ಬೆಂಗಳೂರು ಲಾಕ್‌ಡೌನ್‌ಗೆ ಶಾಸಕ ಒತ್ತಾಯ: ಸಿಎಂ ನಿರ್ಧಾರವೇನು?

ಕೊರೊನಾ ವೈರಸ್‌ ರಾಜ್ಯದಲ್ಲಿ ತನ್ನ ಆಕ್ರಮಣವನ್ನು ಮುಂದುವರೆಸಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸ್ಪೋಟಿಸುತ್ತಿದೆ. ಇದರಿಂದಾಗಿ ಬೆಂಗಳೂರಿನ ಜನರಷ್ಟೇ ಅಲ್ಲದೆ, ಶಾಸಕರಿಗೂ ಆತಂಕ ಶುರುವಾಗಿದೆ. ಹಾಗಾಗಿ ಬೆಂಗಳೂರು ನಗರವನ್ನು ಮತ್ತೆ ಲಾಕ್‌ಡೌನ್‌ ಮಾಡಬೇಕು ಎಂಬ ಅಭಿಪ್ರಾಯಕ್ಕೆ ಬೆಂಗಳೂರಿನ ಎಲ್ಲಾ ಪಕ್ಷಗಳ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಎಲ್ಲಾ ಶಾಸಕರ ಅಭಿಪ್ರಾಯ ಕೇಳಿರುವ ಸಿಎಂ ಯಡಿಯೂರಪ್ಪನವರು ನಾಳೆ ಸಚಿವ ಸಂಪುಟ ಸಭೆ ಕರೆದು ಹೆಚ್ಚಿನ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸರ್ಕಾರ ಏನೇ ಕ್ರಮ ಕೈಗೊಂಡರೂ ಬೆಂಗಳೂರಲ್ಲಿ ಮಾತ್ರ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿಲ್ಲ. ಜೊತೆಗೆ ಕೆಲ ಏರಿಯಾಗಳನ್ನು ಸೀಲ್ ಡೌನ್ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಈಗ ಶಾಸಕರೂ ಲಾಕ್‌ಡೌನ್‌ ಮಾಡಬೇಕೆಂಬ ಅಭಿಪ್ರಾಯಕ್ಕೆ ಬಂದಿರುವುದರಿಂದ ಲಾಕ್‌ಡೌನ್ ಮಾಡಬಹುದಾದ ಸಾದ್ಯತೆಗಳು ಹೆಚ್ಚಾಗಿವೆ.

ಬೆಂಗಳೂರಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿ ಸೇರಿದಂತೆ ಬಹುತೇಕ ಶಾಸಕರು ಲಾಕ್ ಡೌನ್ ಬಗ್ಗೆ ಒಲವು ತೋರಿದ್ದಾರೆ. ಶಾಸಕರ ಅಭಿಪ್ರಾಯದ ಬಗ್ಗೆ ಸಿಎಂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ನಾಳೆ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸಿಎಂ ಮುಂದಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights