಾರದು ಎಂದು ನಾನು ಒತ್ತಾಯಿಸುತ್ತೇನೆ” ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಕಳೆದ ವಾರ, ದೆಹಲಿ ಸರ್ಕಾರದ ತೀವ್ರ ಪ್ರತಿಭಟನೆಯ ನಂತರ ಎಲ್ಲಾ ಕೊರೊನಾ ಸೋಂಕಿತರಿಗೆ ಐದು ದಿನಗಳ ಕಡ್ಡಾಯ ಕ್ವಾರಂಟೈನ್ ಆದೇಶವನ್ನು ಕೇಂದ್ರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್ ರದ್ದುಪಡಿಸಿದ್ದರು. ನಂತರ, ಆದೇಶವನ್ನು ಪರಿಷ್ಕೃತಗೊಳಿಸಿದ ಅವರು, ಎಲ್ಲಾ ಕೊರೊನಾ ರೋಗಿಗಳನ್ನು ಕೊರೊನಾ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ಸೂಚಿಸಿದ್ದರು.

ದೆಹಲಿಯ ಪರಿಸ್ಥಿತಿಯನ್ನು ” ಭಯಾನಕ ಮತ್ತು ಕರುಣಾಜನಕ” ಎಂದು ಸುಪ್ರೀಂ ಕೋರ್ಟ್ ಕರೆದ ನಂತರ ಕೊರೊನಾ ಸೋಂಕನ್ನು ನಿಭಾಯಿಸುವ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ವಾರ ಮೂರು ಬಾರಿ ಭೇಟಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights