ಶಿಕ್ಷಕಿಯರಿಗೆ ಆನ್‌ಲೈನ್‌ ಕ್ಲಾಸ್‌ನಲ್ಲೇ ಲೈಂಗಿಕ ಕಿರುಕುಳ: ದೂರು ದಾಖಲು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ  ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಲಾಕ್‌ಡೌನ್‌ ಸಡಿಲಿಕೆಯಾದ ನಂತರ ಇವುಗಳ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ, ಕೊರೊನಾ ಸೋಂಕಿನ ಆಕ್ರಮಣದಿಂದಾಗಿ ಶಾಲಾ-ಕಾಲೇಜುಗಳನ್ನು ತೆರೆಯದಿರಲು ನಿರ್ಧರಿಸಿದ್ದು, ಆನ್‌ಲೈನ್‌ ಕ್ಲಾಸ್‌ಗಳನ್ನು ಮಾಡಲಾಗುತ್ತಿದೆ. ಆದರೆ, ಇತ್ತೀಚೆಗೆ ಆನ್​ಲೈನ್ ಪಾಠ ಮಾಡುವ ಉಪನ್ಯಾಸಕಿಯರಿಗೆ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿ ಬಂದಿವೆ.

ವಿದ್ಯಾರ್ಥಿಗಳ ವಿದ್ಯಾಭ್ಯಾಸ ಉಪಯೋಗಕ್ಕಾಗಿ ಆನ್​ಲೈನ್ ತರಗತಿಗಳನ್ನು ಅನೇಕ ಕಾಲೇಜು ಮಂಡಳಿಗಳು ನಡೆಸುತ್ತಿವೆ. ಆದರೆ, ಈ ಆನ್‌ಲೈನ್ ಕ್ಲಾಸ್‌ಗಳಲ್ಲಿಯೇ ವಿದ್ಯಾರ್ಥಿಗಳು ಉಪನ್ಯಾಸಕಿಯರ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯಲ್ಲಿರೋ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಝೂಮ್ ಆ್ಯಪ್ ಮೂಲಕ ಆನ್​ಲೈನ್ ತರಗತಿ ನಡೆಸುತ್ತಿದ್ದ ವೈದ್ಯಕೀಯ ಉಪನ್ಯಾಸಕಿ ಬಳಿ ಯುವಕ ಅಸಭ್ಯ ವರ್ತನೆ ಮಾಡಿರುವ ಆರೋಪ ಕೇಳಿ ಬಂದಿದೆ. ಕ್ಲಾಸ್ ವೇಳೆ ಯುವಕ ಆ ಉಪನ್ಯಾಸಕಿಗೆ ಅಸಭ್ಯ ಲೈಂಗಿಕ ಪದ ಬಳಕೆ ಮಾಡಿದ್ದಾನೆ ಎಂದು ಕೇಳಿಬಂದಿದೆ.

ಸದ್ಯ ಜಿಗಣಿ ಪೋಲೀಸ್ ಠಾಣೆಯಲ್ಲಿ ಉಪನ್ಯಾಸಕಿ ದೂರು ನೀಡಿದ್ದು, ಎಫ್​ಐಆರ್ ದಾಖಲಾಗಿದೆ.

ಇದಷ್ಟೇ ಅಲ್ಲ, ರಾಜಧಾನಿಯಲ್ಲಿ ಆನ್​ಲೈನ್ ಫ್ರಾಡ್ ಹೆಚ್ಚಾಗಿದೆ. ಟ್ರಾವೆಲ್ ಆಫರ್, ಗಿಪ್ಟ್, ಪೋನ್ ಕಾಲ್ ಮೂಲಕ ಪಂಗನಾಮ ಹಾಕುತ್ತಿರುವ, ಬಣ್ಣ ಬಣ್ಣದ ಮಾತುಗಳಿಂದ ನಂಬಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.

ಇತ್ತೀಚೆಗೆ, ಜನವರಿ ತಿಂಗಳಲ್ಲಿ 321, ಫೆಬ್ರವರಿಯಲ್ಲಿ 480, ಮಾರ್ಚ್​ನಲ್ಲಿ 875, ಏಪ್ರಿಲ್​ನಲ್ಲಿ 425 ಮತ್ತು ಮೇ ತಿಂಗಳಲ್ಲಿ 822 ಸೈಬರ್ ಪ್ರಕರಣಗಳು ದಾಖಲಾಗಿದೆ. ಕಳೆದ ತಿಂಗಳೇ ಅತಿ ಹೆಚ್ಚು ಸೈಬರ್ ಅಪರಾಧ ನಡೆದಿರುವುದಾಗಿ ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights