ಒಂದೇ ದಿನ ಭಾರತದಲ್ಲಿ 75,760 ಕೊರೊನಾ ಕೇಸ್ : ಸಾವಿನ ಸಂಖ್ಯೆ 60,472 ಕ್ಕೇರಿಕೆ..

ಒಂದೇ ದಿನ ಭಾರತದಲ್ಲಿ 75,760 ಹೊಸ ಕೊರೊನಾ ಪ್ರಕರಣಗಳು ದಾಖಲಾದ ನಂತರ ಭಾರತದಲ್ಲಿ ಕೋವಿಡ್ -19 ಒಟ್ಟು ಸೋಂಕಿತರ ಸಂಖ್ಯೆ 3.3 ಮಿಲಿಯನ್ ದಾಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಒಟ್ಟು ಪ್ರಕರಣಗಳು 3,310,234 ಆಗಿದ್ದರೆ, ಸಾವಿನ ಸಂಖ್ಯೆ 60,472 ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 2,523,771 ಕ್ಕೆ ಏರಿದೆ.

ಜಾಗತಿಕವಾಗಿ ಇದುವರೆಗೆ 24 ದಶಲಕ್ಷಕ್ಕೂ ಹೆಚ್ಚು ಜನರು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಸಾವುನೋವುಗಳ ಸಂಖ್ಯೆ 824,368ರಷ್ಟಿದ್ದು, ಸೋಂಕಿತರ ಸಂಖ್ಯೆಯಲ್ಲಿ ಯುನೈಟೆಡ್ ಸ್ಟೇಟ್ ಬ್ರೆಜಿಲ್ ಮತ್ತು ಭಾರತ ನಂತರದ ಸ್ಥಾನದಲ್ಲಿದೆ.

ಕೋವಿಡ್ -19ದಿಂದಾದ ಲಾಕ್‌ಡೌನ್‌ಗಳು 12 ಕ್ಕೂ ಹೆಚ್ಚು ರಾಜ್ಯಗಳ ಹಣಕಾಸನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದೆ. ಇದರ ಪರಿಣಾಮವಾಗಿ ವೇತನ ಪಾವತಿ ವಿಳಂಬ ಮತ್ತು ಬಂಡವಾಳ ವೆಚ್ಚದ ಖರ್ಚಿನಲ್ಲಿ ತೀವ್ರ ಕಡಿತ ಉಂಟಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights