ಲಡಾಖ್‌ ಘರ್ಷಣೆಯನ್ನಾಧರಿಸಿ ಸಿನಿಮಾ ಮಾಡಲು ಮುಂದಾದ ಬಾಲಿವುಡ್‌ ನಟ ಅಜಯ್ ದೇವಗನ್!

ಲಡಾಖ್‌ನಲ್ಲಿನ ಗಾಲ್ವಾನ್‌ ಕಣಿವೆಯಲ್ಲಿ ಉದ್ಭವಿಸಿರುವ ಭಾರತ ಮತ್ತು ಚೀನಾ ನಡುವಿನ ಸಂಗರ್ಷ, ಜೂನ್‌ 15ರಿಂದ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಈ ಸಂದರ್ಭದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಆಧರಿಸಿದ ಸಿನಿಮಾ ಮಾಡಲು ಬಾಲಿವುಡ್‌ ನಟ ಅಜಯ್‌ ದೇವಗನ್‌ ಮುಂದಾಗಿದ್ದಾರೆ.

ಈ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೀನಾದ ಸೈನಿಕರಿಗಾದ ಸಾವು ನೋವುಗಳನ್ನು ಅದು ವರದಿ ಮಾಡಿಲ್ಲ. ಈ ಕಥಾಹಂದರವನ್ನಿಟ್ಟುಕೊಂಡು ಅಜಯ್ ದೇವಗನ್ ರವರ ಬ್ಯಾನರ್ ಅಜಯ್ ದೇವ್‌ಗನ್ ಎಫ್‌ಫಿಲ್ಮ್ಸ್ – ಮತ್ತು ಸೆಲೆಕ್ಟ್ ಮೀಡಿಯಾ ಹೋಲ್ಡಿಂಗ್ಸ್ ಎಲ್‌ಎಲ್‌ಪಿ ಚಿತ್ರ ನಿರ್ಮಾಣ ಮಾಡಲಿವೆ ಎನ್ನಲಾಗಿದೆ.

ಭಾರತೀಯ ಸೈನಿಕರ ಶಕ್ತಿ ಮತ್ತು ಶೌರ್ಯವನ್ನು ಚಿತ್ರಿಸುವ ಎಲ್‌ಒಸಿ: ಕಾರ್ಗಿಲ್, ಟ್ಯಾಂಗೋ ಚಾರ್ಲಿ ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್ ಮುಂತಾದ  ಹಲವಾರು ಚಲನಚಿತ್ರಗಳನ್ನು ಅಜಯ್ ದೇವ್‌ಗನ್ ಮಾಡಿದ್ದಾರೆ. ಅವರ ಮುಂದಿನ ಭುಜ್: ದಿ ಪ್ರೈಡ್ ಆಫ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ನಾಶವಾದ ವಾಯುನೆಲೆಯನ್ನು ಪುನರ್ನಿರ್ಮಿಸಲು ಭಾರತೀಯ ವಾಯುಪಡೆಗೆ ಸಹಾಯ ಮಾಡಿದ 300 ಮಹಿಳೆಯರ ಕಥೆ. ಅಭಿಷೇಕ್ ದುಧೈಯಾ ನಿರ್ದೇಶನದ ಈ ಚಿತ್ರ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.

ಈ ನಡುವೆ ದೇವಗನ್‌ನ ಮತ್ತೊಂದು ಚಿತ್ರ ಮೈದಾನ್ ಸಹ ಚಿತ್ರಮಂದಿರಗಳ ಬದಲು ನೇರವಾಗಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಅಜಯ್ ಅವರ ಕ್ರೀಡೆಯ ಬಗೆಗಿನ ಚಿತ್ರ ಮೈದಾನ್ ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡದ ತರಬೇತುದಾರ ಮತ್ತು ವ್ಯವಸ್ಥಾಪಕ ಸೈಯದ್ ಅಬ್ದುಲ್ ರಹೀಮ್ ಅವರಿಂದ ಸ್ಫೂರ್ತಿ ಪಡೆದಿದೆ.


ಇದನ್ನೂ ಓದಿ: WATCH : ಲಡಾಖ್ ನಲ್ಲಿ ಭಾರತ – ಚೀನಾ ಸೈನಿಕರ ಜಟಾಪಟಿ , ವಿಡಿಯೋ ವೈರಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights