ಕೋವಿಡ್ ಲಸಿಕೆ ಪಡೆಯಲು ಆಂತಕ : ನದಿಗೆ ಹಾರಿ ಪಾರಾಗಲು ಗ್ರಾಮಸ್ಥರು ಯತ್ನ!

ಕೋವಿಡ್ ಲಸಿಕೆ ಪಡೆಯಲು ಆಂತಕಗೊಂಡ ಗ್ರಾಮಸ್ಥರು ನದಿಗೆ ಹಾರಿ ಪಾರಾಗಲು ಯತ್ನಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಸಿಕೆ ಪಡೆದ ನಂತರ ಉಂಟಾದ ವಿಲಕ್ಷಣ ಪ್ರಕರಣವೊಂದನ್ನು ಗಮನಿಸಿದ ಉತ್ತರ ಪ್ರದೇಶದ ಬರಾಬಂಕಿಯ ಗ್ರಾಮಸ್ಥರು ಲಸಿಕೆ ತಪ್ಪಿಸಲು ಸರಾಯು ನದಿಗೆ ಹಾರಿದ್ದಾರೆ. ಶನಿವಾರ ಈ ಘಟನೆ ನಡೆದಿದೆ ಎಂದು ರಾಮನಗರದ ತಹಸಿಲ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ವ್ಯಾಕ್ಸಿನೇಷನ್‌ನ ಮಹತ್ವ ಮತ್ತು ಪ್ರಯೋಜನಗಳನ್ನು ವಿವರಿಸಿ ಗ್ರಾಮದ ಕೇವಲ 14 ಜನರಿಗೆ ಲಸಿಕೆ ಕೊಡಿಸಿದರು. ಇವರಲ್ಲಿ ಕೆಲವರು ಇದು ಲಸಿಕೆ ಅಲ್ಲ, ವಿಷಕಾರಿ ಚುಚ್ಚುಮದ್ದು ಎಂದು ಹೇಳಿದ್ದರಿಂದ ತಾವು ನದಿಗೆ ಹಾರಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದೇಶವು ತೀವ್ರವಾದ ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಘಟನೆ ನಿಜಕ್ಕೂ ಆತಂಕವನ್ನುಟ್ಟಿಸಿದೆ.

11-44 ವರ್ಷ ವಯಸ್ಸಿನವರಿಗೆ ಮತ್ತು ಕೋವಿಡ್ ಹರಡುವಿಕೆಯನ್ನು ಕಡಿಮೆ ಮಾಡಲು ಲಸಿಕೆ ಪಡೆಯುವ ಅಗತ್ಯತೆ ಬಗ್ಗೆ ತಜ್ಞರು ಒತ್ತಿ ಹೋಗುತ್ತಿದ್ದಾರೆ. ಹೊಸ ಪ್ರಕರಣಗಳು ಕ್ಷೀಣಿಸುತ್ತಿರುವಾಗಲೂ ಭಾರತದಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೋವಿಡ್ ಹರಡುವಿಕೆಯು ಈಗ ಗ್ರಾಮೀಣ ಭಾರತವನ್ನು ತಲುಪಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights