Fact Check: 2018ರ ವಿಡಿಯೋವನ್ನು ಪೆಟ್ರೋಲದ್‌ ಬೆಲೆ ಏರಿಕೆ ಖಂಡಿಸಿ ಪೆಟ್ರೋಲ್ ಬಂಕ್ ಧ್ವಂಸ ಎಂದು ಹಂಚಿಕೊಳ್ಳಲಾಗಿದೆ

ಪ್ರತಿನಿತ್ಯ ಏರುತ್ತಿರುವ ಪೆಟ್ರೋಲ್ ಮತ್ತು  ಡೀಸೆಲ್ ಬೆಲೆಗಳ ಬಗ್ಗೆ ಜನರು ತಮ್ಮ ಕೋಪವನ್ನು ತೋರಿಸುತ್ತಿದ್ದಾರೆ ಎಂದು ಹೇಳುವ,  ಅದಕ್ಕಾಗಿ ಪೆಟ್ರೋಲ್ ಪಂಪ್ ಅನ್ನು ಧ್ವಂಸಮಾಡುತ್ತಿದ್ದಾರೆ ಎಂದು ಹೇಳಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪ್ರತಿ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಿರುವುದರಿಂದ ಆಕ್ರೋಶಗೊಂಡ ಜನರು ಪೆಟ್ರೋಲ್ ಪಂಪ್ ಅನ್ನು ಧ್ವಂಸಮಾಡಿದ್ದಾರೆ.

ನಿಜಾಂಶ: ಈ ಘಟನೆಯು ಒರಿಸ್ಸಾದ ಪುರಿಯಲ್ಲಿ 2018 ರಲ್ಲಿ ನಡೆದಿದ್ದು. ಕಡಿಮೆ ಪೆಟ್ರೋಲ್ ಹಾಕಿ ಮೋಸ ಮಾಡುತ್ತಿದ್ದಾರೆಂದು ಆರೋಪಿಸಿ ಜನರು ಪೆಟ್ರೋಲ್ ಪಂಪ್ ಧ್ವಂಸ ಮಾಡಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪು.

ವಿಡಿಯೋದ ತುಣಕುಗಳನ್ನು ಗೂಗಲ್ ನಲ್ಲಿ ರಿವರ್ಸ್ಸರ್ಚ್ ಮಾಡಿದಾಗ 2018ರಲ್ಲಿ ಪೋಸ್ಟ್ ಮಾಡಲಾದ ಹಲವು ವಿಡಿಯೋಗಳು ಕಾಣಸಿಗುತ್ತವೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ ಹಲವು ಮಾಧ್ಯಮ ವರದಿಗಳು ಕಂಡು ಬಂದಿವೆ. ಓರಿಸ್ಸಾ ಬೈಟ್ಸ್ ವರದಿಯ ಪ್ರಕಾರ ಈ ಘಟನೆಯು ಒರಿಸ್ಸಾದ ಪುರಿಯಲ್ಲಿ 2018 ರ ಸೆಪ್ಟಂಬರ್ 29 ರಂದು ನಡೆದಿದೆ. ಗ್ರಾಹಕರು ನೀಡಿದ ಹಣಕ್ಕೆ ಬದಲಾಗಿ ಕಡಿಮೆ ಪೆಟ್ರೋಲ್ ಹಾಕಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜನರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿದ್ದರು ಎಂದು ತಿಳಿಸಲಾಗಿದೆ.

ವರದಿಯ ಪ್ರಕಾರ, ಗ್ರಾಹಕನು ತಾನು ಪಾವತಿಸಿದ್ದಕ್ಕಿಂತ ಕಡಿಮೆ ಪೆಟ್ರೋಲ್ ಹಾಕುತ್ತಿದ್ದರು ಎಂದು ಪೆಟ್ರೋಲ್ ಪಂಪ್‌ ಸಿಬ್ಬಂದಿಗೆ ಆರೋಪಿಸಿದ್ದಾನೆ. ಇದು ವಾಗ್ವಾದಕ್ಕೆ ಕಾರಣವಾಗಿ ಅಂತಿಮವಾಗಿ ಸ್ಥಳೀಯರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿದ್ದಾರೆ. ಕೊನೆಗೆ ಪೊಲೀಸರು ಬಂದು ಪರಿಸ್ಥಿತಿಯನ್ನು ಶಾಂತಗೊಳಿಸುವ ಸಲುವಾಗಿ, ಜನಸಮೂಹವನ್ನು ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದರು ಎಂದು ತಿಳಿಸಲಾಗಿದೆ.

2018 ರಲ್ಲಿಯೂ ಸಹ ಇದೇ ವಿಡಿಯೋ ಹಲವು ತಪ್ಪು ಪ್ರತಿಪಾದನೆಗಳೊಂದಿಗೆ ವೈರಲ್ ಆಗಿತ್ತು. ಕುಂಭ್ರಪದ ಪೊಲೀಸರು ಗ್ರಾಹಕರಿಗೆ ಕಡಿಮೆ ಪೆಟ್ರೋಲ್ ಹಾಕಿ ಮೋಸ ಮಾಡುತ್ತಿದ್ದುದ್ದಕ್ಕೆ ಈ ದಾಳಿ ನಡೆದಿತ್ತು ಎಂದು ಫ್ಯಾಕ್ಟ್ ಚೆಕ್ ವೆಬ್‌ ಸೈಟ್‌  ಬೂಮ್‌ಗೆ ಸ್ಪಷ್ಟನೆ ನೀಡಿದ್ದರು.

ಒಟ್ಟಿನಲ್ಲಿ, 2018ರಲ್ಲಿ ನಡೆಯಲಾದ ಘಟನೆಯ ವಿಡಿಯೋವನ್ನು ಪ್ರಸ್ತುತ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಸಾರ್ವಜನಿಕರ ಆಕ್ರೋಶ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights