ಬೆಂಗಳೂರಿನಲ್ಲಿ ಮತ್ತೆ ಲಾಕ್‌ಡೌನ್‌ ಮುಂದುವೆಸುವ ಸಾಧ್ಯತೆ! ಯಡಿಯೂರಪ್ಪ ನಿರ್ಧಾರವೇನು!

ರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರದ ಮಟ್ಟಿಗೆ  ಚಾಲ್ತಿಯಲ್ಲಿರುವ ಲಾಕ್‌ಡೌನನ್ನು ಇನ್ನೂ ಒಂದು ವಾರ ವಿಸ್ಗತರಣೆ ಮಾಡುವಂತೆ ಬಿಬಿಎಂಪಿ ಮೇಯರ್‌ ಗೌತಮ್ ಕುಮಾರ್‌ ಅವರು ರಾಜ್ಯ ಸರ್ಕಾರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ತಡೆಗಾಗಿ ಮತ್ತಷ್ಟು ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿದೆ. ಹೆಚ್ಚು ತಯಾರಿ ಮಡಿಕೊಳ್ಳಲು ಮತ್ತಷ್ಟು ಸಮಯದ ಅಗತ್ಯವಿರುವುದರಂದಾಗಿ ಮತ್ತೊಂದು ವಾರ ಲಾಕ್‌ಡೌನ್‌ ವಿಸ್ತರಿಸುವ ಅನಿವಾರ್ಯತೆ ಇದೆ ಎಂದು ಗೌತಮ್‌ ಕುಮಾರ್ ತಿಳಿಸಿದ್ದಾರೆ.

ಒಂದು ವಾರದ ಲಾಕ್‌ಡೌನ್‌ ವಿಧಿಸಿದ ನಂತರವೂ ಹೊಸ ಸೋಂಕಿತರ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಈ ಸಂದರ್ಭದಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದರೆ, ಸೋಂಕಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದು ಕೊರೊನಾ ನಿಯಂತ್ರಣದ ತಯಾರಿಗೆ ಕಷ್ಟವಾಗುತ್ತದೆ. ಹಾಗಾಗಿ ಲಾಕ್‌ಡೌನ್‌ ವಿಸ್ತರಿಸುವುದು ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ಮೇಯರ್‌ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭಲ್ಲಿಯೂ ಕಾಣಿಸಿಕೊಳ್ಳದ ಮೇಯರ್‌ ಗೌತಮ್‌ ಕುಮಾರ್, ಇಂದು ಪ್ರತ್ಯಕ್ಷವಾಗಿರುವುದು ಹಾಗೂ ಲಾಕ್‌ಡೌನ್ ಬಗ್ಗೆ ಮಾತನಾಡಿರುವುದು ಅಧಿಕಾರಿಗಳಿಗೇ ಅಚ್ಚರಿ ಮೂಡಿಸಿದೆ.

ಅಲ್ಲದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರೂ ಕೂಡ ಬೆಂಗಳೂರಿನಲ್ಲಿ 15 ದಿನಗಳ ಮಟ್ಟಿಗೆ ಲಾಕ್‌ಡೌನ್‌ ವಿಸ್ತರಿಸುವಂತೆ ಆಗ್ರಹಿಸಿ ಟ್ವೀಟ್‌ ಮಾಡಿದ್ದಾರೆ.

ಈ ಮಧ್ಯೆ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಈಗಾಗಲೇ ಹೇಳಿದ್ದು, ಇನ್ನೂ ಲಾಕ್‌ಡೌನ್‌ ಅಂತ್ಯಗೊಳ್ಳಲು 05 ದಿನಗಳ ಸಮಯವಿದ್ದು, ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ನಿರೀಕ್ಷೆಯಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights