ರಾಜ್ಯ ಬಿಜೆಪಿ ಸರ್ಕಾರ ದಿವಾಳಿ: ಶಾಸಕರ ಅನುದಾನ ನೀಡಲೂ ಹಣವಿಲ್ಲ: ಎಂಬಿ ಪಾಟೀಲ್
ರಾಜ್ಯದ ಬಿಜೆಪಿ ಸರ್ಕಾರ ದಿವಾಳಿಯಾಗಿದ್ದು, ಶಾಸಕರಿಗೆ ಎಂಎಲ್ಎ ಅನುದಾನ ನೀಡುವುದಕ್ಕೂ ಸರ್ಕಾರದ ಬಳಿ ಹಣವಿಲ್ಲ. ಸರ್ಕಾರವು ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳುಗೆಡವಿದೆ ಎಂದು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್ ಆರೋಪಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಅತಿವೃಷ್ಟಿಯಾಗುತ್ತಿದೆ. ಈಗಾಗಲೇ ಕೆಲವು ಪ್ರದೇಶಗಳಿಗೂ ಸುರಿದ ಧಾರಕಾರ ಮಳೆಯಿಂದ ಹಾನಿಗೀಡಾಗಿವೆ. ಜನರು ರಸ್ತೆಗಳನ್ನು ದುರಸ್ತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ರಸ್ತೆಗಳ ಪುನಶ್ಚೇತನಕ್ಕೂ ಸರ್ಕಾರದ ಬಳಿ ಹಣವಿಲ್ಲ. ಹಿಂದಿನ ಸಮ್ಮಿ ಶ್ರ ಸರ್ಕಾರ ಮತ್ತು ಅದರ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿದ್ದ ಅನುದಾನಗಳನ್ನೂ ಬಿಜೆಪಿ ಸರ್ಕಾರ ತಡೆಹಿಡಿದೆ ಎಂದು ಎಂದು ಆರೋಪಿಸಿದ್ದಾರೆ.
ಕೊರೊನಾದಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಬೇರೆ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕೆಲವು ಮಹಾನುಭಾವರು ಉತ್ತರ ಕರ್ನಾಟಕದ ಭಾಗಕ್ಕೆ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ರೂಗಳ ಅನುದಾನ ತರುವುದಾಗಿ ಹೇಳಿದ್ದರು, ಇದೂವರೆಗೂ ಎಷ್ಟು ಅನುದಾನ ಬಂದಿದೆ ಎಂಬುದನ್ನು ನೋಡುತ್ತಿದ್ದೇವೆ. ಇದೆಲ್ಲವನ್ನೂ ಜನವರಿಯ ನಂತರ ಮಾತನಾಡುತ್ತೇನೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
Read Also: ಪ್ರವಾಹ ಪರಿಹಾರಕ್ಕೆ ಅಗತ್ಯ ನೆರವು ದೊರೆಯದೇ ಇರುವುದಕ್ಕೆ ಯುಪಿಎ ಸರ್ಕಾರದ ನೀತಿಗಳೇ ಕಾರಣ: ಆರ್ ಅಶೋಕ್

